ಸುದೀಪ್ ಗೆ ಅಗೌರವ ತೋರಿದ ರಾಕೇಶ್-ಅಕ್ಷತಾ ಬಗ್ಗೆ ವೀಕ್ಷಕರು ಕೆಂಡಾಮಂಡಲ.!
Recommended Video

ರಾಕೇಶ್ ಮತ್ತು ಅಕ್ಷತಾ ನಡುವಿನ 'ಅತಿ ಆತ್ಮೀಯ' ಗೆಳೆತನ 'ಬಿಗ್ ಬಾಸ್' ಮನೆಯಲ್ಲಿ ಇರುವವರಿಗೆ ಮಾತ್ರ ಅಲ್ಲ.. ವೀಕ್ಷಕರಿಗೂ ಕಿರಿಕಿರಿ ತಂದಿದೆ. ಹೀಗಾಗಿ, ಇವರಿಬ್ಬರನ್ನೂ ಹೊರಗೆ ಹಾಕಿ ಅಂತ ವೀಕ್ಷಕರು ಮೊದಲಿನಿಂದಲೂ 'ಬಿಗ್ ಬಾಸ್' ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.
ಕಳೆದ ವಾರವಂತೂ ರಾಕೇಶ್-ಅಕ್ಷತಾ 'Intense ಫ್ರೆಂಡ್ ಶಿಪ್' ಮ್ಯಾಟರ್ 'ಬಿಗ್ ಬಾಸ್' ಮನೆಯಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ರಿಂದ, ಯಾರಿಗೂ ಕೆಟ್ಟ ಹೆಸರು ಬರಬಾರದು ಎಂಬ ಕಾರಣಕ್ಕೆ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಸೂಕ್ಷ್ಮವಾಗಿ ಪರಿಹಾರ ನೀಡಲು ಮುಂದಾದರು.
ಆದ್ರೆ, ಸುದೀಪ್ ಸೂಕ್ಷ್ಮವಾಗಿ ಹೇಳಿದ್ದು 'ಅತಿ ಬುದ್ಧಿವಂತ' ರಾಕೇಶ್ ಮತ್ತು ಅಕ್ಷತಾಗೆ ಅರ್ಥ ಆಗಲಿಲ್ಲ. ವಿವಾದದ ಗಾಂಭೀರ್ಯತೆಯ ಅರಿವು ಕೂಡ ಅವರಿಬ್ಬರಿಗೆ ಇಲ್ಲ.
ತಾವು ಆಡಿದ ಮಾತುಗಳಿಗೆ ಬದ್ಧವಾಗಿ ನಿಲ್ಲದೆ, ಸುದೀಪ್ ಮಾತುಗಳನ್ನು ಅರ್ಥೈಸದೇ, ಸುದೀಪ್ ಗೆ ಅಗೌರವ ತೋರಿದ ರಾಕೇಶ್ ಮತ್ತು ಅಕ್ಷತಾ ವಿರುದ್ಧ ವೀಕ್ಷಕರು ಕೋಪಿಸಿಕೊಂಡಿದ್ದಾರೆ. ರಾಕೇಶ್ ಮತ್ತು ಅಕ್ಷತಾ ಬಗ್ಗೆ ಮುನಿಸಿಕೊಂಡು ವೀಕ್ಷಕರು ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿರಿ...

ದಡ್ಡರಂತೆ ವರ್ತಿಸಿದ ರಾಕೇಶ್-ಅಕ್ಷತಾ
''ಸುದೀಪ್ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ, ರಾಕೇಶ್-ಅಕ್ಷತಾ ದಡ್ಡರಂತೆ ವರ್ತಿಸಿದರು. ವಾಸ್ತವದ ಅರಿವು ಮೂಡಿಸಲು ಪ್ರಯತ್ನಿಸಿದ ಸುದೀಪ್ ಗೆ ಅಗೌರವ ತೋರಿಸಿದ್ದಾರೆ. ಒಳ್ಳೆಯದ್ದಕ್ಕೆ ಹೇಳಿದರೆ, ಕೇಳಿ ಸುಧಾರಿಸಬೇಕು ಎಂಬ ಪರಿಜ್ಞಾನ ಇಬ್ಬರಿಗೂ ಇಲ್ಲ. ನಾಯಿ ಬಾಲ ಯಾವಾಗಲೂ ಡೊಂಕು'' ಅನ್ನೋದು ವೀಕ್ಷಕರ ಅಭಿಪ್ರಾಯ.

ಸ್ನೇಹ ಎಂಬ ಪವಿತ್ರ ಸಂಬಂಧಕ್ಕೆ ಮಸಿ
''ಸ್ನೇಹ ಎಂಬ ಪವಿತ್ರ ಸಂಬಂಧಕ್ಕೆ ಮಸಿ ಬಳಿಯುತ್ತ ರಾಕೇಶ್-ಅಕ್ಷತಾ ನಡೆದುಕೊಳ್ಳುತ್ತಿರುವ ಲೀಲೆಗಳು ವೀಕ್ಷಕರಿಗೆ ಬೇಸರ ತಂದಿದೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಗೆ ಎಷ್ಟು ಜನ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಹಾಗೇ ಸ್ವಲ್ಪ ಕಣ್ಣಾಡಿಸಿ.

ಅಕ್ಷತಾ ಕಂಡ್ರೆ ಆಗಲ್ಲ.!
ಏನೋ ಕೇಳುವ.. ಇನ್ನೇನೋ ಹೇಳುವ.. ಒಮ್ಮೊಮ್ಮೆ ಒಂದೊಂದು ರೀತಿ ಹೇಳಿಕೆ ಕೊಡುವ ಅಕ್ಷತಾ ಬಗ್ಗೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಬೇಸರ ಇದೆ. ಅದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.

ಮೊದಲು ಹೊರಗೆ ಹಾಕಿ.!
''ಅದು 'ಬಿಗ್ ಬಾಸ್' ಮನೆಯೋ.. ಪಾರ್ಕೋ.. ಮೊದಲು ಅವರಿಬ್ಬರನ್ನು ಹೊರಗೆ ಹಾಕಿ'' ಎಂಬುದು ಹಲವರ ಆಗ್ರಹ.

ಯಾರು ವೋಟ್ ಹಾಕಿದವರು.?
ಕಳೆದ ವಾರ ಡೇಂಜರ್ ಝೋನ್ ನಿಂದ ಬಚಾವ್ ಆಗಿದ್ರಿಂದ, ''ರಾಕೇಶ್ ಗೆ ಯಾರು ವೋಟ್ ಮಾಡ್ತಿದ್ದಾರೆ.?'' ಎಂಬ ಅನುಮಾನ ವೀಕ್ಷಕರಿಗೆ ಕಾಡುತ್ತಿದೆ.

ಯೋಗ್ಯತೆ ಇಲ್ಲ
''ರಾಕೇಶ್-ಅಕ್ಷತಾಗೆ ಸುದೀಪ್ ಒಳ್ಳೆಯದನ್ನೇ ಹೇಳಿದರೂ, ಅದನ್ನ ತಿಳಿದುಕೊಳ್ಳುವ ಯೋಗ್ಯತೆ ಅವರಿಗೆ ಇಲ್ಲ'' ಅಂತ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ.

ಇದು ಬೇಕಿತ್ತಾ.?
''ರಾಕೇಶ್ ಮತ್ತು ಅಕ್ಷತಾಗೆ ಒಂದು ಗಂಟೆ ಕೊಡಬೇಕಿತ್ತಾ.? ಅಷ್ಟೊಂದು ಸಮಯ ಕೊಟ್ಟರೂ, ಅವರಿಗೆ ಏನೂ ಅರ್ಥ ಅಗಿಲ್ಲ. ಸುದೀಪ್ ಮಾತಿಗೆ ಬೆಲೆ ಇಲ್ಲ. ಇದು ಬೇಕಿತ್ತಾ.?'' ಅನ್ನೋದು ವೀಕ್ಷಕರ ಪ್ರಶ್ನೆ.

ವೈಲ್ಡ್ ಕಾರ್ಡ್ ಎಂಟ್ರಿ
''ರಾಕೇಶ್ ರವರ ಈಗಿನ ಗರ್ಲ್ ಫ್ರೆಂಡ್ ಮತ್ತು ಅಕ್ಷತಾ ಪತಿಯನ್ನ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ 'ಬಿಗ್ ಬಾಸ್' ಮನೆಯಲ್ಲಿ ಕಳುಹಿಸಿ'' ಎಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ.


Click it and Unblock the Notifications











