ಆಡಮ್ ನ ಔಟ್ ಮಾಡಿದ 'ಬಿಗ್ ಬಾಸ್'ಗೆ ಡೌನ್ ಡೌನ್ ಎಂದ ವೀಕ್ಷಕರು.!

Recommended Video

Bigg Boss Kannada Season 6 : ಆಡಮ್ ಪಾಶ ಎಲಿಮಿನೇಟ್ ಆಗಿದ್ದಕ್ಕೆ ವೀಕ್ಷಕರು ಬೇಸರ | FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಬಹುದೊಡ್ಡ ಅಚ್ಚರಿ ಅಂದ್ರೆ ಅದು ಆಡಮ್ ಪಾಶಾ. ಯಾಕಂದ್ರೆ, 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಓರ್ವ ಸಲಿಂಗಿ ಸ್ಪರ್ಧಿಯಾಗಿ ಭಾಗವಹಿಸಿದ್ದು ಇದೇ ಮೊದಲು. ಇದೇ ಕಾರಣಕ್ಕೆ ಆಡಮ್ ಪಾಶಾ ಬಗ್ಗೆ ವೀಕ್ಷಕರ ನಿರೀಕ್ಷೆ ತುಸು ಜಾಸ್ತಿ ಇತ್ತು.

ನಾಲ್ಕನೇ ವಾರಕ್ಕೆ ಔಟ್ ಆಗುವ 'ಬಿಗ್ ಬಾಸ್' ಸ್ಪರ್ಧಿ ಆಡಮ್ ಪಾಶಾ ಅಲ್ಲವೇ ಅಲ್ಲ. ಆದರೂ ಆಡಮ್ ಪಾಶಾ 'ಬಿಗ್ ಬಾಸ್' ಮನೆಯಿಂದ ಹೊರಬಂದಿದ್ದಾರೆ. ವೀಕ್ಷಕರ ಬೆಂಬಲದ ಆಧಾರದ ಮೇಲೆ ಆಡಮ್ ಪಾಶಾರನ್ನ ಎಲಿಮಿನೇಟ್ ಮಾಡಲಾಗಿದೆ.

ಆದ್ರೆ, ವೀಕ್ಷಕರೇ ಆಡಮ್ ಪಾಶಾ ಎಲಿಮಿನೇಷನ್ ಬಗ್ಗೆ ಫೇಸ್ ಬುಕ್ ನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆಡಮ್ ಪಾಶಾ ಔಟ್ ಆಗಿರುವ ಬಗ್ಗೆ ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೇಕಾದ್ರೆ ನೀವೇ ಕೆಲ ಕಾಮೆಂಟ್ ಗಳನ್ನು ನೋಡ್ಕೊಂಡ್ ಬನ್ನಿ...

100% ಮೇಲು.!

100% ಮೇಲು.!

''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನ್ಯಾಯವಾಗಿ ಇರೋರಿಗೆ ಬೆಲೆ ಇಲ್ಲ. ಆಂಡ್ರ್ಯೂ, ಕಿರಿಕ್ ರಶ್ಮಿ, ಬಾಯಿಬಡುಕಿ ಸೋನುಗಿಂತ ಆಡಮ್ ಪಾಶಾ 100% ಮೇಲು'' ಎಂಬುದು ವೀಕ್ಷಕರ ಅಭಿಪ್ರಾಯ.

ಲವ್ ಮಾಡೋರಿಗೆ ಮಾತ್ರ ಜಾಗ.!

ಲವ್ ಮಾಡೋರಿಗೆ ಮಾತ್ರ ಜಾಗ.!

ನಿಯತ್ತಾಗಿದ್ದ ಆಡಮ್ ಪಾಶಾ ಎಲಿಮಿನೇಟ್ ಆದ ಕಾರಣ ವೀಕ್ಷಕರಂತೂ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ. ಆಡಮ್ ಪಾಶಾ ಔಟ್ ಆಗಿದ್ದಕ್ಕೆ ವೀಕ್ಷಕರು ಎಷ್ಟು ಕುಪಿತಗೊಂಡಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

ಬೋರ್ ಆಗುತ್ತೆ.!

ಬೋರ್ ಆಗುತ್ತೆ.!

''ಅಡಮ್ ಪಾಶಾಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಿ. ಆತ ಒಳ್ಳೆಯ ಡ್ಯಾನ್ಸರ್. ಒಳ್ಳೆ ಹೃದಯ ಇರುವ ವ್ಯಕ್ತಿ. ಆಡಮ್ ಪಾಶಾ ಔಟ್ ಆದ್ಮೇಲೆ ಬಿಗ್ ಬಾಸ್ ಬೋರಿಂಗ್ ಆಗಿರುತ್ತೆ'' ಅಂತಿದ್ದಾರೆ ವೀಕ್ಷಕರು.

ಡೌನ್ ಡೌನ್ 'ಬಿಗ್ ಬಾಸ್'

ಡೌನ್ ಡೌನ್ 'ಬಿಗ್ ಬಾಸ್'

''ಆಡಮ್ ಪಾಶಾ ಬಗ್ಗೆ ವೀಕ್ಷಕರಿಗೆ ಇರುಸುಮುರುಸು ಇರಲಿಲ್ಲ. ಹೀಗಿದ್ದರೂ, ಅವರನ್ನೇ ಔಟ್ ಮಾಡಿರುವ 'ಬಿಗ್ ಬಾಸ್'ಗೆ ವೀಕ್ಷಕರು ಡೌನ್ ಡೌನ್'' ಎನ್ನುತ್ತಿದ್ದಾರೆ.

ಯಾಕೆ ಕರೆಯಿಸಬೇಕಿತ್ತು.?

ಯಾಕೆ ಕರೆಯಿಸಬೇಕಿತ್ತು.?

''ಇದು ಚೀಟಿಂಗ್.. ಇಂತಹ ಘನ ಕಾರ್ಯಕ್ಕೆ ಆಡಮ್ ಪಾಶಾನ ಯಾಕೆ ಶೋಗೆ ಕರೆಯಿಸಬೇಕಿತ್ತು. ಆಡಮ್ ಪಾಶಾ ರನ್ನ ನಾಮಿನೇಟ್ ಮಾಡಿ ಸೋನು ಪಾಟೀಲ್ ಪಕ್ಷಪಾತ ಮೆರೆದರು. ಈ ಸೀಸನ್ ನಮಗೆ ಇಷ್ಟ ಆಗುತ್ತಿಲ್ಲ. ಮೋಸಗಾರರಿಗೆ ಮಾತ್ರ ಬೆಲೆ ಇಲ್ಲಿ'' ಅಂತ ವೀಕ್ಷಕರೊಬ್ಬರು ಕಾಮೆಂಟ್ ಹಾಕಿದ್ದಾರೆ.

ಜನರ ಹೃದಯ ಗೆದ್ದ ಆಡಮ್

ಜನರ ಹೃದಯ ಗೆದ್ದ ಆಡಮ್

''ಆಟದಲ್ಲಿ ಆಡಮ್ ಪಾಶಾ ಸೋತಿರಬಹುದು. ಆದ್ರೆ, ಆಡಮ್ ಸಾವಿರಾರು ಜನರ ಹೃದಯ ಗೆದ್ದಿದ್ದಾರೆ'' ಎನ್ನುವುದು ವೀಕ್ಷಕರ ಅಭಿಪ್ರಾಯ.

ವಾಪಸ್ ಬರಲಿ.!

ವಾಪಸ್ ಬರಲಿ.!

''ಆಡಮ್ ಪಾಶಾ ವಾಪಸ್ ಬಂದರೆ ತುಂಬಾ ಖುಷಿ ಆಗುತ್ತೆ'' ಎನ್ನುತ್ತಿದ್ದಾರೆ ಪ್ರತಿ ದಿನ 'ಬಿಗ್ ಬಾಸ್' ನೋಡುವ ವೀಕ್ಷಕರು.

ವೇಸ್ಟ್ ಸ್ಪರ್ಧಿಗಳನ್ನು ಬಿಟ್ರಿ ಛೇ.!

ವೇಸ್ಟ್ ಸ್ಪರ್ಧಿಗಳನ್ನು ಬಿಟ್ರಿ ಛೇ.!

''ಬಿಗ್ ಬಾಸ್' ನಿರ್ಧಾರ ಸರಿ ಇಲ್ಲ. ಆಡಮ್ ಪಾಶಾ ರನ್ನ ಎಲಿಮಿನೇಟ್ ಮಾಡಬಾರದಿತ್ತು. ವೇಸ್ಟ್ ಕ್ಯಾಂಡಿಡೇಟ್ ನೆಲ್ಲ ಬಿಟ್ಟು ಆಡಮ್ ನಾ ಎಲಿಮಿನೇಟ್ ಮಾಡಿದ್ರಿ ಛೇ'' ಎಂದು ತಲೆ ಚಚ್ಚಿಕೊಳ್ಳುತ್ತಿದ್ದಾರೆ ವೀಕ್ಷಕರು.

More from Filmibeat

English summary
Bigg Boss Kannada 6: Viewers have taken Colors Super official Facebook page to express their anger for eliminating Adam Pasha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X