ಎರಡು ಚಟುವಟಿಕೆಯಲ್ಲಿ ಸೋಲು: ಅವಕಾಶ ಸಿಗದ ರಶ್ಮಿಗೆ ಉರಿ ಉರಿ.!

ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿ ಆರಾಮಾಗಿ ಇದ್ದ ರಶ್ಮಿಗೆ ಕ್ಯಾಪ್ಟನ್ ಶಶಿ ಬಾತ್ ರೂಮ್ ಕ್ಲೀನಿಂಗ್ ಜವಾಬ್ದಾರಿ ವಹಿಸಿದಾಗಲೇ ಆಕೆಗೆ ಪಿತ್ತ ನೆತ್ತಿಗೇರಿತ್ತು. ''ಬಾತ್ ರೂಮ್ ಕ್ಲೀನ್ ಮಾಡಲು ಇಬ್ಬರ ಕೈಯಲ್ಲಿ ಆಗಲ್ಲ.. ಇನ್ನೊಬ್ಬರನ್ನ ಕೊಡಿ'' ಅಂತ ರಶ್ಮಿ ಕ್ಯಾತೆ ತೆಗೆದರು. ಇದಕ್ಕೆ ಶಶಿ ಬಗ್ಗಲಿಲ್ಲ.

ಸದ್ಯ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದೆ. ಲಕ್ಷುರಿ ಬಜೆಟ್ ಗಾಗಿ 'ಬಿಗ್ ಬಾಸ್' ಹಲವು ಚಟುವಟಿಕೆಗಳನ್ನು ನೀಡುತ್ತಿದ್ದಾರೆ. ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶ ರಶ್ಮಿಗೆ ಸಿಗಲಿಲ್ಲ.

ಅತ್ತ ಚಟುವಟಿಕೆಯಲ್ಲಿ ಎರಡು ಬಾರಿ ಭಾಗವಹಿಸುವ ಅವಕಾಶ ಕವಿತಾಗೆ ಸಿಕ್ತು. ಗ್ರೂಪಿಸಂ ನಿಂದಾಗಿ ಕವಿತಾಗೆ ಅವಕಾಶ ಸಿಗುತ್ತಿದೆ ಎನ್ನುತ್ತಾ ತಮ್ಮ ಅಸಮಾಧಾನವನ್ನು ರಶ್ಮಿ ಹೊರ ಹಾಕಿದರು.

ಇನ್ನೂ ಟಾಸ್ಕ್ ನಲ್ಲಿ ಅಡುಗೆ ಮನೆ ಡಿಪಾರ್ಟ್ಮೆಂಟ್ ನವರೇ ಪಾಲ್ಗೊಳ್ಳುತ್ತಿದ್ದ ಕಾರಣ, ಸರಿಯಾದ ಸಮಯಕ್ಕೆ ಅಡುಗೆ ಆಗಿಲ್ಲ ಎಂತಲೂ ರಶ್ಮಿ ಜಗಳಕ್ಕೆ ನಿಂತರು. ಮುಂದೆ ಓದಿರಿ...

'ಬಿಗ್ ಬಾಸ್' ಕೊಟ್ಟಿರುವ ಲಕ್ಷುರಿ ಬಜೆಟ್ ಟಾಸ್ಕ್ ಏನು.?

'ಬಿಗ್ ಬಾಸ್' ಕೊಟ್ಟಿರುವ ಲಕ್ಷುರಿ ಬಜೆಟ್ ಟಾಸ್ಕ್ ಏನು.?

ಈ ವಾರದ ಲಕ್ಷುರಿ ಬಜೆಟ್ ಗಾಗಿ 'ಹೆಣ್ಣಾಗು ಗಂಡಾಗೂ' ಟಾಸ್ಕ್ ನ 'ಬಿಗ್ ಬಾಸ್' ಕೊಟ್ಟಿದ್ದಾರೆ. ಈ ಟಾಸ್ಕ್ ನ ಮೊದಲ ಹಂತದ ಅನ್ವಯ ಗಂಡು ವೇಷದಲ್ಲಿ ಇರುವ ಇಬ್ಬರು ಹೆಣ್ಮಕ್ಕಳು ಮಣ್ಣು ತುಂಬಿದ ಚೀಲಗಳ ಬಂಡಿಯನ್ನು ಎಳೆಯಬೇಕಿತ್ತು. ನಿಗದಿತ ಸಮಯದಲ್ಲಿ ಚಟುವಟಿಕೆ ಪೂರ್ಣಗೊಳಿಸಲಿಲ್ಲ ಅಂದರೆ ಲಕ್ಷುರಿ ಬಜೆಟ್ ಪಾಯಿಂಟ್ ಕಡಿತಗೊಳ್ಳುತ್ತಿತ್ತು.

ನಾನು.. ನಾನು..

ನಾನು.. ನಾನು..

ಬಂಡಿಯನ್ನು ಎಳೆಯುವ ಚಟುವಟಿಕೆಯಲ್ಲಿ ಭಾಗವಹಿಸಲು ನಯನ, ಅಕ್ಷತಾ, ಕವಿತಾ ಮತ್ತು ರಶ್ಮಿ ನಾ ಮುಂದು ತಾ ಮುಂದು ಎನ್ನುತ್ತಿದ್ದರು. ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಎಲ್ಲರೂ ವೋಟ್ ಮಾಡುವ ಹಾಗೆ ಆಯ್ತು.

ರಶ್ಮಿಗೆ ಸಪೋರ್ಟ್ ಸಿಗಲಿಲ್ಲ.!

ರಶ್ಮಿಗೆ ಸಪೋರ್ಟ್ ಸಿಗಲಿಲ್ಲ.!

''ಲಕ್ಷುರಿ ಬಜೆಟ್ ಎಲ್ಲರಿಗೂ ಸಿಗುತ್ತದೆ. ಎಲ್ಲರೂ ವೋಟ್ ಮಾಡಲಿ'' ಅಂತ ಕವಿತಾ ಹೇಳಿದ್ಮೇಲೆ ಎಲ್ಲರೂ ಅವರವರಿಗೆ ಇಷ್ಟದ ಸ್ಪರ್ಧಿಗಳಿಗೆ ಮತ ಹಾಕಿದರು. ಇದರಲ್ಲಿ ನಯನ ಮತ್ತು ಕವಿತಾ ಆಯ್ಕೆ ಆದರು. ರಶ್ಮಿಗೆ ಕೇವಲ ಒಂದು ಮತ ಮಾತ್ರ ಬಿತ್ತು.

ಗ್ರೂಪಿಸಂ ಎಂದ ರಶ್ಮಿ

ಗ್ರೂಪಿಸಂ ಎಂದ ರಶ್ಮಿ

ಶಕ್ತಿ ಅವಶ್ಯಕ ಇರುವ ಟಾಸ್ಕ್ ನಲ್ಲಿ ಅರ್ಹ ಸ್ಪರ್ಧಿಗಳನ್ನು ಆಯ್ಕೆ ಮಾಡಬೇಕು. ಗ್ರೂಪಿಸಂ ನಿಂದಾಗಿ ನಯನ ಮತ್ತು ಕವಿತಾ ಸೆಲೆಕ್ಟ್ ಆದರು. ಗ್ರೂಪಿಸಂ ನಿಂದ ನನಗೆ ಯಾರೂ ಸಪೋರ್ಟ್ ಮಾಡಲಿಲ್ಲ ಅಂತ ರಶ್ಮಿ ಗೊಣಗಲು ಆರಂಭಿಸಿದರು.

ಟಾಸ್ಕ್ ನಲ್ಲಿ ಸೋತ ಕವಿತಾ-ನಯನ

ಟಾಸ್ಕ್ ನಲ್ಲಿ ಸೋತ ಕವಿತಾ-ನಯನ

ಮಣ್ಣಿನ ಚೀಲಗಳನ್ನು ಬದಲಾಯಿಸಿ ಬಂಡಿ ಎಳೆಯುವ ಟಾಸ್ಕ್ ನ ನಿಗದಿತ ಸಮಯದಲ್ಲಿ ನಯನ-ಕವಿತಾ ಪೂರ್ಣಗೊಳಿಸಲಿಲ್ಲ. ಇದು ರಶ್ಮಿಗೆ ಮತ್ತಷ್ಟು ಸಿಟ್ಟು ತರಿಸಿತು.

ಎರಡನೇ ಚಟುವಟಿಕೆಯಲ್ಲೂ ಆಯ್ಕೆ ಮಾಡಲಿಲ್ಲ.!

ಎರಡನೇ ಚಟುವಟಿಕೆಯಲ್ಲೂ ಆಯ್ಕೆ ಮಾಡಲಿಲ್ಲ.!

'ಬಿಗ್ ಬಾಸ್' ನೀಡಿದ್ದ ಒಗಟು ಪೂರ್ಣಗೊಳಿಸುವ ಟಾಸ್ಕ್ ಗೂ ರಶ್ಮಿಯನ್ನ ಯಾರೂ ಪರಿಗಣಿಸಲಿಲ್ಲ. ಚಟುವಟಿಕೆಯಲ್ಲಿ ಭಾಗವಹಿಸಲು ಕವಿತಾ ಮತ್ತು ಜಯಶ್ರೀ ಮುಂದೆ ಹೋದರು.

ಟಾಸ್ಕ್ ನಲ್ಲಿ ಸೋತ ಜಯಶ್ರೀ-ಕವಿತಾ

ಟಾಸ್ಕ್ ನಲ್ಲಿ ಸೋತ ಜಯಶ್ರೀ-ಕವಿತಾ

ನಿಗದಿತ ಸಮಯದಲ್ಲಿ ಜಯಶ್ರೀ ಮತ್ತು ಕವಿತಾ ಒಗಟು ಪೂರ್ಣಗೊಳಿಸಲಿಲ್ಲ. ಇದರಿಂದ ರೊಚ್ಚಿಗೆದ್ದ ರಶ್ಮಿ, ಅಡುಗೆ ಮನೆ ಮ್ಯಾಟರ್ ನ ಇಟ್ಟುಕೊಂಡು ಜಗಳಕ್ಕೆ ನಿಂತರು.

ಯಾರಿಗೂ ಇಲ್ಲದ ಪ್ರಾಬ್ಲಂ ರಶ್ಮಿಗೆ.!

ಯಾರಿಗೂ ಇಲ್ಲದ ಪ್ರಾಬ್ಲಂ ರಶ್ಮಿಗೆ.!

''ಯಾರಿಗೂ ಇಲ್ಲದ ಪ್ರಾಬ್ಲಂ ರಶ್ಮಿಗೆ ಇದೆ'' ಎನ್ನುತ್ತಾ ರಶ್ಮಿಗೆ ನಯನ ಟಾಂಗ್ ಕೊಟ್ಟರು. ಒಟ್ನಲ್ಲಿ ತಮ್ಮ ಸಿಟ್ಟನ್ನು ಹೊರಹಾಕಲು ರಶ್ಮಿ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುತ್ತಿದ್ದರು.

ಎರಡು ದಿನದಿಂದ ಕೆಲಸ ಮಾಡದ ರಶ್ಮಿ

ಎರಡು ದಿನದಿಂದ ಕೆಲಸ ಮಾಡದ ರಶ್ಮಿ

ಅಡುಗೆ ಮನೆ ಬಗ್ಗೆ ಬೆಟ್ಟು ಮಾಡಿ ತೋರಿಸುವ ರಶ್ಮಿ, ಎರಡು ದಿನಗಳಿಂದ ಬಾತ್ ರೂಮ್ ಕ್ಲೀನ್ ಮಾಡಿಲ್ವಂತೆ. ಸೋನು ಪಾಟೀಲ್ ಒಬ್ಬರೇ ಎರಡು ದಿನಗಳಿಂದ ಬಾತ್ ರೂಮ್ ತೊಳೆದಿದ್ದಾರಂತೆ. ತಮ್ಮ ಕೆಲಸವನ್ನೇ ಸರಿಯಾಗಿ ಮಾಡದ ರಶ್ಮಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯೇ ಎಂಬುದು ಶಶಿ ಪ್ರಶ್ನೆ. ಇದಕ್ಕೆ ನೀವೇನಂತೀರಿ.?

More from Filmibeat

English summary
Bigg Boss Kannada 6: Day 30: Rapid Rashmi gets annoyed with Housemates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X