'ಬಿಗ್ ಬಾಸ್' ಮೇಲೆಯೇ ರಾಪಿಡ್ ರಶ್ಮಿಗೆ ಬೇಜಾರು.! ಯಾಕ್ಗೊತ್ತಾ.?
Recommended Video

''ಬಿಗ್ ಬಾಸ್' ಖಂಡಿತ ಸ್ಕ್ರಿಪ್ಟೆಡ್ ಶೋ ಅಲ್ಲ. ಆದ್ರೆ, ವೆರಿ ವೆಲ್ ಎಡಿಟೆಡ್ ಶೋ.!'' - ಹೀಗಂತ ಈಗಾಗಲೇ ಹಲವು ಸ್ಪರ್ಧಿಗಳು ಹೇಳಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ತಮ್ಮನ್ನು ಪ್ರೊಜೆಕ್ಟ್ ಮಾಡಿರುವ ರೀತಿ ಬಗ್ಗೆ ಕೆಲವು ಸ್ಪರ್ಧಿಗಳಿಗೆ ಅಸಮಾಧಾನ ಇದ್ದೇ ಇದೆ.
ತಮ್ಮ ಬೇಸರವನ್ನು ಈಗಾಗಲೇ ಕಂಟೆಸ್ಟಂಟ್ ಗಳು ಕೆಲ ಸಂದರ್ಶನಗಳಲ್ಲಿ ಹೊರ ಹಾಕಿದ್ದಾರೆ. ಮೊನ್ನೆ ಮೊನ್ನೆಯಷ್ಟೇ 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ ಅಕ್ಷತಾ ಪಾಂಡವಪುರ ಕೂಡ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ತಮ್ಮನ್ನು ತೋರಿಸಿರುವ ರೀತಿ ಬಗ್ಗೆ ಬೇಸರಗೊಂಡು ಕಣ್ಣೀರು ಹಾಕಿದ್ದರು. ಅಲ್ಲದೇ, ಶಶಿ ಮತ್ತು ಕವಿತಾ ರನ್ನ ಪ್ರೊಜೆಕ್ಟ್ ಮಾಡಿರುವ ರೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈಗ ಸೇಮ್ ಸೇಮ್ ಅದೇ ಭಾವನೆ ರಾಪಿಡ್ ರಶ್ಮಿಗೆ ಮೂಡಿದೆ. 'ಬಿಗ್ ಬಾಸ್' ಮನೆಯೊಳಗೆ ಶಶಿ ಕುಮಾರ್, ಕವಿತಾ ಗೌಡ ಮತ್ತು ಧನರಾಜ್ ರವರ ಡಬಲ್ ಸ್ಟಾಂಡರ್ಡ್ ಗಳನ್ನು ಕಣ್ಣಾರೆ ನೋಡಿದ್ದ ರಾಪಿಡ್ ರಶ್ಮಿಗೆ 'ವೀಕೆಂಡ್'ನಲ್ಲಿ ಅ ಮೂವರನ್ನು ಪ್ರೊಟೆಕ್ಟ್ ಮಾಡಿದ ಹಾಗೆ ಅನಿಸುತ್ತಿತ್ತಂತೆ.! ಮುಂದೆ ಓದಿರಿ...

ರಾಪಿಡ್ ರಶ್ಮಿ ಹೇಳಿದ್ದೇನು.?
''ನವೀನ್ ಪ್ರಬಲ ಸ್ಪರ್ಧಿ ಅಂತ ನನಗೆ ಅನಿಸುತ್ತಿತ್ತು. ಕೆಲವು ಘಟನೆಗಳು... ಮತ್ತು ವೀಕೆಂಡ್ ನಲ್ಲಿ ನಡೆಯುತ್ತಿದ್ದ ಪಂಚಾಯತಿ ವಿಚಾರಗಳನ್ನೆಲ್ಲ ನೋಡಿದಾಗ, ಶಶಿ, ಕವಿತಾ ಮತ್ತು ಧನರಾಜ್ ರನ್ನ ಪ್ರೊಟೆಕ್ಟ್ ಮಾಡುತ್ತಿದ್ದಾರೆ ಅಂತ ಅನಿಸುತ್ತಿತ್ತು. ಯಾಕಂದ್ರೆ, ಅವರುಗಳ ದ್ವಂದ್ವ ನಿಲುವು, ಎರಡು ಮುಖಗಳನ್ನು ನಾವು ನೋಡಿದ್ವಿ. ಆದ್ರೆ, ಅದನ್ನ ತೋರಿಸದೆ ಆ ಮೂವರನ್ನು ಪ್ರೊಟೆಕ್ಟ್ ಮಾಡಿದರು ಅಂತ ಅನಿಸ್ತು'' ಎಂದು ಸಂದರ್ಶನವೊಂದರಲ್ಲಿ ರಾಪಿಡ್ ರಶ್ಮಿ ಹೇಳಿದ್ದಾರೆ.

ಕ್ಯಾರೆಕ್ಟರ್ ಗೆ ತಕ್ಕ ಹಾಗೆ ತೋರಿಸುತ್ತಾರೆ.!
''ನಿಮ್ಮನ್ನ ಯಾವ ಕ್ಯಾರೆಕ್ಟರ್ ಅಂತ ಗುರುತಿಸಿ ಮನೆಯೊಳಗೆ ಕಳುಹಿಸಿರುತ್ತಾರೋ, ಅಷ್ಟನ್ನೇ ಕನ್ನಡಿಯಲ್ಲಿ ತೋರಿಸಿರುತ್ತಾರೆ ಎಂಬ ಬೇಜಾರು ಇದೆ'' ಅಂತಾರೆ ರಾಪಿಡ್ ರಶ್ಮಿ.

ಜರ್ನಿ ವಿಟಿ ಇಷ್ಟ ಆಗಲಿಲ್ಲ.!
''ನನ್ನ ಬೆನ್ನ ಹಿಂದೆ ಇಷ್ಟೊಂದು ಮಾತನಾಡಿದ್ದಾರೆ ಅಂತ ನನಗೆ ಗೊತ್ತೇ ಇರಲಿಲ್ಲ. ಸ್ಟೇಜ್ ಮೇಲೆ ನನ್ನ ವಿಟಿ ನೋಡಿದ್ಮೇಲೆ ಗೊತ್ತಾಯಿತು. ನನ್ನ ಜರ್ನಿ ವಿಟಿ ನನಗೆ ಇಷ್ಟ ಆಗಲಿಲ್ಲ'' ಅಂತ ಹೇಳಿದ್ದಾರೆ ರಾಪಿಡ್ ರಶ್ಮಿ. (ಕೃಪೆ: ಫಸ್ಟ್ ನ್ಯೂಸ್)

ಅನುಮಾನ ಮೂಡದೇ ಇರಲ್ಲ.!
''ಬಿಗ್ ಬಾಸ್' ಫಿಕ್ಸ್ಡ್ ಶೋ. ಯಾರು ವಿನ್ನರ್ ಎಂಬುದು ಮೊದಲೇ ನಿರ್ಧಾರ ಆಗಿರುತ್ತದೆ'' ಎಂದು ಫೇಸ್ ಬುಕ್ ನಲ್ಲಿ ಜನ ಕಾಮೆಂಟ್ ಮಾಡುವುದನ್ನು ನೋಡಿದ್ದೇವೆ. ಈಗ ಈ ಸೀಸನ್ ನ ಸ್ಪರ್ಧಿಗಳು ಹೇಳುವುದನ್ನು ನೋಡ್ತಿದ್ರೆ, ಕವಿತಾ ಮತ್ತು ಶಶಿಯನ್ನ ಬೇಕು ಅಂತ ಪ್ರೊಟೆಕ್ಟ್ ಮಾಡಿ ಟಾಪ್ ವರೆಗೂ ಕರೆತರಲಾಗಿದ್ಯಾ ಎಂಬ ಅನುಮಾನ ಮೂಡದೇ ಇರಲ್ಲ.


Click it and Unblock the Notifications











