ರಾಕೇಶ್-ಅಕ್ಷತಾ ನಡುವೆ ಏನಿದೆ-ಏನಿಲ್ಲ.? ಗಾಸಿಪ್ ಗಳಿಗೆ ಸಿಕ್ಕ ಸ್ಪಷ್ಟನೆ ಇದು..
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಎಂ.ಜೆ.ರಾಕೇಶ್ ಹಾಗೂ ಅಕ್ಷತಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಮೊದಲ ವಾರವೇ ಕೇಳಿಬಂತು.
ರಾಕೇಶ್ ಗಾಗಿ ಅದಾಗಲೇ ಮದುವೆ ಆಗಿರುವ ಅಕ್ಷತಾ ವಿಚ್ಛೇದನ ಕೊಡಲು ಮುಂದಾಗಿದ್ದಾರೆ ಅಂತ 'ಬಿಗ್ ಬಾಸ್' ಸ್ಪರ್ಧಿಗಳೇ ಗುಸು ಗುಸು ಪಿಸು ಪಿಸು ಮಾತನಾಡಿಕೊಂಡಿದ್ದರು.
ಈ ಎಲ್ಲಾ ಗಾಸಿಪ್ ಗಳು ಕಿವಿಗೆ ಬಿದ್ದ ಮೇಲೆ, ತಮ್ಮ ಹಾಗೂ ಅಕ್ಷತಾ ನಡುವೆ ಏನಿದೆ, ಏನಿಲ್ಲ ಎಂಬುದನ್ನ ರಾಕೇಶ್ ಎಲ್ಲರ ಮುಂದೆ ಸ್ಪಷ್ಟ ಪಡಿಸಿದ್ದಾರೆ. ''ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಅಷ್ಟೇ'' ಎಂದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ರಾಕೇಶ್ ತಿಳಿಸಿದ್ದಾರೆ.
ಎಲ್ಲಾ ಗಾಸಿಪ್ ಗಳಿಗೆ ರಾಕೇಶ್ ಮತ್ತು ಅಕ್ಷತಾ ಕೊಟ್ಟಿರುವ ಸ್ಪಷ್ಟನೆ ಇಲ್ಲಿದೆ, ಓದಿರಿ...

ಎಲ್ಲರ ಸಮ್ಮುಖದಲ್ಲಿ ರಾಕೇಶ್ ಹೇಳಿದ್ದೇನು.?
''ಅಕ್ಷತಾ ಮತ್ತು ನನ್ನ ನಡುವೆ ಏನೋ ಇರಬಹುದು ಅಂತ ಅಂದುಕೊಂಡಿದ್ದೀರಾ... ಕ್ಲೋಸ್ ಆಗಿ ಮಾತನಾಡಲು ನಿಮ್ಮೆಲ್ಲರಿಗೂ ಒಬ್ಬೊಬ್ಬರು ಇರುತ್ತಾರೆ. ನನ್ನ ಕೇಸ್ ನಲ್ಲಿ ನಾನು ಕ್ಲೋಸ್ ಆಗಿ ಇರುವುದು ಅಕ್ಷತಾ ಜೊತೆ'' ಎಂದಿದ್ದಾರೆ ರಾಕೇಶ್

ಫ್ರೆಂಡ್ಸ್ ಅಷ್ಟೇ.!
''ನೀವು ತಪ್ಪು ತಿಳಿದುಕೊಂಡಿದ್ದರೆ, ನಾನು ಸ್ಪಷ್ಟನೆ ಕೊಡುವೆ... ದಯವಿಟ್ಟು ಆ ರೀತಿಯಲ್ಲಿ ನೀವು ನೋಡಬೇಡಿ. ಒಬ್ಬ ಹುಡುಗ ಮತ್ತು ಹುಡುಗಿ ಫ್ರೆಂಡ್ಸ್ ಆಗಿ ಇರಬಹುದು'' ಎಂದು ಕಣ್ಣೀರಿಟ್ಟಿದ್ದಾರೆ ರಾಕೇಶ್.

ರಾಕೇಶ್ ಜೊತೆಗೆ ಜಾಸ್ತಿ ಮಾತನಾಡುವೆ
''ನಾನು ಈ ಮನೆಯಲ್ಲಿ ಕಮ್ಫರ್ಟ್ ಝೋನ್ ನಲ್ಲಿ ಇರುವುದು ರಾಕೇಶ್ ಜೊತೆ. ನಾನು ಎಲ್ಲರ ಜೊತೆಗೂ ಮಾತನಾಡುವೆ. ಆದ್ರೆ, ರಾಕೇಶ್ ಜೊತೆಗೆ ಸ್ವಲ್ಪ ಜಾಸ್ತಿ ಮಾತನಾಡುವೆ ಅಷ್ಟೇ'' ಎಂದಿದ್ದಾರೆ ಅಕ್ಷತಾ

ಕಥೆ ಕಟ್ಟುವುದು ಬೇಡ
''ತುಂಬಾ ಮಾತುಗಳು ಬಂದಿವೆ. ಮಾತನಾಡಬೇಡಿ ಅಂತ ಹೇಳಲ್ಲ. ಮಾತನಾಡಿ.. ತಲೆ ಕೆಡಿಸಿಕೊಳ್ಳಲ್ಲ. ಆದ್ರೆ, ಎಲ್ಲರೂ ಎಲ್ಲರ ಜೊತೆಗೂ ಒಂದು ಬಾಂಡ್ ಇಟ್ಟುಕೊಂಡಿರ್ತಾರೆ. ಆದ್ರೆ, ಕಥೆ ಕಟ್ಟುವುದು ಬೇಡ. ರಾಕೇಶ್... ಐ ರಿಯಲಿ ಲವ್ ಯು.. ನೀನು ನಿಜವಾಗಿಯೂ ಒಳ್ಳೆಯ ಹುಡುಗ'' ಎಂದು ಕಣ್ಣೀರು ಸುರಿಸುತ್ತಾ ಹೇಳಿದರು ಅಕ್ಷತಾ.


Click it and Unblock the Notifications











