'ತ್ರಿಮೂರ್ತಿ'ಗಳಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್: ತಪ್ಪೊಪ್ಪಿಕೊಂಡ ಕವಿತಾ.!
'ಬಿಗ್ ಬಾಸ್' ಮನೆಯಲ್ಲಿ ಕಳೆದ ವಾರ ನಡೆದ ರಂಪ-ರಾಮಾಯಣ ನಿಮಗೆಲ್ಲ ಗೊತ್ತೇ ಇದೆ. ನಾಮಿನೇಷನ್ ನಲ್ಲಿ ಸೇಫ್ ಆಗಲು, ಆಂಡ್ರ್ಯೂ ಜೊತೆಗೆ ಪ್ರತಿ ದಿನ ಹತ್ತು ನಿಮಿಷ ಮಾತನಾಡಲು ಕವಿತಾ 'ಡೀಲ್' ಮಾಡಿಕೊಂಡರು.
ಬಳಿಕ ಜಯಶ್ರೀ ಮಾತನ್ನು ಕೇಳಿ ಕನ್ ಫ್ಯೂಸ್ ಆದ ಕವಿತಾ ಆಂಡ್ರ್ಯೂ ಮೇಲೆ ''Uncomfortable ಮಾಡುತ್ತಿದ್ದಾರೆ'' ಅಂತ ಆರೋಪ ಹೊರಿಸಿದರು. ಇಬ್ಬರ ನಡುವೆ ನಡೆದ 'ಡೀಲ್'ನ ಮೂರನೇಯವರ ಬಳಿ ಹಂಚಿಕೊಂಡಿದ್ದೇ 'ಚಿನ್ನು' ಕವಿತಾ. ಸಾಲದಕ್ಕೆ, 'ನ್ಯಾಯ ಇಲ್ಲಿದೆ' ಟಾಸ್ಕ್ ನಲ್ಲಿ 'ಡೀಲ್' ವಿಚಾರವನ್ನ ಬಯಲಿಗೆ ತಂದಿದ್ದೂ ಕೂಡ ಕವಿತಾ.
ಕೊನೆಗೆ 'ಕಾಫಿ ವಿತ್ ಕ್ಯಾಪ್ಟನ್' ಚಾಟ್ ಶೋ ಮುಗಿದ್ಮೇಲೆ, ಕಣ್ಣೀರು ಸುರಿಸಲು ಕವಿತಾ ಆರಂಭಿಸಿದರೆ, ಇತ್ತ ಆಂಡ್ರ್ಯೂ ವಿರುದ್ಧ ಜಯಶ್ರೀ ಮತ್ತು ಶಶಿ ಸಿಡಿದೆದ್ದರು. ''ವಿಷಯವನ್ನ ಅನವಶ್ಯಕವಾಗಿ ಶಶಿ ಮತ್ತು ಜಯಶ್ರೀ ದೊಡ್ಡದು ಮಾಡುತ್ತಿದ್ದಾರೆ'' ಅಂತ ಆಂಡ್ರ್ಯೂ ಆರೋಪಿಸಿದರು. ಇದೇ ಸಿಟ್ಟಿಗೆ ಗೋಡೆಗೆ ಕೈ ಗುದ್ದುಕೊಂಡ ಶಶಿ ಮೂಳೆ ಮುರಿದುಕೊಂಡರು.
ಇದನ್ನೆಲ್ಲ ಗಮನಿಸಿದ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕವಿತಾ, ಜಯಶ್ರೀ ಮತ್ತು ಶಶಿ (ತ್ರಿಮೂರ್ತಿಗಳು) ಗೆ ಕ್ಲಾಸ್ ತೆಗೆದುಕೊಂಡರು. ಕವಿತಾಗೆ ತಮ್ಮ ತಪ್ಪನ್ನ ಸುದೀಪ್ ಅರ್ಥ ಮಾಡಿಸಿದರು. ಜಯಶ್ರೀ ಮತ್ತು ಶಶಿ ಎಡವಿದ್ದೆಲ್ಲಿ ಎಂಬುದನ್ನೂ ಸುದೀಪ್ ಮನವರಿಕೆ ಮಾಡಿಸಿದರು. ಮುಂದೆ ಓದಿರಿ...

'ವಾರದ ಕಥೆ ಕಿಚ್ಚನ ಜೊತೆ'
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕವಿತಾ-ಆಂಡ್ರ್ಯೂ ನಡುವಿನ ವಿವಾದದ ಬಗ್ಗೆ ಆಂಡ್ರ್ಯೂ ಬಳಿ ಸುದೀಪ್ ವಿವರಣೆ ಕೇಳಿದರು. ಅದಕ್ಕೆ ಆಂಡ್ರ್ಯೂ ಕೊಟ್ಟರ ಉತ್ತರ...

ಆಂಡ್ರ್ಯೂ ಹೇಳಿದ್ದೇನು.?
''ಹುಡುಗಿಯರ ಮೇಲೆ ಹುಡುಗರಿಗೆ ಫೀಲಿಂಗ್ ಬರುವುದು ಯಾವುದೇ ತಪ್ಪಿಲ್ಲ. ಫೀಲಿಂಗ್ ಇಟ್ಟುಕೊಂಡು ನಾನು ಕವಿತಾಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಈ ವಿಷಯವನ್ನು ಬಳಸಿಕೊಂಡು ಜಯಶ್ರೀ ಮತ್ತು ಶಶಿ ದೊಡ್ಡದು ಮಾಡಿದರು. ಅವರಿಗೆ ಕವಿತಾ ಮೇಲೆ ಅಷ್ಟೊಂದು ಕೇರ್ ಇದ್ದಿದ್ದರೆ, ಇಬ್ಬರೇ ಕೂತುಕೊಂಡು ಪರಿಹಾರ ಮಾಡಿಕೊಳ್ಳಿ ಅಂತ ನಮಗೆ ಹೇಳುತ್ತಿದ್ದರು'' ಎಂದರು ಆಂಡ್ರ್ಯೂ.

ತಮ್ಮ ತಪ್ಪಿನ ಬಗ್ಗೆ ಕವಿತಾಗೆ ಅರಿವು
''ಎಲ್ಲವೂ ಶುರುವಾಗಿದ್ದು ಕನ್ಫೆಶನ್ ರೂಮ್ ನಿಂದ. ಆಂಡ್ರ್ಯೂ ಗಿದ್ದ ಫೀಲಿಂಗ್ಸ್ ನಿಮಗೆ ಗೊತ್ತಿತ್ತು ಅಂತ ಹೇಳಿದ್ರಿ. ''ಬಿಟ್ಟುಕೊಟ್ಟು ಬಿಡ್ತೀಯಾ, ಟೈಮ್ ಕೊಡ್ತೀನಿ'' ಅಂತ ಮಾತುಕತೆ ಶುರುವಾಗಿದ್ದೇ ನಿಮ್ಮಿಂದ. ನಾಮಿನೇಷನ್ ನಿಂದ ತಪ್ಪಿಸಿಕೊಳ್ಳಲು, ಹತ್ತು ನಿಮಿಷ ಮಾತನಾಡುವ ಒಪ್ಪಂದಕ್ಕೆ ಬರ್ತೀರಾ. ಡೀಲ್ ಅಂತ ಮೊದಲು ಕರೆದಿದ್ದೇ ತಾವು. ಈಗ ನೀವೇ ಯೋಚಿಸಿ.. ಆಂಡ್ರ್ಯೂ ಈ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ. ತಾವೇ ಜಯಶ್ರೀ ಬಳಿ ಹೇಳಿದ್ರಿ. ಎರಡು ದಿನ ಆದ್ಮೇಲೆ, ವಿಚಾರವನ್ನು ಕಟಕಟೆಗೆ ತರ್ತೀರಾ. ದೊಡ್ಡ ರಾಮಾಯಣ ಆಗುತ್ತೆ. ತಗೊಂಡಿದ್ದನ್ನ ತಗೊಂಡ ಮೇಲೆ ಕೊಡಬೇಕಾಗಿದ್ದನ್ನ ಕೊಡಲ್ಲ ಅಂದ್ರೆ ತಪ್ಪಾಗುತ್ತೆ. ಅವಕಾಶವಾದಿ ಅನ್ನೋದು ಇದಕ್ಕೆ'' ಎಂದು ಕವಿತಾಗೆ ತಮ್ಮ ತಪ್ಪನ್ನ ಸುದೀಪ್ ಅರ್ಥ ಮಾಡಿಸಿದರು.

ಕವಿತಾ ಕೊಟ್ಟ ಸಬೂಬು ಏನು.?
''ಕೊಟ್ಟಿರುವ ಮಾತನ್ನು ಉಳಿಸಿಕೊಂಡಿದ್ದೇನೆ. Uncomfortable ಫೀಲ್ ಆದರೆ ಬರಲ್ಲ ಅಂತ ಆಂಡ್ರ್ಯೂಗೆ ಮೊದಲೇ ಹೇಳಿದ್ದೆ. ನಾನು ಬರೆದ ದೂರು ಕಟಕಟೆಗೆ ಬರುತ್ತೆ ಅಂತ ನಾನು ಯೋಚಿಸಿರಲಿಲ್ಲ'' ಅಂತ ಕವಿತಾ ಹೇಳಿದಾಗ, ''ಹಾಗಿದ್ರೆ, ಇದು ನಾನು ಪ್ರೈವೇಟ್ ಆಗಿ ದೂರು ಬರ್ದಿರೋದು, ಕಟಕಟೆಗೆ ಬರುವುದು ಬೇಡ ಅಂತ ಮೊದಲೇ ಹೇಳಬಹುದಿತ್ತು. ಇದರಲ್ಲಿ ನಿಮ್ಮ ವ್ಯಕ್ತಿತ್ವ ಮತ್ತು ಓರ್ವ ಹುಡುಗನ ವ್ಯಕ್ತಿತ್ವ ಹೊರಗೆ ಬಂತು. ಚರ್ಚೆಯಲ್ಲಿ ಬಗೆಹರಿಯಬಹುದಾದ ವಿಷಯಕ್ಕೆ ಯುದ್ಧ ಮಾಡಿದ್ರಿ'' ಎಂದುಬಿಟ್ಟರು ಸುದೀಪ್.

ಜಯಶ್ರೀಗೆ ಸುದೀಪ್ ಕ್ಲಾಸ್
''ಒಪ್ಪಂದಕ್ಕೆ ಬಂದ್ಮೇಲೆ, ಅವನ ಜೊತೆಗೆ ಮಾತನಾಡುವುದು ಸರಿ ಅಲ್ಲ ಅಂತ ನೀವು ಹೇಳ್ತೀರಾ. ಕವಿತಾಗೆ ಕನ್ ಫ್ಯೂಶನ್ ಶುರುವಾಗುವುದು ಅಲ್ಲೇ. ಕವಿತಾಗೆ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇದೆ. ನೀವು ಮತ್ತು ಶಶಿ ಇದರಲ್ಲಿ ಬರಲಿಲ್ಲ ಅಂದಿದ್ದರೆ, ಈ ವಿಷಯ ಇಷ್ಟೊಂದು ದೊಡ್ಡದು ಆಗುತ್ತಿರಲಿಲ್ಲ'' ಅಂತ ಜಯಶ್ರೀಗೆ ಕ್ಲಿಯರ್ ಆಗಿ ಹೇಳಿದರು ಸುದೀಪ್.

ಶಶಿಗೆ ಸುದೀಪ್ ಸಲಹೆ
''ಕೆಲವೊಮ್ಮೆ ನಮ್ಮದು ಯಾವುದಲ್ಲವೋ, ಅದು ನಮ್ಮದಲ್ಲ. ಅನ್ಯಾಯವಾಗಿ ಕೈ ಡ್ಯಾಮೇಜ್ ಮಾಡಿಕೊಂಡ್ರಿ'' ಅಂತ ಸುದೀಪ್ ಹೇಳಿದಾಗ, ''ಕವಿತಾ ಅಳುವುದನ್ನು ನನ್ನ ಕೈಯಲ್ಲಿ ನೋಡಲು ಆಗಲಿಲ್ಲ. ಆಂಡ್ರ್ಯೂ ಇನ್ನೂ ಮಾತನಾಡುತ್ತಲೇ ಇದ್ದಿದ್ದಕ್ಕೆ, ಹಾಗೇ ಆಯಿತು'' ಎಂದು ತಮ್ಮನ್ನ ತಾವು ಸಮರ್ಥಿಸಿಕೊಂಡರು ಶಶಿ.

ತಪ್ಪೊಪ್ಪಿಕೊಂಡ ಕವಿತಾ
''ಒಪ್ಪಂದ ಮುರಿದುಕೊಂಡಿದ್ದು ತಪ್ಪಲ್ಲ. ಆದ್ರೆ, ಒಳ್ಳೆಯ ರೀತಿಯಲ್ಲಿ ಒಪ್ಪಂದ ಬ್ರೇಕ್ ಮಾಡಿಕೊಳ್ಳಬಹುದಿತ್ತು'' ಅಂತ ಸುದೀಪ್ ಹೇಳಿದಾಗ, ''ನಾನು ಒಪ್ಪಿಕೊಳ್ಳುವೆ. ನಂದೇ ತಪ್ಪು. ವಿಚಾರವನ್ನು ನಾನೇ ಹೊರಗೆ ಹೇಳಿದ್ದು. ಕಟಕಟೆಗೆ ಹೋಗುವ ಮುನ್ನ ನಾನು ಆಂಡ್ರ್ಯೂ ಜೊತೆಗೆ ಮಾತನಾಡಬೇಕಿತ್ತು'' ಎಂದು ತಪ್ಪೊಪ್ಪಿಕೊಂಡರು ಕವಿತಾ.

ಜಯಶ್ರೀಗೆ ಸುದೀಪ್ ಸಲಹೆ
''ಅವಶ್ಯಕತೆ ಇಲ್ಲದ ಕಡೆ ಸಲಹೆ ಕೊಡಬೇಡಿ. ಯಾಕಂದ್ರೆ, ಬಿಗ್ ಬಾಸ್ ಮನೆಗೆ ಬಂದಿರುವವರೆಲ್ಲರೂ ಬುದ್ಧಿವಂತರೇ'' ಎಂದು ಜಯಶ್ರೀಗೆ ಸುದೀಪ್ ಸಲಹೆ ಕೊಟ್ಟರು. ಜೊತೆಗೆ ಶಶಿಗೂ ಬುದ್ಧಿ ಮಾತು ಹೇಳಿದರು.

ಶೇಕ್ ಹ್ಯಾಂಡ್
ವಿವಾದವನ್ನು ಮರೆತು ಎಲ್ಲರೂ ಖುಷಿ ಖುಷಿ ಆಗಿರಿ ಎಂದು ಜಯಶ್ರೀ-ಶಶಿ-ಕವಿತಾ ಮತ್ತು ಆಂಡ್ರ್ಯೂಗೆ ಪರಸ್ಪರ ಹ್ಯಾಂಡ್ ಶೇಕ್ ಮಾಡಿಸಿದರು ಸುದೀಪ್.


Click it and Unblock the Notifications











