ಓಹೋ... ಸೋನು ಪಾಟೀಲ್ ಮೇಲೆ ರಾಕೇಶ್ ಗೆ ಕ್ರಷ್ ಆಗಿತ್ತಂತೆ.!
Recommended Video

''200 ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿರುವೆ'' ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ರಾಕೇಶ್, 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಪಾಂಡವಪುರ ಜೊತೆಗೆ ಅತಿ ಎನಿಸುವಷ್ಟು ಆತ್ಮೀಯವಾಗಿ ಇರುವುದನ್ನ ನೀವೆಲ್ಲ ನೋಡಿದ್ದೀರಾ.
ಅಕ್ಷತಾ ಪಾಂಡವಪುರ ಜೊತೆಗೆ Intense ಫ್ರೆಂಡ್ ಶಿಪ್ ಹೊಂದಿರುವ ರಾಕೇಶ್, 'ಉತ್ತರ ಕರ್ನಾಟಕದ ಹುಡುಗಿ' ಸೋನು ಪಾಟೀಲ್ ಬಳಿ ಹೋಗಿ, ''ನನಗೆ ನಿನ್ನ ಮೇಲೆ ಕ್ರಷ್ ಆಗಿದೆ'' ಅಂತ ಹೇಳಿದ್ರಂತೆ. ಹಾಗಂತ ಸ್ವತಃ ಸೋನು ಪಾಟೀಲ್, ಕಿಚ್ಚ ಸುದೀಪ್ ಮುಂದೆ ಹೇಳಿಕೊಂಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಅಕ್ಷತಾ ಮತ್ತು ರಾಕೇಶ್ ಕಂಡ್ರೆ ಸೋನು ಪಾಟೀಲ್ ಗೆ ಆಗ್ಬರಲ್ಲ. ''ಅಕ್ಷತಾನ ಉಳಿಸಿಕೊಳ್ಳಲು ರಾಕೇಶ್, ರಾಕೇಶ್ ನ ಉಳಿಸಿಕೊಳ್ಳಲು ಅಕ್ಷತಾ ಆ ಮನೆಯಲ್ಲಿ ಏನು ಬೇಕಾದರೂ ಮಾಡುತ್ತಾರೆ. ಹೀಗಾಗಿ, ಅವರಿಬ್ಬರನ್ನ ನೋಡಿದರೆ ನನಗೆ ಆಗಲ್ಲ'' ಎಂದಿದ್ದಾರೆ ಸೋನು ಪಾಟೀಲ್.
''ಪಕ್ಕಾ ಹೇಳ್ತೀನಿ.. ಬರೆದು ಕೊಡ್ತೀನಿ.. ಮುಂದಿನ ವಾರ ಗ್ಯಾರೆಂಟಿ ಅಕ್ಷತಾ ಔಟ್ ಆಗುತ್ತಾರೆ'' ಅಂತ ಸುದೀಪ್ ಮುಂದೆ ಸೋನು ಪಾಟೀಲ್ ಭವಿಷ್ಯ ನುಡಿದಿದ್ದಾರೆ.

ಕಾಕತಾಳೀಯ ಎಂಬಂತೆ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಅಕ್ಷತಾ ನಾಮಿನೇಟ್ ಆಗಿದ್ದಾರೆ. ಅಕ್ಷತಾಗೆ ವೋಟ್ ಮಾಡಿ ವೀಕ್ಷಕರು ಸೇಫ್ ಮಾಡುತ್ತಾರಾ.? ನೋಡೋಣ...


Click it and Unblock the Notifications











