ಒಳ್ಳೆಯವರನ್ನು ಹೊರಗೆ ತಳ್ಳುವ 'ಡಬ್ಬಾ' ಬಿಗ್ ಬಾಸ್ ಗೆ ಮಹಾ ಮಂಗಳಾರತಿ ಎತ್ತಿದ ವೀಕ್ಷಕರು.!

Recommended Video

Bigg Boss Kannada Season 6: 'ಡಬ್ಬಾ' ಬಿಗ್ ಬಾಸ್ ಗೆ ಮಹಾ ಮಂಗಳಾರತಿ ಎತ್ತಿದ ವೀಕ್ಷಕರು.! |FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ನಿನ್ನೆ ಧನರಾಜ್ ಔಟ್ ಆಗ್ತಾರೆ ಅಂತ ವೀಕ್ಷಕರು ಊಹಿಸಿರಲೇ ಇಲ್ಲ. ಯಾಕಂದ್ರೆ, ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಗಳ ಪೈಕಿ ಧನರಾಜ್ ಕೂಡ ಒಬ್ಬರಾಗಿದ್ದರು.

'ಬಿಗ್ ಬಾಸ್' ಮನೆಯೊಳಗೆ ಧನರಾಜ್ ಅಜಾತಶತ್ರುವಾಗಿದ್ದರು. ಹಾಗೇ, ವೀಕ್ಷಕರ ವಲಯದಲ್ಲೂ ಜೆಂಟಲ್ ಮ್ಯಾನ್ ಧನರಾಜ್ ರನ್ನ ಹೇಟ್ ಮಾಡುವವರು ಯಾರೂ ಇರಲಿಲ್ಲ. ಅಷ್ಟಕ್ಕೂ, 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದ ವಿಶೇಷ ಅತಿಥಿಗಳೇ (ಪ್ರಥಮ್, ಕಿರಿಕ್ ಕೀರ್ತಿ, ಸಂಜನಾ, ಸಮೀರಾಚಾರ್ಯ, ಕೃಷಿ ತಾಪಂಡ) ''ಫಿನಾಲೆ ವಾರಕ್ಕೆ ಹೋಗಲು ಧನರಾಜ್ ಅರ್ಹರು'' ಎಂದಿದ್ದರು. ಸಾಲದಕ್ಕೆ, ನಾಮಿನೇಷನ್ ನಿಂದ ಧನರಾಜ್ ರನ್ನ ಸೇಫ್ ಮಾಡಿದ್ದರು.

ಹೀಗಿದ್ದರೂ, ಟಾಪ್ 6 ಲೆವೆಲ್ ನಲ್ಲಿ ಧನರಾಜ್ ಔಟ್ ಆಗಿದ್ದಾರೆ. 'ಬಿಗ್ ಬಾಸ್' ತಂಡ ಮತ್ತು ಕಲರ್ಸ್ ಸೂಪರ್ ವಾಹಿನಿಯ ಈ ನಿರ್ಧಾರಕ್ಕೆ ವೀಕ್ಷಕರು ಕುಪಿತಗೊಂಡಿದ್ದಾರೆ. ಸ್ಪರ್ಧಿಗಳಿಗೆ ಕಿರುಕುಳ ಕೊಟ್ಟ ಆಂಡಿಯನ್ನು ಟಾಪ್ 5 ಹಂತಕ್ಕೆ ತಳ್ಳಿ, ಸಜ್ಜನ ಧನರಾಜ್ ರನ್ನ ಹೊರಕ್ಕೆ ಹಾಕಿದ 'ಬಿಗ್ ಬಾಸ್'ಗೆ ವೀಕ್ಷಕರು ಮಹಾ ಮಂಗಳಾರತಿ ಮಾಡುತ್ತಿದ್ದಾರೆ.

ಫಿನಾಲೆಗೆ ಹೋಗಬೇಕಿದ್ದ ಧನರಾಜ್ ರನ್ನ ಎವಿಕ್ಟ್ ಮಾಡಿರುವ 'ಬಿಗ್ ಬಾಸ್'ಗೆ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಛೀಮಾರಿ ಹಾಕುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನು ನೋಡಿಕೊಂಡು ಬನ್ನಿ....

ಹೊಲಸು ಫಿಕ್ಸ್ಡ್ ಶೋ.!

ಹೊಲಸು ಫಿಕ್ಸ್ಡ್ ಶೋ.!

''ಬಿಗ್ ಬಾಸ್' ಅಂತಹ ಹೊಲಸು ಫಿಕ್ಸ್ಡ್ ಶೋ ಇನ್ಯಾವುದೂ ಇಲ್ಲ. ಬೇರೆಯವರಿಗೆ ಚಿತ್ರಹಿಂಸೆ ಕೊಡುವ ಆಂಡಿ ಫೈನಲಿಸ್ಟ್.! ವ್ಹಾ.. ಗ್ರೇಟ್ ಬಿಗ್ ಬಾಸ್. ಧನರಾಜ್ ಗೆ ಇರುವ 1% ಫ್ಯಾನ್ಸ್ ಕೂಡ ಆಂಡಿಗೆ ಇಲ್ಲ. ಅನ್ಯಾಯ ಮಾಡ್ತೀರಲ್ರೀ'' ಎಂದು ನಿರಾಸೆಯಿಂದ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅರ್ಹ ವ್ಯಕ್ತಿ

ಅರ್ಹ ವ್ಯಕ್ತಿ

''ಫಿನಾಲೆಗೆ ಹೋಗಲು ಧನರಾಜ್ ಅರ್ಹ ವ್ಯಕ್ತಿ. ಆದ್ರೆ, ಅವರು ಔಟ್ ಆಗಿರುವುದು ತುಂಬಾ ಬೇಸರ ತಂದಿದೆ. ಇಂತಹ ಫಿಕ್ಸಿಂಗ್ ಶೋ ಮಾಡೋದಕ್ಕೆ ಸುದೀಪ್ ಅವರಿಗೆ ನಾಚಿಕೆ ಆಗಬೇಕು'' ಎಂದು ಕಾಮೆಂಟ್ ಹಾಕಿದ್ದಾರೆ ವೀಕ್ಷಕರೊಬ್ಬರು.

ಫೋಟೋಗಳಿಗೆ ಬೆಂಕಿ ಇಡಬೇಡಿ.!

ಫೋಟೋಗಳಿಗೆ ಬೆಂಕಿ ಇಡಬೇಡಿ.!

''ಇನ್ನೂ ಯಾವ ಸೀಸನ್ ನಲ್ಲೂ ಮಿಡ್ ನೈಟ್ ಎವಿಕ್ಷನ್ ನಲ್ಲಿ ಫೋಟೋಗಳಿಗೆ ಬೆಂಕಿ ಇಟ್ಟು ಕಳುಹಿಸಬೇಡಿ. ನಿನ್ನೆ ಧನರಾಜ್ ಗೆ ತುಂಬಾ ನೋವು ಆಯ್ತು. ಅದನ್ನ ನೋಡಿದ ನಮಗೂ ತುಂಬಾ ಫೀಲ್ ಆಯ್ತು. ಬರುವಾಗ ಇದ್ದ ಮರ್ಯಾದೆ ಹೋಗುವಾಗ ಕೂಡ ಕೊಡಬೇಕು'' ಅಂತಿದ್ದಾರೆ ವೀಕ್ಷಕರು.

ಬಿಗ್ ಬಾಸ್ ಮೋಸದಾಟಕ್ಕೆ ಧನರಾಜ್ ಬಲಿ.!

ಬಿಗ್ ಬಾಸ್ ಮೋಸದಾಟಕ್ಕೆ ಧನರಾಜ್ ಬಲಿ.!

''ಬಿಗ್ ಬಾಸ್' ಮುಖವಾಡ ಕಳಚಿ ಬಿದ್ದಿದೆ. ಬಿಗ್ ಬಾಸ್ ಮೋಸದಾಟಕ್ಕೆ ಜೆಂಟಲ್ ಮ್ಯಾನ್ ಧನರಾಜ್ ಬಲಿಯಾಗಿದ್ದಾರೆ'' ಅಂತಾವ್ರೆ ವೀಕ್ಷಕರು.

ಪ್ರತಿಭೆಗೆ ಬೆಲೆ ಕೊಡಿ

ಪ್ರತಿಭೆಗೆ ಬೆಲೆ ಕೊಡಿ

''ಈ ತರಹ ಕೆಟ್ಟ ಶೋ ಮಾಡಿದ್ರೆಷ್ಟು, ಬಿಟ್ಟರೆಷ್ಟು. ಒಳ್ಳೆ ಗುಣ, ಪ್ರತಿಭೆ ಇದ್ದ ಮನುಷ್ಯನ್ನ ಹೊರಗೆ ಹಾಕಿದ್ದೀರಾ. ಕನ್ನಡಿಗನ ಪ್ರತಿಭೆಗೆ ಬೆಲೆ ಕೊಡಿ. ಮಿಸ್ ಯೂ ಧನರಾಜ್'' ಅಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಫೇಕ್ ಶೋ

ಫೇಕ್ ಶೋ

''ಇದು ಪಕ್ಕಾ ಫೇಕ್ ಶೋ. ಇಲ್ಲಿ ಫೇಕ್ ಮುಖವಾಡ ಹಾಕಿಕೊಂಡು ಇದ್ದವರಿಗೆ ಮಾತ್ರ ರಾಜ ಮರ್ಯಾದೆ'' ಎನ್ನುತ್ತಾ 'ಬಿಗ್ ಬಾಸ್' ಟೀಮ್ ಮತ್ತು ಕಲರ್ಸ್ ವಾಹಿನಿ ತಂಡಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

ಡಬ್ಬಾ ಬಿಗ್ ಬಾಸ್

ಡಬ್ಬಾ ಬಿಗ್ ಬಾಸ್

''ಒಳ್ಳೆಯ ವ್ಯಕ್ತಿ ಧನರಾಜ್ ರನ್ನ ಎಲಿಮಿನೇಟ್ ಮಾಡಿ, ಕೇಸ್ ಇರುವ ಆಂಡಿಯನ್ನ ಫೈನಲ್ ಗೆ ಕಳುಹಿಸಿದ್ದೀರಾ.? ಈ ಬಿಗ್ ಬಾಸ್ ನ ನೋಡೋದೇ ವೇಸ್ಟ್. ಮೊದಲು ಈ ಬಿಗ್ ಬಾಸ್ ನ ಬ್ಯಾನ್ ಮಾಡಿ'' ಎಂದು ವೀಕ್ಷಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬನೇ ಪ್ರಾಮಾಣಿಕ.!

ಒಬ್ಬನೇ ಪ್ರಾಮಾಣಿಕ.!

''ಬಿಗ್ ಬಾಸ್ ಕನ್ನಡ-6'ನಲ್ಲಿ ಧನರಾಜ್ ಒಬ್ಬರೇ ಪ್ರಾಮಾಣಿಕ ಅನ್ಸಿದ್ದು'' ಎಂಬ ಮೀಮ್ ಗಳು ಕೂಡ ಹರಿದಾಡುತ್ತಿವೆ.

ಜನರ ಮನಸ್ಸು ಗೆದ್ದಿದ್ದೀರಾ.!

ಜನರ ಮನಸ್ಸು ಗೆದ್ದಿದ್ದೀರಾ.!

''ನೀವು ಎಲಿಮಿನೇಟ್ ಆಗಿರೋದಕ್ಕೆ, ಬಿಗ್ ಬಾಸ್ ಶೋ ನೇ ಡೌಟ್ ಇಂದ ನೋಡ್ತಿದ್ದಾರೆ, ಬೈತಿದ್ದಾರೆ ಅಂದ್ರೆ ನೀವು ಬಿಗ್ ಬಾಸ್ ಗೆಲ್ಲೋದ್ರಲ್ಲಿ ಫೇಲ್ ಆಗಿರಬಹುದು. ಆದ್ರೆ, ಜನರ ಮನಸ್ಸು ಗೆದ್ದಿದ್ದೀರಾ'' ಎಂಬುದು ಬಹುತೇಕರ ಅಭಿಪ್ರಾಯ. (ಫೋಟೋ ಕೃಪೆ: ಟ್ರೋಲ್ ತೀರ್ಥಹಳ್ಳಿ)

More from Filmibeat

English summary
Bigg Boss Kannada 6: Viewers have taken Colors Super official Facebook page to express their anger for eliminating Dhanraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X