ಕವಿತಾ ಮೇಲೆ ಪ್ರಶ್ನೆಗಳ ಸುರಿಮಳೆ: ಕ್ಷಮೆ ಕೇಳಿ ಕೇಳಿ ಸುಸ್ತಾದ 'ಚಿನ್ನು'.!

ಅಂದು ಕವಿತಾ ಅಷ್ಟೆಲ್ಲಾ ಹೈಡ್ರಾಮಾ ಮಾಡದೇ ಇದ್ದಿದ್ದರೆ, ಜಯಶ್ರೀ ಮತ್ತು ಶಶಿ ಮಧ್ಯದಲ್ಲಿ ಮೂಗು ತೂರಿಸದೇ ಹೋಗಿದ್ದರೆ... ಇಂದು ಕವಿತಾಗೆ ಇಷ್ಟೊಂದು ಮಾನಸಿಕ ಯಾತನೆ ಆಗುತ್ತಿರಲಿಲ್ಲ.

ನಾಮಿನೇಷನ್ ನಿಂದ ಸೇಫ್ ಆಗಲು ಕವಿತಾ ಡೀಲ್ ಮಾಡಿಕೊಳ್ಳಬಾರದಿತ್ತು. 'ಡೀಲ್' ಅಂತ ಹೇಳಿದ್ಮೇಲೆ, ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕಿತ್ತು. ಆದ್ರೆ, ಜಯಶ್ರೀ ಮತ್ತು ಶಶಿ ಮಾತಿನಿಂದ ಪ್ರಭಾವಿತರಾಗಿ ಒಪ್ಪಂದವನ್ನು ಮುರಿಯಲು ಆಂಡ್ರ್ಯೂ ಮೇಲೆ ಕವಿತಾ ಆರೋಪ ಮಾಡಿದರು.

ಆಮೇಲೆ, ದೊಡ್ಡ ರಂಪಾಟವೇ ನಡೆದು ಹೋಯ್ತು. ಕೊನೆಗೆ ತಾನು ಮಾಡಿದ್ದು ತಪ್ಪು ಎಂಬ ಅರಿವು ಕವಿತಾಗೆ ಆಯಿತು. ಎಲ್ಲರ ಸಮ್ಮುಖದಲ್ಲಿ ಆಂಡ್ರ್ಯೂಗೆ ಕವಿತಾ ಕ್ಷಮೆ ಕೇಳಿದರು. ಅಲ್ಲಿಗೆ, ವಿವಾದಕ್ಕೆ ಫುಲ್ ಸ್ಟಾಪ್ ಬಿತ್ತು ಅಂತಲೇ ಕವಿತಾ ನಿಟ್ಟುಸಿರು ಬಿಟ್ಟಿದ್ದರು.

ಆದ್ರೆ, 'ಬಿಗ್ ಬಾಸ್' ಕೊಟ್ಟಿದ್ದ 'ಕಾಲ್ ಸೆಂಟರ್' ಟಾಸ್ಕ್ ನಿಂದ ಎಲ್ಲರೂ ಕವಿತಾ ಕಡೆ ಬೆಟ್ಟು ಮಾಡಿ ತೋರಿಸುವಂತಾಯಿತು. ಸಮಾಧಾನದಿಂದ ಉತ್ತರ ಕೊಡುವ ಸನ್ನಿವೇಶದಲ್ಲಿ ಇದ್ದ ಕವಿತಾ, ಎಲ್ಲರ ಬಳಿಯೂ ಕ್ಷಮೆ ಕೇಳಿ ಕೇಳಿ ಸುಸ್ತಾದರು. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್

'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್

'ಬಿಗ್ ಬಾಸ್ ಕಾಲ್ ಸೆಂಟರ್' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಈ ವಾರ ನೀಡಲಾಗಿತ್ತು. ಇದರಲ್ಲಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ಮೊದಲ ಸುತ್ತಿನಲ್ಲಿ ಕವಿತಾ, ಜಯಶ್ರೀ, ಶಶಿ, ಧನರಾಜ್, ನಯನ ಮತ್ತು ಸೋನು ಗ್ರಾಹಕ ಸೇವಾ ಪ್ರತಿನಿಧಿಗಳ ಕಾರ್ಯ ನಿರ್ವಹಿಸಬೇಕಿತ್ತು. ಇನ್ನೂ ರಶ್ಮಿ, ರಾಕೇಶ್, ಅಕ್ಷತಾ, ಆನಂದ್, ನವೀನ್, ಆಂಡ್ರ್ಯೂ ಗ್ರಾಹಕರಾಗಿ ಕರೆ ಮಾಡಬೇಕಿತ್ತು. ಟಾಸ್ಕ್ ನ ಸಂಚಾಲಕರಾಗಿ ಮುರಳಿ ಇದ್ದರು. ಗ್ರಾಹಕರು ಕರೆ ಮಾಡಿ ತಮ್ಮ ದೂರುಗಳು ಅಥವಾ ಯಾವುದೇ ಪ್ರಶ್ನೆಗಳನ್ನು ಕೇಳಬಹುದಿತ್ತು. 'ಬಿಗ್ ಬಾಸ್' ಮನೆಯೊಳಗೆ ನಡೆದಿರುವ ಅಥವಾ ಗ್ರಾಹಕ ಸೇವಾ ಪ್ರತಿನಿಧಿಯ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಲು 'ಬಿಗ್ ಬಾಸ್' ಅವಕಾಶ ಕಲ್ಪಿಸಿದ್ದರು. ಗ್ರಾಹಕರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಗ್ರಾಹಕ ಸೇವಾ ಸಿಬ್ಬಂದಿ ಸಮಾಧಾನದಿಂದ ಉತ್ತರಿಸಬೇಕಿತ್ತು.

ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕವಿತಾ

ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕವಿತಾ

ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕವಿತಾ ಇದ್ದಾಗ, ಆಕೆಗೆ ಆನಂದ, ರಶ್ಮಿ ಮತ್ತು ಆಂಡ್ರ್ಯೂ ಕರೆ ಮಾಡಿ ದೂರು ಹೇಳಿದರು.

ಬೆಂಡೆತ್ತಿದ ಆನಂದ ಮತ್ತು ರಶ್ಮಿ

ಬೆಂಡೆತ್ತಿದ ಆನಂದ ಮತ್ತು ರಶ್ಮಿ

''ನಿಮ್ಮಿಂದ ಶಶಿ ಕೈಮುರಿದುಕೊಳ್ಳಬೇಕಾಯಿತು'' ಅಂತ ಕವಿತಾಗೆ ಕರೆ ಮಾಡಿ ಆನಂದ ಬೆಂಡೆತ್ತಿದರೆ, ''ಹತ್ತು ನಿಮಿಷ ಡೀಲ್ ಮಾಡಿದ್ದು ನೀವೇ ಅಲ್ವಾ.? ಹುಡುಗರ ಭಾವನೆ ಜೊತೆ ಆಟವಾಡುತ್ತೀರಾ.?'' ಅಂತೆಲ್ಲಾ ಹೇಳಿ ಕವಿತಾಗೆ ಬೆವರಿಳಿಸಿದರು ರಾಪಿಡ್ ರಶ್ಮಿ.

ಕ್ಷಮೆ ಕೇಳಿದ ಕವಿತಾ

ಕ್ಷಮೆ ಕೇಳಿದ ಕವಿತಾ

ಆರೋಪಗಳ ಕುರಿತು ವಿವರಣೆ ಕೇಳಲು ರಾಪಿಡ್ ರಶ್ಮಿ ಹಾಗೂ ಆನಂದ ರೆಡಿ ಇರಲಿಲ್ಲ. ಹೀಗಾಗಿ, ಕವಿತಾ ಸಮಾಧಾನದಿಂದ ಕ್ಷಮೆ ಕೇಳಿದರು.

ಕರೆ ಮಾಡಿದ ಆಂಡ್ರ್ಯೂ

ಕರೆ ಮಾಡಿದ ಆಂಡ್ರ್ಯೂ

''ನಾನು ನಿಮ್ಮನ್ನು ಬೇಬಿ ಅಂತ ಕರೆಯುತ್ತೇನೆ. ನೀವು ಪ್ರಾಮಿಸ್ ಮಾಡಿ ಯಾಮಾರಿಸಿದ್ರಿ. ಹತ್ತು ನಿಮಿಷ ವಾಪಸ್ ನನಗೆ ಸಿಗುತ್ತಾ.? ಇದಕ್ಕೆ ಪರಿಹಾರ ಏನು.? ನೀವು ಮಾಡಿದ ದ್ರೋಹ, ವಂಚನೆ, ಮೋಸ ಗೊತ್ತಾಗುತ್ತಿದೆ. ಇನ್ಮೇಲೆ ನಾನು ನಿಮ್ಮ ಪಕ್ಕ ಬಂದು ಬಿಟ್ಟರೆ ನೋಡಿ.. ನೀವು ಒಂದು ದಿಕ್ಕು, ನಾನು ಒಂದು ದಿಕ್ಕು'' ಅಂತ ಹೇಳಿ ಹಳೆಯ ವಿವಾದವನ್ನು ಆಂಡ್ರ್ಯೂ ಕೆದಕಿದರು.

ತಾಳ್ಮೆ ಕಳೆದುಕೊಳ್ಳದ ಕವಿತಾ

ತಾಳ್ಮೆ ಕಳೆದುಕೊಳ್ಳದ ಕವಿತಾ

''ನಾನು ಒಳ್ಳೆಯವಳಲ್ಲ. ಸುಳ್ಳು ಹೇಳಿ ಅದನ್ನೆಲ್ಲ ಮಾಡುವ ಅವಶ್ಯಕತೆ ಇಲ್ಲ'' ಎನ್ನುತ್ತ ತಾಳ್ಮೆ ಕಳೆದುಕೊಳ್ಳದೆ ಕವಿತಾ ಉತ್ತರಿಸಿದರು. ಮಾರನೇ ದಿನ ಗ್ರಾಹಕರಾಗಿ ಆಂಡ್ರ್ಯೂಗೆ ಕರೆ ಮಾಡಿ, ಇದ್ದ ಸಿಟ್ಟನ್ನೆಲ್ಲಾ ಕವಿತಾ ಹೊರ ಹಾಕಿದರು.

More from Filmibeat

English summary
Bigg Boss Kannada 6: Day 37: Rapid Rashmi questions Kavitha Gowda in call centre task.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X