ಒಂದು ವೇಳೆ ಆಂಡ್ರ್ಯೂ 'ಬಿಗ್ ಬಾಸ್' ವಿನ್ನರ್ ಆದರೆ ಹೀಗೆ ಮಾಡ್ತಾರಂತೆ.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮೊದಲ ವಾರದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಕ್ಯಾತೆ ತೆಗೆದು ಹೆಚ್ಚು ಫುಟೇಜ್ ಗಳಿಸಿಕೊಂಡಿರುವ ಸ್ಪರ್ಧಿ ಆಂಡ್ರ್ಯೂ. ಟಾಸ್ಕ್ ನಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಮನಃಸ್ಥಿತಿಯೊಂದಿಗೆ ಇತರೆ ಸ್ಪರ್ಧಿಗಳಿಗೆ ಆಂಡ್ರ್ಯೂ ಕಿರುಕುಳ ಕೊಟ್ಟ ಉದಾಹರಣೆಯೂ ಕಣ್ಣ ಮುಂದಿದೆ.
ಪದೇ ಪದೇ ಎಲ್ಲರಿಗೂ ಕಿರಿಕಿರಿ ಕೊಟ್ಟಿರುವ ಆಂಡ್ರ್ಯೂ ಹಾಗೂ ಹೀಗೂ 'ಫೈನಲ್ ಫೈವ್' ಹಂತ ತಲುಪಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ಆಂಡ್ರ್ಯೂ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ. 'ಬಿಗ್ ಬಾಸ್' ವಿನ್ನರ್ ಆಗಲು ಆಂಡ್ರ್ಯೂಗೆ ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ.
ಹೀಗಿರುವಾಗಲೇ, ಒಂದು ವೇಳೆ ತಾವು ವಿನ್ನರ್ ಆದರೆ ತಮ್ಮ ಪ್ರತಿಕ್ರಿಯೆ ಹೇಗಿರುತ್ತೆ.? ಬಂದ ಬಹುಮಾನ ಹಣದಲ್ಲಿ ಏನು ಮಾಡ್ತಾರೆ ಎಂಬುದನ್ನ ಆಂಡ್ರ್ಯೂ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ
ಟಾಪ್ 5 ಹಂತ ತಲುಪಿರುವ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದುವೇ 'ಗೆಲುವು ನನ್ನದೇ'. ಇದರ ಅನುಸಾರ, ವಿನ್ನರ್ ಆದರೆ ತಮ್ಮ ಮೊದಲ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ಸ್ಪರ್ಧಿಗಳು ಹೇಳಬೇಕಿತ್ತು.

ಹಳೇ ಆಂಡಿ ಆಗಿದ್ದರೆ....
''ನಾನು ಹಳೇ ಆಂಡಿ ಆಗಿದ್ದಿದ್ದರೆ, ಹೊಸ ಕಾರ್ ತಗೊಳ್ತೀನಿ. ಫಾರಿನ್ ಟ್ರಿಪ್ ಗೆ ಹೋಗಿ ಬರ್ತೀನಿ. ಲ್ಯಾವಿಶ್ ಮದುವೆ ಮಾಡಿಕೊಂಡು ಸಖತ್ತಾಗಿ ಇರ್ತೀನಿ ಅಂತ ಹೇಳುತ್ತಿದ್ದೆ'' - ಆಂಡ್ರ್ಯೂ, 'ಬಿಗ್ ಬಾಸ್' ಸ್ಪರ್ಧಿ

ಗೆಲುವು ನನ್ನದಲ್ಲ.!
''ಆಂಡಿ ಯಾರು ಅಂತ ಬಿಗ್ ಬಾಸ್ ಮನೆ ನನ್ನ ಮುಂದೆ ತಂದು ನಿಲ್ಲಿಸಿದೆ. ತಿದ್ದಿಕೊಳ್ಳಲು ನನಗೆ ಇಲ್ಲಿ ತುಂಬಾ ಅವಕಾಶಗಳು ಸಿಕ್ಕಿವೆ. ಗೆಲುವು ಖಂಡಿತ ನನ್ನದು ಅಂತ ಹೇಳಲ್ಲ. ಟ್ರೋಫಿಯನ್ನ ಖುಷಿಯಿಂದ ಎತ್ತಿಕೊಳ್ಳುವೆ'' ಅಂತಾರೆ ಆಂಡಿ.

ಬಹುಮಾನ ಹಣದಲ್ಲಿ ಏನು ಮಾಡ್ತಾರೆ.?
''ಹಣದ ಅವಶ್ಯಕತೆ ನನಗೆ ಎಷ್ಟು ಇದ್ಯೋ, ಅಷ್ಟೇ ಎಲ್ಲರಿಗೂ ಇದೆ. ಹೀಗಾಗಿ ಬಂದ ಬಹುಮಾನ ಹಣದಲ್ಲಿ 50% ನಾನು ಇಟ್ಟುಕೊಂಡು, ಉಳಿದ 50% ನಲ್ಲಿ ಎಲ್ಲ ಸ್ಪರ್ಧಿಗಳಿಗೂ ಸಮನಾಗಿ ಶೇರ್ ಮಾಡುವೆ'' ಎಂದಿದ್ದಾರೆ ಆಂಡಿ.

ಆಂಡ್ರ್ಯೂಗೆ ನೀವು ಮತ ಹಾಕ್ತೀರಾ.?
'ಬಿಗ್ ಬಾಸ್' ಗೆಲ್ಲಲು ಆಂಡ್ರ್ಯೂ ಪರವಾಗಿ ನೀವು ಮತ ಹಾಕ್ತೀರಾ.? ನಿಮ್ಮ ಪ್ರಕಾರ 'ಬಿಗ್ ಬಾಸ್ ಕನ್ನಡ-6' ಯಾರು ಗೆಲ್ಲಬೇಕು.? ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











