'ಬಿಗ್ ಬಾಸ್ ಕನ್ನಡ-6': ಫಿನಾಲೆ ರೇಸ್ ನಿಂದ ರಾಪಿಡ್ ರಶ್ಮಿ ಹೊರಕ್ಕೆ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಗೆಲ್ಲಲು ಇನ್ನೊಂದೇ ಮೆಟ್ಟಿಲು ಬಾಕಿ ಇರುವಾಗ ಆರ್.ಜೆ ರಾಪಿಡ್ ರಶ್ಮಿ ಮುಗ್ಗರಿಸಿ ಬಿದ್ದಿದ್ದಾರೆ.
'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಫಿನಾಲೆ ದಿನ, ವೀಕ್ಷಕರಿಂದ ಅತಿ ಕಡಿಮೆ ವೋಟ್ಸ್ ಪಡೆದು ದೊಡ್ಮನೆಯ ನೀಲಿ ಬಾಗಿಲಿನಿಂದ ರಾಪಿಡ್ ರಶ್ಮಿ ಹೊರಗೆ ಬಂದಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ನೇರವಾಗಿ, ಖಾರವಾಗಿ ಇದ್ದವರು ರಾಪಿಡ್ ರಶ್ಮಿ. ಮಾತಿನ ಮಲ್ಲಿ ಆಗಿರುವ ರಾಪಿಡ್ ರಶ್ಮಿ 'ಬಿಗ್ ಬಾಸ್' ಮನೆಯಲ್ಲಿ ಹಲವು ಜಗಳ, ಗಲಾಟೆಗಳಿಗೆ ನಾಂದಿ ಹಾಡಿದ್ದರು, ಸಾಕ್ಷಿ ಆಗಿದ್ದರು.

'ಬಿಗ್ ಬಾಸ್' ಮನೆಯೊಳಗೆ ರಾಪಿಡ್ ರಶ್ಮಿ ಹೆಚ್ಚು ಆತ್ಮೀಯವಾಗಿ ಇದ್ದದ್ದು 'ಒಗ್ಗರಣೆ ಡಬ್ಬಿ' ಮುರಳಿ ಮತ್ತು ಸ್ನೇಹಾ ಜೊತೆಗೆ. ಇಬ್ಬರೂ ಔಟ್ ಆದ್ಮೇಲೆ ರಾಪಿಡ್ ರಶ್ಮಿ ಬಹುತೇಕ ಒಂಟಿ ಆಗಿದ್ದರು.
ರಾಪಿಡ್ ರಶ್ಮಿ ಜೊತೆಗೆ ಆಂಡ್ರ್ಯೂ, ನವೀನ್ ಸಜ್ಜು, ಕವಿತಾ ಗೌಡ ಮತ್ತು ಶಶಿ ಕುಮಾರ್ ಟಾಪ್ 5 ಹಂತ ತಲುಪಿದ್ದರು. ಐದು ಜನರ ಪೈಕಿ ರಾಪಿಡ್ ರಶ್ಮಿ ಮೊದಲು ಎಲಿಮಿನೇಟ್ ಆಗಿದ್ದಾರೆ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ವಿನ್ನರ್ ಯಾರು ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.


Click it and Unblock the Notifications











