ಅರೆರೇ.. ಜಯಶ್ರೀಗಾಗಿ ಹುಟ್ಟುಹಬ್ಬದ ಉಡುಗೊರೆ ಕೊಟ್ಟ ರಾಪಿಡ್ ರಶ್ಮಿ.!

Recommended Video

Bigg Boss Kannada Season 6 : ಜಯಶ್ರೀ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟ ರಾಪಿಡ್ ರಶ್ಮಿ | Oneindia Kannada

ಪಟಪಟ ಅಂತ ಮಾತನಾಡುವ ರಾಪಿಡ್ ರಶ್ಮಿ ಬಗ್ಗೆ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ನೆಗೆಟಿವ್ ಮಾತುಗಳೇ ಕೇಳಿಬಂದಿದ್ದವು. ಯಾಕಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ಮೊದಲ ಬಾರಿಗೆ ವಾಕ್ಸಮರಕ್ಕೆ ನಾಂದಿ ಹಾಡಿದ್ದು ಇದೇ ರಾಪಿಡ್ ರಶ್ಮಿ. ಅದೂ ನಟಿ ಜಯಶ್ರೀ ಜೊತೆಗೆ.!

ಮೊದಲ ವಾರದಿಂದಲೂ ಜಯಶ್ರೀ ಮತ್ತು ರಶ್ಮಿ ನಡುವೆ ಅಷ್ಟಕಷ್ಟೆ. ಇಬ್ಬರೂ ಹೆಚ್ಚು ಕಾಲ ಅಡುಗೆ ಮನೆಯಲ್ಲಿ ಇರುತ್ತಿದ್ದರೂ, ಅನ್ಯೋನ್ಯತೆ ಮಾತ್ರ ಮೂಡಿರಲಿಲ್ಲ.

ಮೊಟ್ಟೆ ವಿಷಯಕ್ಕೆ ರಾಪಿಡ್ ರಶ್ಮಿ ಮತ್ತು ಜಯಶ್ರೀ ನಡುವೆ ಆದ ಗಲಾಟೆ ಮರೆಯುವುದುಂಟಾ ಹೇಳಿ... ''ಹೊರಗಡೆ ಹೋದರೆ ಮೊಟ್ಟೆ ತೆಗೆದುಕೊಂಡು ಹೊಡೆಯುತ್ತಾರೆ'' ಅಂತ ಜಯಶ್ರೀಗೆ ರಾಪಿಡ್ ರಶ್ಮಿ ಹೇಳಿದ್ದರು. ಇದಕ್ಕೆ ರೊಚ್ಚಿಗೆದ್ದ ಜಯಶ್ರೀ, ''ನಿನಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ'' ಅಂತ ತಿರುಗೇಟು ಕೊಟ್ಟಿದ್ದರು.

ಇಬ್ಬರ ಮಧ್ಯೆ ಬೆಂಕಿ ಹೊತ್ತಿ ಉರಿಯುತ್ತಿದ್ದರೂ, ಜಯಶ್ರೀಗೆ ರಾಪಿಡ್ ರಶ್ಮಿ ಒಂದು ಉಡುಗೊರೆ ಕೊಟ್ಟಿದ್ದಾರೆ. ಅದೇನು ಅಂತೀರಾ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ನಾಮಿನೇಷನ್ ವೇಳೆ....

ನಾಮಿನೇಷನ್ ವೇಳೆ....

'ಬಿಗ್ ಬಾಸ್' ಮನೆಯಲ್ಲಿ ಇರಲು ಅರ್ಹರಲ್ಲದ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಪ್ರತಿ ಸ್ಪರ್ಧಿಯೂ ಪ್ರತಿ ವಾರ ತೆಗೆದುಕೊಳ್ಳಬೇಕು. ಇದೇ ನಾಮಿನೇಷನ್ ಪ್ರಕ್ರಿಯೆ. ಆದ್ರೆ, ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಅಷ್ಟು ಸುಲಭವಾಗಿ ನಡೆಯಲಿಲ್ಲ. ಜೋಡಿಗಳ ಅನುಗುಣವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು.

ಇಬ್ಬರಲ್ಲಿ ಒಬ್ಬರು ಸೇಫ್

ಇಬ್ಬರಲ್ಲಿ ಒಬ್ಬರು ಸೇಫ್

ಈ ಬಾರಿ ನಾಮಿನೇಷನ್ ಗಾಗಿ 'ಬಿಗ್ ಬಾಸ್' ಇಬ್ಬಿಬ್ಬರನ್ನು ಕನ್ಫೆಶನ್ ರೂಮ್ ಒಳಗೆ ಕರೆದರು. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸೇಫ್ ಆಗುವ ಅವಕಾಶವನ್ನು 'ಬಿಗ್ ಬಾಸ್' ನೀಡಿದರು.

ಜಯಶ್ರೀ-ರಶ್ಮಿ ಜೋಡಿ

ಜಯಶ್ರೀ-ರಶ್ಮಿ ಜೋಡಿ

ನಾಮಿನೇಷನ್ ಪ್ರಕ್ರಿಯೆಯ ಆರಂಭದಲ್ಲಿ ಮೊದಲು ಜಯಶ್ರೀ ಮತ್ತು ರಶ್ಮಿಯನ್ನ 'ಬಿಗ್ ಬಾಸ್' ಕನ್ಫೆಶನ್ ರೂಮ್ ಒಳಗೆ ಕರೆದರು. ಇಬ್ಬರಲ್ಲಿ ಒಬ್ಬರು ನಾಮಿನೇಟ್ ಆಗಬೇಕು ಎಂದಾಗ, ಜಯಶ್ರೀ ಹೇಳಿದ ಒಂದು ಮಾತಿಗೆ ರಶ್ಮಿ ನಾಮಿನೇಟ್ ಆಗಲು ಒಪ್ಪಿಕೊಂಡರು.

ಜಯಶ್ರೀಗೆ ಬರ್ತಡೇ ಗಿಫ್ಟ್ ಕೊಟ್ಟ ರಶ್ಮಿ

ಜಯಶ್ರೀಗೆ ಬರ್ತಡೇ ಗಿಫ್ಟ್ ಕೊಟ್ಟ ರಶ್ಮಿ

''ನಾನೇನೋ ಒಂದು ಪ್ರೆಸೆಂಟ್ ಕೇಳಿದರೆ ಕೊಡ್ತೀಯಾ.? ಶನಿವಾರ ನನ್ನ ಹುಟ್ಟುಹಬ್ಬ. ಗಿಫ್ಟ್ ಆಗಿ ನನ್ನ ಬಿಟ್ಟುಬಿಡು'' ಎಂದು ಜಯಶ್ರೀ ಕೇಳಿದರು. ಅದಕ್ಕೆ ದೂಸ್ರಾ ಮಾತನಾಡದೆ, ''ಈ ವಾರ ಜಯಶ್ರೀಗೆ ಸ್ಪೆಷಲ್ ಆಗಿರುವ ಕಾರಣ ನಾನು ಬಿಟ್ಟುಕೊಡುವೆ'' ಎನ್ನುತ್ತಾ ರಶ್ಮಿ ನಾಮಿನೇಟ್ ಆದರು.

ಅಚ್ಚರಿ ಅಂದ್ರೆ ಇದೇ ಅಲ್ವೇ.?

ಅಚ್ಚರಿ ಅಂದ್ರೆ ಇದೇ ಅಲ್ವೇ.?

ಒಂದು ವಾರದ ಹಿಂದೆಯಷ್ಟೇ ಇಬ್ಬರೂ ಕಚ್ಚಾಡಿಕೊಂಡಿದ್ದರು. ಇದೀಗ ನಾಮಿನೇಷನ್ ನಿಂದ ಸೇಫ್ ಆಗಲು ಇಬ್ಬರೂ ವಾಗ್ವಾದ ನಡೆಸುತ್ತಾರೆ ಅಂತಲೇ ವೀಕ್ಷಕರು ಭಾವಿಸಿದ್ದರು. ಆದ್ರೆ, ಕ್ಷಣಾರ್ಥದಲ್ಲಿ ಇಬ್ಬರೂ ನಿರ್ಧಾರ ತೆಗೆದುಕೊಂಡಿರುವುದು ವೀಕ್ಷಕರು ಅಚ್ಚರಿ ತಂದಿದೆ.

More from Filmibeat

English summary
Bigg Boss Kannada 6: Week 5: Rapid Rashmi gets nominated for Jayashree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X