'ಬಿಗ್ ಬಾಸ್' ಗೆಲ್ಲಲಿಲ್ಲ ಅಂದ್ರೇನಂತೆ, ಸುದೀಪ್ ಮನ ಗೆದ್ದ ಗಾಯಕ ನವೀನ್ ಸಜ್ಜು.!

Recommended Video

Bigg Boss Kannada Season 6:ಬಿಗ್ ಬಾಸ್' ಗೆಲ್ಲಲಿಲ್ಲ ಅಂದ್ರೇನಂತೆ | FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿನ ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಗಳ ಪೈಕಿ ನವೀನ್ ಸಜ್ಜು ಕೂಡ ಒಬ್ಬರು. 'ಬಿಗ್ ಬಾಸ್' ಮನೆಯಲ್ಲಿ ಇದ್ದುಕೊಂಡು ಹಲವು ಗೀತೆಗಳನ್ನು ಹಾಡುತ್ತಾ, ವೀಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿದ್ದವರು ನವೀನ್ ಸಜ್ಜು. ಹೀಗಾಗಿ ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮವನ್ನು ನವೀನ್ ಸಜ್ಜು ಗೆಲ್ಲಬಹುದು ಎಂದು ಹಲವರು ಊಹಿಸಿದ್ದರು.

ಆದರೆ, ವೀಕ್ಷಕರ ಲೆಕ್ಕಾಚಾರ ಉಲ್ಟಾಪಲ್ಟಾ ಆಯ್ತು. ಅಭಿಮಾನಿಗಳ ಆಸೆಗೆ ಬಕೆಟ್ ಗಟ್ಟಲೇ ತಣ್ಣೀರು ಎರಚಿದಂತಾಯಿತು. 'ಬಿಗ್ ಬಾಸ್' ವಿನ್ನರ್ ಆಗಬೇಕಿದ್ದ ನವೀನ್ ಸಜ್ಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 2ನೇ ಸ್ಥಾನ ಗಳಿಸಿದ ನವೀನ್ ಸಜ್ಜು ಗೆ ರನ್ನರ್ ಅಪ್ ಟ್ರೋಫಿ ಸಿಗಲಿಲ್ಲ, ಯಾವುದೇ ಬಹುಮಾನವೂ ಸಿಗಲಿಲ್ಲ. ಆದರೇನಂತೆ, ಸುದೀಪ್ ಮನ ಗೆಲ್ಲುವಲ್ಲಿ ಗಾಯಕ ನವೀನ್ ಸಜ್ಜು ಯಶಸ್ವಿಯಾಗಿದ್ದಾರೆ. ನವೀನ್ ಸಜ್ಜು ಆಸೆ ಮತ್ತು ಕನಸಿಗೆ ಬೆನ್ನೆಲುಬಾಗಿ ನಿಲ್ಲಲು ಸುದೀಪ್ ಮನಸ್ಸು ಮಾಡಿದ್ದಾರೆ. ಮುಂದೆ ಓದಿರಿ...

ನವೀನ್ ಸಜ್ಜು ಕನಸು ಏನಾಗಿತ್ತು.?

ನವೀನ್ ಸಜ್ಜು ಕನಸು ಏನಾಗಿತ್ತು.?

'ಬಿಗ್ ಬಾಸ್' ಗೆದ್ದರೆ ಬರುವ ಹಣದಲ್ಲಿ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದು ಮತ್ತು ಸ್ವಂತ ಸ್ಟುಡಿಯೋ ಓಪನ್ ಮಾಡುವುದು ನವೀನ್ ಸಜ್ಜು ಕನಸಾಗಿತ್ತು. ಆದರೆ ನವೀನ್ ಸಜ್ಜು 'ಬಿಗ್ ಬಾಸ್' ಗೆಲ್ಲಲಿಲ್ಲ.

ನವೀನ್ ಸಹಾಯಕ್ಕೆ ನಿಂತ ಸುದೀಪ್

ನವೀನ್ ಸಹಾಯಕ್ಕೆ ನಿಂತ ಸುದೀಪ್

''ಬಿಗ್ ಬಾಸ್' ಗೆದ್ದರೆ ಸ್ವಂತ ಸ್ಟುಡಿಯೋ ಓಪನ್ ಮಾಡುವೆ'' ಎಂದು ಟಾಸ್ಕ್ ಒಂದರಲ್ಲಿ ನವೀನ್ ಸಜ್ಜು ಹೇಳಿದ್ದು ಸುದೀಪ್ ಗೆ ಗೊತ್ತಿತ್ತು. ಹೀಗಾಗಿ ''ನವೀನ್ ಗೆ ಸಹಾಯ ಮಾಡುವೆ'' ಎಂದು 'ಬಿಗ್ ಬಾಸ್' ವೇದಿಕೆ ಮೇಲೆ ಸುದೀಪ್ ಘೋಷಿಸಿದರು.

ಸುದೀಪ್ ಹೇಳಿದ್ದೇನು.?

ಸುದೀಪ್ ಹೇಳಿದ್ದೇನು.?

''ನೀವು ಕನ್ನಡ ಚಿತ್ರರಂಗದ ಹೆಮ್ಮೆಯ ಸಂಗೀತ ನಿರ್ದೇಶಕರಾಗಬೇಕು. ಸ್ವಂತ ಸ್ಟುಡಿಯೋ ಮಾಡಬೇಕು ಅಂತ ಹೇಳಿದ್ರಿ. ಇದಕ್ಕಾಗಿ ನನ್ನ ಸಪೋರ್ಟ್ ನಿಮಗೆ ಇರುತ್ತದೆ. ನಿಮಗಾಗಿ ಒಂದು ಸ್ಟುಡಿಯೋ ಆಗುತ್ತೆ'' ಎಂದು ಸುದೀಪ್, ನವೀನ್ ಸಜ್ಜು ಗೆ ಭರವಸೆ ನೀಡಿದರು.

ಭಾವುಕರಾದ ನವೀನ್ ಸಜ್ಜು

ಭಾವುಕರಾದ ನವೀನ್ ಸಜ್ಜು

ಕಿಚ್ಚ ಸುದೀಪ್ ಆಡಿದ ಮಾತನ್ನು ಕೇಳಿ ನವೀನ್ ಸಜ್ಜು ಭಾವುಕರಾದರು. ಕಿಚ್ಚ ಸುದೀಪ್ ಗೆ ಹೃದಯಪೂರ್ವಕವಾಗಿ ನವೀನ್ ಸಜ್ಜು ಧನ್ಯವಾದ ಅರ್ಪಿಸಿದರು.

More from Filmibeat

English summary
Bigg Boss Kannada 6: Sudeep promises to help Naveen Sajju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X