For Quick Alerts
  ALLOW NOTIFICATIONS  
  For Daily Alerts

  ಈ ಪ್ರಾಂಕ್ ಬೇಕಿತ್ತಾ 'ಬಿಗ್ ಬಾಸ್'.? ಇದನ್ನೆಲ್ಲ ನೋಡುವ ಕರ್ಮ ನಮಗ್ಯಾಕೆ.?

  |
  Bigg Boss Kannada 6 : ಈ ಪ್ರಾಂಕ್ ಬೇಕಿತ್ತಾ 'ಬಿಗ್ ಬಾಸ್'.? ಇದನ್ನೆಲ್ಲ ನೋಡುವ ಕರ್ಮ ನಮಗ್ಯಾಕೆ.?

  ಮಿಡ್ ವೀಕ್ ಎಲಿಮಿನೇಷನ್ ನಡೆಯುವಂತೆ 'ಬಿಗ್ ಬಾಸ್' ಪ್ರಾಂಕ್ ಚಟುವಟಿಕೆ ನೀಡುವುದು.. ಅಕ್ಷತಾ ವಿರುದ್ಧ ಅತಿ ಹೆಚ್ಚು ಮತ ಬರುವ ಹಾಗೆ ಕಂಡೀಷನ್ ಹಾಕುವುದು.. ಅಕ್ಷತಾ ಔಟ್ ಆಗುವುದು.. ರಾಕೇಶ್ ಕಣ್ಣೀರು ಸುರಿಸುವುದು.. ಕೊನೆಗೆ ರಾಕೇಶ್-ಅಕ್ಷತಾ ತಬ್ಬಿಕೊಳ್ಳುವುದು.. ಇದನ್ನೆಲ್ಲ ನೋಡುವ ಕರ್ಮ ನಮಗ್ಯಾಕೆ.? - ಹೀಗಂತ ಪ್ರಶ್ನೆ ಮಾಡುತ್ತಿರುವವರು ನಾವಲ್ಲ. ಬದಲಾಗಿ 'ಬಿಗ್ ಬಾಸ್' ಕಾರ್ಯಕ್ರಮವನ್ನು ಪ್ರತಿ ನಿತ್ಯ ನೋಡುತ್ತಿರುವ ವೀಕ್ಷಕರು.!

  ''ಪ್ರಾಂಕ್ ಮಾಡಲು ಹೋಗಿ ರಾಕೇಶ್-ಅಕ್ಷತಾಗೆ ರೋಮ್ಯಾನ್ಸ್ ಮಾಡುವ ಅವಕಾಶ ಕೊಟ್ಟ ಹಾಗೆ ಆಯ್ತು. ಇದನ್ನೆಲ್ಲ ನೋಡಕ್ಕಾಗಲ್ಲ'' ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಮೂಗು ಮೂರಿಯುತ್ತಿದ್ದಾರೆ.

  ನಿನ್ನೆಯಷ್ಟೇ 'ಬಿಗ್ ಬಾಸ್' ಕೊಟ್ಟಿದ್ದ ಪ್ರಾಂಕ್ ಚಟುವಟಿಕೆ ಮತ್ತು ಅದರಲ್ಲಿ ನಡೆದ ಹೈಡ್ರಾಮಾನ ನೋಡಿ, ಬೇಸರಗೊಂಡ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಮುಂದೆ ಓದಿರಿ...

  ನೋಡಲು ಆಗಲ್ಲ ಕರ್ಮ.!

  ನೋಡಲು ಆಗಲ್ಲ ಕರ್ಮ.!

  ''ಮನೆಯಲ್ಲಿ ಎಲ್ಲರೂ ಸೇರಿಕೊಂಡು ಅಕ್ಷತಾ-ರಾಕೇಶ್ ನ ಪ್ರಾಂಕ್ ಮಾಡಿ, ಕೊನೆಗೆ ಸತ್ಯ ಹೇಳಿ ಅವರಿಬ್ಬರು ಅಪ್ಪಿಕೊಳ್ಳುವ ತರಹ ಮಾಡಿದರು. ರೋಮ್ಯಾನ್ಸ್ ಮಾಡೋಕೆ ಒಳ್ಳೆ ಅವಕಾಶ ಮಾಡಿಕೊಟ್ಟ ಹಾಗೆ ಆಯ್ತು. ನೋಡಲು ಆಗಲ್ಲ.. ಕರ್ಮ.. ಅವರಿಬ್ಬರಲ್ಲಿ ಯಾರಾದರೂ ಒಬ್ಬರನ್ನ ಮನೆಯಿಂದ ಹೊರಗೆ ಕಳಿಸಿ'' ಎಂದು ವೀಕ್ಷಕರೊಬ್ಬರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಹೈಡ್ರಾಮಾ: ಬಕ್ರಾ ಆದ ರಾಕೇಶ್-ಅಕ್ಷತಾ.!

  ಓವರ್ ಆಕ್ಟಿಂಗ್ ನೋಡಲು ಆಗಲ್ಲ.!

  ಓವರ್ ಆಕ್ಟಿಂಗ್ ನೋಡಲು ಆಗಲ್ಲ.!

  ಅಕ್ಷತಾ ಮತ್ತು ರಾಕೇಶ್ ರಿಂದ ವೀಕ್ಷಕರು ಎಷ್ಟು ಕಿರಿಕಿರಿಗೊಂಡಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಗಳು ಸಾಕ್ಷಿ.

  ಅಕ್ಷತಾಗೆ ರಾಕೇಶ್ ಕಡೆಯಿಂದ ಟಾರ್ಚರ್: ರಾಕಿ ಕಾಲಿಗೆ ಬಿದ್ದ ಅಕ್ಷ್.!

  ವೀಕ್ಷಕರಿಗೆ ಟಾರ್ಚರ್.!

  ವೀಕ್ಷಕರಿಗೆ ಟಾರ್ಚರ್.!

  ''ನಿನ್ನಿಂದ ನನಗೆ ಟಾರ್ಚರ್ ಆಗುತ್ತಿದೆ'' ಎಂದು ರಾಕೇಶ್ ಗೆ ಅಕ್ಷತಾ ಹೇಳಿದ್ದರು. ಆದ್ರೆ, ಅಸಲಿಗೆ ಟಾರ್ಚರ್ ಆಗುತ್ತಿರುವುದು ವೀಕ್ಷಕರಿಗೆ.. ಅದು ರಾಕೇಶ್-ಅಕ್ಷತಾ ಕಡೆಯಿಂದ.!

  ರಾಕೇಶ್-ಅಕ್ಷತಾ ಹೊರಹಾಕುವಂತೆ ಮೈಸೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ

  ಇದೆಲ್ಲ ಬೇಕಿತ್ತಾ.?

  ಇದೆಲ್ಲ ಬೇಕಿತ್ತಾ.?

  ''ರಾಕೇಶ್-ಅಕ್ಷತಾ ಬಗ್ಗೆ ಪ್ರಾಂಕ್ ಮಾಡುವ ಅವಶ್ಯಕತೆ ಏನಿತ್ತು.? ಇಬ್ಬರ ಬಾಂಡಿಂಗ್ ತೋರಿಸಿ ಏನು ಸಾಬೀತು ಮಾಡಬೇಕಿತ್ತು.? ಯಾಕೆ ಅವರನ್ನು ಹೈಲೈಟ್ ಮಾಡುತ್ತಿದ್ದೀರಾ.? ಅವರಿಬ್ಬರನ್ನು ನೋಡುವ ಇಂಟ್ರೆಸ್ಟ್ ಪಬ್ಲಿಕ್ ಗೆ ಇಲ್ಲ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

  ಸುದೀಪ್ ಗೆ ಅಗೌರವ ತೋರಿದ ರಾಕೇಶ್-ಅಕ್ಷತಾ ಬಗ್ಗೆ ವೀಕ್ಷಕರು ಕೆಂಡಾಮಂಡಲ.!

  ನಾಳೆ ನಿಜ ಆಗಲಿ.!

  ನಾಳೆ ನಿಜ ಆಗಲಿ.!

  ''ಇದು ಟ್ರೈಯಲ್.. ಶನಿವಾರ ರಿಯಲ್.. ಅಕ್ಷತಾ ಗ್ಯಾರೆಂಟಿ ಔಟ್ ಆಗುತ್ತಾರೆ. ರಾಕೇಶ್ ಗೆ ಸ್ವಲ್ಪ ಪ್ರ್ಯಾಕ್ಟೀಸ್ ಆಗಲಿ ಅಂತ ಈ ಪ್ರಾಂಕ್ ಮಾಡಿಸಿದ್ದು'' ಅಂತ ವ್ಯಂಗ್ಯವಾಡಿದ್ದಾರೆ ವೀಕ್ಷಕರೊಬ್ಬರು.

  ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನನ್ನಬೇಕು.?

  ರಾಕೇಶ್ ರಿಂದ ದೂರ ಸರಿದರೆ...

  ರಾಕೇಶ್ ರಿಂದ ದೂರ ಸರಿದರೆ...

  ಇತರೆ ಮಹಿಳಾ ಸ್ಪರ್ಧಿಗಳಿಗೆ ಹೋಲಿಸಿದರೆ, ಅಕ್ಷತಾ ಪ್ರಬುದ್ಧ ಸ್ಪರ್ಧಿ. ರಾಕೇಶ್ ಗೆಳೆತನದಿಂದ ದೂರ ಸರಿದರೆ, ಆಕೆ ಖಂಡಿತ ಫೈನಲ್ ತಲುಪಬಹುದು. ಮುಂದಿನ ದಿನಗಳಲ್ಲಾದರೂ, ಆಕೆ ಚೆನ್ನಾಗಿ ಪರ್ಫಾಮ್ ಮಾಡಲಿ ಅನ್ನೋದು ವೀಕ್ಷಕರ ಆಸೆ.

  English summary
  Bigg Boss Kannada 6: Viewers are annoyed with Bigg Boss for playing prank with Akshata and Rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X