ಜಯಶ್ರೀಗೆ ಬೆಂಡೆತ್ತಿ ಬ್ರೇಕ್ ಹಾಕಿದ ರಾಪಿಡ್ ರಶ್ಮಿ
Recommended Video

'ಬಿಗ್ ಬಾಸ್' ಮನೆಯಲ್ಲಿ ಇಷ್ಟು ದಿನ ಯಾರ್ಯಾರ ಮೇಲೆ ಯಾರ್ಯಾರಿಗೆ ಅಸಮಾಧಾನ, ಕೋಪ, ಸಿಟ್ಟು ಇತ್ತೋ.. ಅದೆಲ್ಲವೂ ಇದೀಗ 'ಬಿಗ್ ಬಾಸ್' ಮನೆಯಲ್ಲಿ ಬ್ಲಾಸ್ಟ್ ಆಗಿದೆ. 'ಕಾಲ್ ಸೆಂಟರ್' ನೆಪದಲ್ಲಿ ಎಲ್ಲರೂ ತಮ್ಮ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ.
ಹೌದು.. ಇಲ್ಲಿಯವರೆಗೂ ಯಾರಿಗೆ ಯಾವ ಪ್ರಶ್ನೆ ಕೇಳಲು ಹಿಂಜರಿಕೆ ಇತ್ತೋ.. ಆ ಎಲ್ಲ ಪ್ರಶ್ನೆಗಳು 'ದೂರು'ಗಳ ನೆಪದಲ್ಲಿ 'ಬಿಗ್ ಬಾಸ್' ಮನೆಯಲ್ಲಿ ಹೊರಗೆ ಬಂದಿವೆ. ಎಲ್ಲರ ಮುಖವಾಡವೂ ಬಟಾ ಬಯಲಾಗಿದೆ.
ಅದರಲ್ಲೂ, ರಶ್ಮಿಗೆ ಜಯಶ್ರೀ ಮೇಲೆ ಎಷ್ಟು ಮುನಿಸು ಇತ್ತೋ.. ಎಲ್ಲವನ್ನೂ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ರಶ್ಮಿ ವಾಪಸ್ ಕೊಟ್ಟಿದ್ದಾರೆ. ಅತ್ತ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕುಳಿತಿದ್ದ ಜಯಶ್ರೀ, ಸಮಾಧಾನದಿಂದ ಉತ್ತರ ಕೊಡಬೇಕಾದ ಕಾರಣ ಯುದ್ಧ-ಸಮರ ನಡೆಯಲಿಲ್ಲ. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್
'ಬಿಗ್ ಬಾಸ್ ಕಾಲ್ ಸೆಂಟರ್' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಈ ವಾರ ನೀಡಲಾಗಿತ್ತು. ಇದರಲ್ಲಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ಮೊದಲ ಸುತ್ತಿನಲ್ಲಿ ಕವಿತಾ, ಜಯಶ್ರೀ, ಶಶಿ, ಧನರಾಜ್, ನಯನ ಮತ್ತು ಸೋನು ಗ್ರಾಹಕ ಸೇವಾ ಪ್ರತಿನಿಧಿಗಳ ಕಾರ್ಯ ನಿರ್ವಹಿಸಬೇಕಿತ್ತು. ಇನ್ನೂ ರಶ್ಮಿ, ರಾಕೇಶ್, ಅಕ್ಷತಾ, ಆನಂದ್, ನವೀನ್, ಆಂಡ್ರ್ಯೂ ಗ್ರಾಹಕರಾಗಿ ಕರೆ ಮಾಡಬೇಕಿತ್ತು. ಟಾಸ್ಕ್ ನ ಸಂಚಾಲಕರಾಗಿ ಮುರಳಿ ಇದ್ದರು. ಗ್ರಾಹಕರು ಕರೆ ಮಾಡಿ ತಮ್ಮ ದೂರುಗಳು ಅಥವಾ ಯಾವುದೇ ಪ್ರಶ್ನೆಗಳನ್ನು ಕೇಳಬಹುದಿತ್ತು. 'ಬಿಗ್ ಬಾಸ್' ಮನೆಯೊಳಗೆ ನಡೆದಿರುವ ಅಥವಾ ಗ್ರಾಹಕ ಸೇವಾ ಪ್ರತಿನಿಧಿಯ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಲು 'ಬಿಗ್ ಬಾಸ್' ಅವಕಾಶ ಕಲ್ಪಿಸಿದ್ದರು. ಗ್ರಾಹಕರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಗ್ರಾಹಕ ಸೇವಾ ಸಿಬ್ಬಂದಿ ಸಮಾಧಾನದಿಂದ ಉತ್ತರಿಸಬೇಕಿತ್ತು.

ಗ್ರಾಹಕ ಸೇವಾ ಪ್ರತಿನಿಧಿಯಾಗಿ ಜಯಶ್ರೀ
ಗ್ರಾಹಕ ಸೇವಾ ಪ್ರತಿನಿಧಿಯಾಗಿ ಜಯಶ್ರೀ ಇದ್ದಾಗ, ಆಕೆಗೆ ರಶ್ಮಿ, ಅಕ್ಷತಾ ಮತ್ತು ರಾಕೇಶ್ ಕರೆ ಮಾಡಿ ದೂರು ಹೇಳಿದರು.

ಕಾಲೆಳೆದ ರಶ್ಮಿ
ಗ್ರಾಹಕ ಸೇವಾ ಪ್ರತಿನಿಧಿ ಜಯಶ್ರೀಗೆ ಕರೆ ಮಾಡಿ... ''ಓ.. ರಿಮೋಟ್ ಕಂಟ್ರೋಲ್.. ಒಂದಷ್ಟು ಫ್ಲಾಪ್ ಸೀರಿಯಲ್ ಗಳಲ್ಲಿ ಅಭಿನಯಿಸಿ, ಈಗ ಅವಕಾಶ ಇಲ್ಲದೆ 'ಬಿಗ್ ಬಾಸ್' ಮನೆಗೆ ಬಂದಿದ್ದೀರಲ್ಲ... ನೀವೇ ಅಲ್ವಾ ಅದು..'' ಎನ್ನುತ್ತಾ ಜಯಶ್ರೀ ಬಗ್ಗೆ ರಶ್ಮಿ ಕಿಂಡಲ್ ಮಾಡಿದರು. ಅದಕ್ಕೆ, ''ನಾನು ಇಲ್ಲಿಯವರೆಗೂ ಮಾಡಿರುವುದೆಲ್ಲ ಹಿಟ್ ಸೀರಿಯಲ್'' ಅಂತ ಜಯಶ್ರೀ ಸಮಾಧಾನವಾಗಿಯೇ ಉತ್ತರಿಸಿದರು.

ತಾಯಿ ಹೃದಯ ಇಲ್ಲ.!
''ತಾಯಿಯಾಗಿ ತಾಯಿ ಹೃದಯ ಇಲ್ಲ ನಿಮಗೆ.. ಸೋನು ಹಾಲು ಕೇಳಿದಾಗ ಕೊಡಲಿಲ್ಲ'' ಅಂತ ರಶ್ಮಿ ಕೇಳಿದಾಗ, ''ತಪ್ಪು ಅನಿಸಿದರೆ ಕ್ಷಮೆ ಇರಲಿ'' ಎಂದು ಜಯಶ್ರೀ ಕ್ಷಮೆ ಕೇಳಿದರು.

ನಾಮಿನೇಷನ್ ಉಲ್ಲೇಖ.!
''ಬರ್ತಡೆ ಉಡುಗೊರೆ ನೆಪದಲ್ಲಿ ನಾಮಿನೇಷನ್ ನಿಂದ ಬಿಟ್ಟುಬಿಡು'' ಅಂತ ರಶ್ಮಿ ಬಳಿ ತಮಾಷೆಯಾಗಿ ಕೇಳಿದ್ದೆ ಅಂತ ಜಯಶ್ರೀ ಎಲ್ಲರ ಮುಂದೆ ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು, ''ನಾಮಿನೇಷನ್ ತಮಾಷೆ ವಿಷಯವೇ.? ಕನ್ಫೆಶನ್ ರೂಮ್ ತಮಾಷೆ ಮಾಡುವ ಜಾಗವೇ.?'' ಅಂತ ರಶ್ಮಿ ಜಯಶ್ರೀಗೆ ಬೆಂಡೆತ್ತಿದರು. ಆಗಲೂ ಜಯಶ್ರೀ ಕ್ಷಮೆ ಕೇಳಿದರು.

ಜಯಶ್ರೀಗೆ ಚಾನ್ಸ್ ಯಾಕೆ ಸಿಗುತ್ತಿಲ್ಲ.?
''ನೀವು ಡೈಲಾಗ್ ಅರ್ಥ ಮಾಡಿಕೊಳ್ಳಲ್ಲ. ಹೀಗಾಗಿ ನಿಮಗೆ ಹೊರಗಡೆ ಸೀರಿಯಲ್ ನಲ್ಲಿ ಚಾನ್ಸ್ ಸಿಗುತ್ತಿಲ್ಲ ಅನ್ಸುತ್ತೆ'' ಅಂತ ಜಯಶ್ರೀ ಕಾಲೆಳೆದರು ರಶ್ಮಿ.

ರೇಗಿಸಿದ ಅಕ್ಷತಾ
ಜಯಶ್ರೀ ಡಿಪ್ಲೋಮ್ಯಾಟಿಕ್ ಅಂತ ಪ್ರೂವ್ ಮಾಡಲು 'ಕಾಲ್ ಸೆಂಟರ್' ವೇದಿಕೆಯನ್ನ ಅಕ್ಷತಾ ಬಳಸಿಕೊಂಡರು. ಸಾಲದಕ್ಕೆ, ಜಯಶ್ರೀಗೆ 'ಆಂಟಿ.. ಮಮ್ಮಿ' ಅಂತೆಲ್ಲಾ ಕರೆದು ರೇಗಿಸಿದರು.

ದ್ವಂದ್ವ ನಿಲುವು
''ಮೊಟ್ಟೆ ತಿನ್ನಲ್ಲ ಅಂತೀರಾ. ಆದ್ರೆ, ಮೊಟ್ಟೆ ಹಾಕಿರುವ ಕೇಕ್ ತಿಂತೀರಾ. ಇದು ಡಬಲ್ ಸ್ಟಾಂಡರ್ಡ್ ಅಲ್ವಾ.?'' ಅಂತ ರಾಕೇಶ್ ಪ್ರಶ್ನೆ ಮಾಡಿದರು. ಇದನ್ನ ಒಪ್ಪಿಕೊಂಡು ಜಯಶ್ರೀ ಕ್ಷಮೆ ಕೇಳಿದರು.

ಅವಕಾಶಕ್ಕಾಗಿ ಕಾದ ಜಯಶ್ರೀ
ಗ್ರಾಹಕ ಸೇವಾ ಪ್ರತಿನಿಧಿಯಾಗಿ ಎಲ್ಲರಿಗೂ ಸಮಾಧಾನದಿಂದ ಉತ್ತರ ಕೊಟ್ಟ ಜಯಶ್ರೀ, ಮಾರನೇ ದಿನ ಗ್ರಾಹಕರಾಗಿ ರಾಕೇಶ್ ಗೆ ಸರಿಯಾಗಿ ಬಿಸಿ ಮುಟ್ಟಿಸಿದರು.


Click it and Unblock the Notifications











