ಪ್ರಾಮಾಣಿಕ ಪ್ರಯತ್ನ ಮಾಡಿದ ಆನಂದ ಔಟ್ ಆಗಿದ್ದಕ್ಕೆ ವೀಕ್ಷಕರು ಬೇಸರ.!
'ಬಿಗ್ ಬಾಸ್' ಕಾರ್ಯಕ್ರಮದಿಂದ ರಾಕೇಶ್ ಮತ್ತು ಅಕ್ಷತಾನ ಹೊರಗೆ ಕಳುಹಿಸಿ ಅಂತ ವೀಕ್ಷಕರು ಮೂರ್ನಾಲ್ಕು ವಾರಗಳಿಂದಲೂ ಒತ್ತಾಯ ಮಾಡುತ್ತಲೇ ಇದ್ದಾರೆ. ಕಳೆದ ವಾರ ರಾಕೇಶ್ ನಾಮಿನೇಟ್ ಆಗಿದ್ದರು. ರಾಕೇಶ್ ಔಟ್ ಆದರೆ ಸಾಕು ಅಂತ ಕಾಯುತ್ತಿದ್ದ ವೀಕ್ಷಕರಿಗೆ ಆನಂದ ಎಲಿಮಿನೇಟ್ ಆಗಿದ್ದು ಬೇಸರ ತಂದಿದೆ.
ಹಾಗ್ನೋಡಿದ್ರೆ, ಆನಂದ ಯಾರ ತಂಟೆಗೂ ಹೋದವರಲ್ಲ. ಒಂದೆರಡು ಬಾರಿ ಕಿರಿಕಿರಿ ತಂದಿದ್ದು ಬಿಟ್ಟರೆ, ಆನಂದ 'ಬಿಗ್ ಬಾಸ್' ಮನೆಯಲ್ಲಿ ಸಭ್ಯವಾಗಿ ಆಟ ಆಡಿದ್ದರು.
ಒಳ್ಳೆಯ ಮನಸ್ಸು ಇರುವವರನ್ನು 'ಬಿಗ್ ಬಾಸ್' ಮನೆಯಲ್ಲಿ ಇಟ್ಟುಕೊಳ್ಳದೇ, ವೀಕ್ಷಕರಿಗೆ ಮುಜುಗರ ತರುತ್ತಿರುವವರಿಗೆ 'ಬಿಗ್ ಬಾಸ್' ಚಾನ್ಸ್ ಕೊಟ್ಟಿದ್ದು ನೋಡಿಗರಿಗೆ ಸಿಟ್ಟು ತರಿಸಿದೆ.
ಇದೇ ಸಿಟ್ಟು ಮತ್ತು ಬೇಸರವನ್ನು ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿಯೇ ಹೊರ ಹಾಕಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನು ನೋಡಿರಿ...

ಮುಗ್ಧ ಮನಸ್ಸಿನ ಆನಂದ್
''ಮುಗ್ಧ ಮನಸ್ಸಿನ ಆನಂದ್ ಗೆ ಇನ್ನೊಂದು ಅವಕಾಶ ಕೊಡಬೇಕು. ಬಡತನವನ್ನು ಅಸ್ತ್ರವಾಗಿ ಉಪಯೋಗಿಸದೆ, ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆತನಿಗೆ ಇನ್ನೊಂದು ಚಾನ್ಸ್ ಕೊಡಿ. ಸೀಕ್ರೆಟ್ ರೂಮ್ ಗೆ ಕಳುಹಿಸಿ'' ಅಂತ ವೀಕ್ಷಕರು 'ಬಿಗ್ ಬಾಸ್' ಬಳಿ ಕೇಳಿಕೊಳ್ಳುತ್ತಿದ್ದಾರೆ.

ಆಂಡಿ ಸಹವಾಸ ಕಾರಣ
''ಆನಂದ ಔಟ್ ಆಗಿದ್ದು ಆಂಡ್ರ್ಯೂ ಸಹವಾಸದಿಂದ. ಆನಂದ್ ನ ಬಳಸಿಕೊಂಡು ಆಂಡ್ರ್ಯೂ ಸೇಫ್ ಆದ'' ಎಂದು ಕೆಲ ವೀಕ್ಷಕರು ಆಂಡ್ರ್ಯೂನ ದೂರಿದ್ದಾರೆ.

ಸರಿಯಾಗಿ ಬಳಸಿಕೊಳ್ಳಲಿಲ್ಲ.!
''ಆನಂದ್ ಗೆ ಶಶಿ ಒಮ್ಮೆ ಜೀವದಾನ ಕೊಟ್ಟಿದ್ದರು. ಆದ್ರೆ, ಅದನ್ನ ಆತ ಸರಿಯಾಗಿ ಬಳಸಿಕೊಳ್ಳಲಿಲ್ಲ'' ಎಂಬುದು ಕೆಲ ವೀಕ್ಷಕರ ವಾದ.

ಪಾಪ... ಆನಂದ
ಪಾಪ.. ಆನಂದ.. ಮಗು ತರಹ ಕಣ್ಣೀರು ಹಾಕಿದರು. ಯಾರ ಬಳಿಯೂ ಜಗಳ ಆಡದ ಆನಂದ ಔಟ್ ಆಗಿದ್ದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿರುವ ಪರಿ ಇದು.

ಕ್ಲಿಯರ್ ಹಾರ್ಟ್
''ಬಿಗ್ ಬಾಸ್' ಮನೆಯಲ್ಲಿ ಜಗಳ ಇರಬೇಕು. ಬೆಂಕಿ ಇರಬೇಕು. ಹುಸಿ ಪ್ರೇಮವಾದರೂ ಇರಬೇಕು. ಪಾಪ ಮುಗ್ಧ ಆನಂದ.. ಕ್ಲಿಯರ್ ಹಾರ್ಟ್'' ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











