'ಬಿಗ್ ಬಾಸ್' ಮನೆಯಿಂದ ಧನರಾಜ್ ಹೊರಬಂದಿದ್ದಕ್ಕೆ ಪ್ರಥಮ್ ಬೇಸರ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಗೆಲ್ಲುವ ಫೇವರಿಟ್ ಸ್ಪರ್ಧಿಯಾಗಿದ್ದವರು ಧನರಾಜ್. 'ಬಿಗ್ ಬಾಸ್' ಮನೆಯೊಳಗೆ ಧನರಾಜ್ ಗೆ ಯಾವ ಶತ್ರುಗಳು ಇರಲಿಲ್ಲ. ಹಾಗೇ, ಹೊರಗೂ ಹೇಟರ್ಸ್ ಇರಲಿಲ್ಲ.
ಮಾತಿನ ಮೇಲೆ ಹಿಡಿತ ಇಟ್ಟುಕೊಂಡು, 'ಬಿಗ್ ಬಾಸ್' ಕೊಟ್ಟ ಎಲ್ಲಾ ಚಟುವಟಿಕೆಗಳಲ್ಲೂ ಸಭ್ಯವಾಗಿ ಆಟ ಆಡಿದ ಧನರಾಜ್ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆಗೆ ಹೋಗಬೇಕು ಎಂಬುದು ವೀಕ್ಷಕರು ಇಚ್ಛೆ ಆಗಿತ್ತು.
ಆದ್ರೆ, ಫೈನಲ್ ಫೈವ್ ಹಂತಕ್ಕೆ ಹೋಗುವ ಮುನ್ನವೇ ಧನರಾಜ್ ಔಟ್ ಆಗ್ಬಿಟ್ಟರು. ಇದು ವೀಕ್ಷಕರಿಗೆ ಮಾತ್ರ ಅಲ್ಲ... 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿನ್ನರ್ 'ಒಳ್ಳೆ ಹುಡುಗ' ಪ್ರಥಮ್ ಗೂ ಬೇಸರ ತಂದಿದೆ. ಅದಕ್ಕೆ ಸಾಕ್ಷಿ ಈ ವಾಟ್ಸ್ ಆಪ್ ಸ್ಟೇಟಸ್.

ಅಸಮಾಧಾನ ಹೊರಹಾಕಿದ ಪ್ರಥಮ್
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ಧನರಾಜ್ ರನ್ನ ಕುಟುಂಬದವರು ಆತ್ಮೀಯವಾಗಿ ಬರಮಾಡಿಕೊಂಡು ಕೇಕ್ ಕಟ್ ಮಾಡಿದರು. ಆ ಫೋಟೋ ಜೊತೆಗೆ ''ಈ ಫೋಟೋ ನೋಡೋಕೆ ಎಷ್ಟು ಖುಷಿ ಆಗುತ್ತೋ, ಧನರಾಜ್ ಫೈನಲ್ ಲಿಸ್ಟ್ ನಲ್ಲಿ ಇಲ್ಲದೇ ಎಲಿಮಿನೇಟ್ ಆಗಿದ್ದು ವೈಯುಕ್ತಿಕವಾಗಿ ಬೇಸರವಾಯಿತು. ಅವರ ಮುಂದಿನ ಜೀವನ ಶುಭಕರವಾಗಿರಲಿ'' ಎನ್ನುವ ಮೂಲಕ ಪ್ರಥಮ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಅಂದು ಸೇಫ್ ಆಗಿದ್ದ ಧನರಾಜ್
ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪ್ರಥಮ್ ಇತ್ತೀಚೆಗಷ್ಟೇ ಎಂಟ್ರಿಕೊಟ್ಟಿದ್ದರು. ನಾಮಿನೇಷನ್ ನಿಂದ ಒಬ್ಬರನ್ನು ಬಚಾವ್ ಮಾಡುವ ಅಧಿಕಾರ ವಿಶೇಷ ಅತಿಥಿಗಳಿಗೆ ಸಿಕ್ಕಾಗ, ಧನರಾಜ್ ರನ್ನ ಒಮ್ಮತದಿಂದ ಸೇಫ್ ಮಾಡಲಾಯಿತು.

ಜೆಂಟಲ್ ಮ್ಯಾನ್ ಎಂದಿದ್ದ ಪ್ರಥಮ್
''ಧನರಾಜ್ ಚೆನ್ನಾಗಿ ಆಟ ಆಡುತ್ತಿದ್ದಾರೆ. ಅವರು ಜೆಂಟಲ್ ಮ್ಯಾನ್. ಫಿನಾಲೆ ವಾರಕ್ಕೆ ಹೋಗುವ ಅರ್ಹತೆ ಧನರಾಜ್ ಗಿದೆ'' ಎಂದು ಪ್ರಥಮ್ 'ಬಿಗ್ ಬಾಸ್' ಮನೆಯಲ್ಲೇ ಹೇಳಿದ್ದರು.

ಛೀಮಾರಿ ಹಾಕುತ್ತಿರುವ ವೀಕ್ಷಕರು
ಧನರಾಜ್ ರನ್ನ ಔಟ್ ಮಾಡಿದಕ್ಕೆ ವೀಕ್ಷಕರು ಕೂಡ 'ಬಿಗ್ ಬಾಸ್' ಮತ್ತು ಕಲರ್ಸ್ ಸೂಪರ್ ವಾಹಿನಿ ತಂಡಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕುತ್ತಿದ್ದಾರೆ.


Click it and Unblock the Notifications











