ಈ ಮೂವರಲ್ಲಿ ಯಾರಿಗೆ ಸಿಗಲಿದೆ 'ಬಿಗ್ ಬಾಸ್' ಪಟ್ಟ?
''ಬಿಗ್ ಬಾಸ್ ಕನ್ನಡ ಸೀಸನ್ 6' ಕೊನೆ ಗಳಿಗೆಗೆ ಬಂದಿದೆ. ನಿನ್ನೆಯಿಂದ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಶುರುವಾಗಿದೆ. ಇಂದು ಬಿಗ್ ಬಾಸ್ ವಿನ್ನರ್ ಅನ್ನು ಅನೌನ್ಸ್ ಮಾಡಲಾಗುತ್ತದೆ.
ಈ ಬಾರಿ 20 ಸ್ಪರ್ಥಿಗಳ ಪೈಕಿ ಐದು ಜನ ಫೈನಲ್ ಹಂತಕ್ಕೆ ಬಂದಿದ್ದರು. ಕವಿತಾ, ಅಂಡ್ರ್ಯೂ, ರಶ್ಮಿ, ನವೀನ್ ಸಜ್ಜು, ಶಶಿ ಫೈನಲ್ ಹಂತದ ವರೆಗೆ ಬಂದಿದ್ದರು. ಆದರೆ, ಕೊನೆಯ ಗಳಿಕೆಯಲ್ಲಿ ಆಂಡ್ರ್ಯೂ ಮತ್ತು ರಾಪಿಡ್ ರಶ್ಮಿ ಔಟ್ ಆದರು.
ಸದ್ಯ, ನಟಿ ಕವಿತಾ, ಗಾಯಕ ನವೀನ್ ಸಜ್ಜು ಹಾಗೂ ಮಾಡರ್ನ್ ರೈತ ಶಶಿ ಟಾಪ್ 3 ಸ್ಥಾನ ಗಿಟ್ಟಿಸಿದ್ದಾರೆ. ಈ ಮೂವರಲ್ಲಿ ಯಾರು ಬಿಗ್ ಬಾಸ್ ಪ್ರಶಸ್ತಿ ಗೆಲ್ಲುತ್ತಾರೆ ಎನ್ನುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಈ ಹಿಂದೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗಳು ಕೆಳಗಿನಂತಿದ್ದಾರೆ
ಬಿಗ್ ಬಾಸ್ ಸೀಸನ್ 1 ವಿನ್ನರ್: ವಿಜಯ್ ರಾಘವೇಂದ್ರ
ಬಿಗ್ ಬಾಸ್ ಸೀಸನ್ 2 ವಿನ್ನರ್: ಅಕುಲ್ ಬಾಲಾಜಿ
ಬಿಗ್ ಬಾಸ್ ಸೀಸನ್ 3 ವಿನ್ನರ್: ಶ್ರುತಿ
ಬಿಗ್ ಬಾಸ್ ಸೀಸನ್ 4 ವಿನ್ನರ್: ಪ್ರಥಮ್
ಬಿಗ್ ಬಾಸ್ ಸೀಸನ್ 5 ವಿನ್ನರ್: ಚಂದನ್ ಶೆಟ್ಟಿ
English summary
Naveen sajju,Shashi Kumar, Kavitha Gowda enter to bigg boss kannada 6 finale. who will win this season.


Click it and Unblock the Notifications