ಕಮರಿದ ಧನರಾಜ್ ಕನಸು: ಬೆಂಕಿಗೆ ಆಹುತಿಯಾದ ಧನರಾಜ್ ಫೋಟೋಗಳು.!

ಹೆಸರಿನಲ್ಲಿ 'ಧನ' ಇದ್ದರೂ, ನಿಜ ಬದುಕಿನಲ್ಲಿ 'ಧನಲಕ್ಷ್ಮಿ' ಒಲಿದಿರಲಿಲ್ಲ. ಹೊಟ್ಟೆ ಪಾಡಿಗಾಗಿ ಧನರಾಜ್ ಮಾಡದ ಕೆಲಸಗಳೇ ಇಲ್ಲ. ಅದ್ಭುತವಾಗಿ ಮಿಮಿಕ್ರಿ ಮಾಡುವ ಪ್ರತಿಭೆ ಹೊಂದಿರುವ ಧನರಾಜ್ ವಾಯ್ಸ್ ಓವರ್ ಕಮ್ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದಾರೆ.

ನಟ ಆಗಬೇಕು ಎಂದುಕೊಂಡಿರುವ ಧನರಾಜ್ ಗೆ ಈವರೆಗೂ ಅವಕಾಶಗಳೇ ಸಿಕ್ಕಿಲ್ಲ. ಬ್ಯಾಡ್ ಲಕ್ ನಿಂದ ಹಲವು ಬಾರಿ ಸೋಲು ಅನುಭವಿಸಿರುವ ಧನರಾಜ್, 'ಬಿಗ್ ಬಾಸ್' ಮೂಲಕ ಭಾಗ್ಯದ ಲಕ್ಷ್ಮಿಯ ಕೃಪೆ ಸಿಗಬಹುದು ಎಂದು ನಿರೀಕ್ಷಿಸಿದ್ದರು.

''ತಮ್ಮಲ್ಲಿರುವ ಪ್ರತಿಭೆಯಿಂದ 'ಬಿಗ್ ಬಾಸ್' ಗೆಲ್ಲುವೆ'' ಎಂಬ ಆತ್ಮವಿಶ್ವಾಸದಿಂದ 'ದೊಡ್ಮನೆ'ಯೊಳಗೆ ಧನರಾಜ್ ಕಾಲಿಟ್ಟಿದ್ದರು. ಆದ್ರೀಗ, 'ಬಿಗ್ ಬಾಸ್' ಗೆಲ್ಲುವ ಧನರಾಜ್ ಕನಸು ನುಚ್ಚುನೂರಾಗಿದೆ. ಧನರಾಜ್ ಫೋಟೋಗಳು ಬೆಂಕಿಗೆ ಆಹುತಿಯಾದಂತೆ ಅವರ ಆಸೆಗಳು ಕೂಡ ಕಮರಿ ಹೋಗಿದೆ. ಮುಂದೆ ಓದಿರಿ...

ಇಲ್ಲೂ ಬ್ಯಾಡ್ ಲಕ್.!

ಇಲ್ಲೂ ಬ್ಯಾಡ್ ಲಕ್.!

'ಬಿಗ್ ಬಾಸ್' ಮನೆಯಿಂದ ತಮ್ಮ ಅದೃಷ್ಟ ಖುಲಾಯಿಸಬಹುದು ಎಂದು ಧನರಾಜ್ ಊಹಿಸಿದ್ದರು. ಆದ್ರೆ, ಇಲ್ಲೂ 'ಬ್ಯಾಡ್ ಲಕ್' ಧನರಾಜ್ ರನ್ನ ಫಾಲೋ ಮಾಡಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ, ಧನರಾಜ್ ಎಡವಿ ಬಿದ್ದಿದ್ದಾರೆ.

ಮಿಡ್ ನೈಟ್ ಎಲಿಮಿನೇಷನ್ ಶಾಕ್

ಮಿಡ್ ನೈಟ್ ಎಲಿಮಿನೇಷನ್ ಶಾಕ್

'ಬಿಗ್ ಬಾಸ್' ಮನೆಯಲ್ಲಿ ಭಾನುವಾರ ರಾತ್ರಿ ಎಲಿಮಿನೇಷನ್ ನಡೆಯಿತು. ಇದರಲ್ಲಿ 'ದೊಡ್ಮನೆ'ಯಿಂದ ಹೊರಬಂದವರು ಧನರಾಜ್. 'ಬಿಗ್ ಬಾಸ್' ಮನೆಯಲ್ಲಿ ಧನರಾಜ್ 'ಅಜಾತಶತ್ರು' ಆಗಿದ್ದರೂ, ಅವರೇ ಔಟ್ ಆಗಿರುವುದು ಮಾತ್ರ ಬೇಸರದ ಸಂಗತಿ.

ವೀಕ್ಷಕರ ಬೆಂಬಲ ಸಿಗಲಿಲ್ವಾ.?

ವೀಕ್ಷಕರ ಬೆಂಬಲ ಸಿಗಲಿಲ್ವಾ.?

ಕಳೆದ ಶನಿವಾರ 'ಬಿಗ್ ಬಾಸ್' ಮನೆಯಿಂದ ರಾಕೇಶ್ ಔಟ್ ಆದ್ಮೇಲೆ, ಉಳಿದ ಆರು ಮಂದಿ ನೇರವಾಗಿ ನಾಮಿನೇಟ್ ಆಗಿದ್ದರು. ನವೀನ್ ಸಜ್ಜು, ರಾಪಿಡ್ ರಶ್ಮಿ, ಕವಿತಾ, ಶಶಿ, ಧನರಾಜ್ ಮತ್ತು ಆಂಡಿ ಟಾಪ್ 5 ಹಂತ ತಲುಪಲು ವೀಕ್ಷಕರ ಬೆಂಬಲ ಅತ್ಯವಶ್ಯಕವಾಗಿತ್ತು. ಆರು ಮಂದಿ ಪೈಕಿ ಧನರಾಜ್ ಗೆ ಕಮ್ಮಿ ವೋಟ್ಸ್ ಲಭ್ಯವಾಗಿದೆ ಎಂದು ಅವರನ್ನ ಎಲಿಮಿನೇಟ್ ಮಾಡಲಾಗಿದೆ.

ಫೋಟೋಗಳಿಗೆ ಬೆಂಕಿ.!

ಫೋಟೋಗಳಿಗೆ ಬೆಂಕಿ.!

ವಾರ ವಾರವೂ ಎಲಿಮಿನೇಷನ್ ನಡೆದ ಹಾಗೆ, ಮಿಡ್ ನೈಟ್ ನಲ್ಲಿ ನಡೆಯಲಿಲ್ಲ. ವೀಕ್ಷಕರ ಮತಗಳೆಲ್ಲವೂ ಬಂದ ಮೇಲೆ, ಆರು ಸ್ಪರ್ಧಿಗಳನ್ನ ಗಾರ್ಡನ್ ಏರಿಯಾಗೆ ಕರೆಯಲಾಯಿತು. ಎಲ್ಲರ ಫೋಟೋಗಳನ್ನು ಎದುರಿಗೆ ಇರಿಸಲಾಗಿತ್ತು. ಯಾರ ಫೋಟೋ ಬೆಂಕಿಗೆ ಆಹುತಿ ಆಗುತ್ತದೋ, ಅವರು ಔಟ್ ಎಂದು 'ಬಿಗ್ ಬಾಸ್' ಘೋಷಿಸಿದರು. ಅದರಂತೆ, ಧನರಾಜ್ ಫೋಟೋಗೆ ಬೆಂಕಿ ಬಿತ್ತು. 'ಬಿಗ್ ಬಾಸ್' ಮನೆಯಿಂದ ಧನರಾಜ್ ಹೊರನಡೆದರು.

More from Filmibeat

English summary
Bigg Boss Kannada 6: Day 92: Mid night eviction, Dhanraj out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X