'ಬಿಗ್ ಬಾಸ್' ಮನೆಯ ರಿಮೋಟ್ ಗ್ಯಾಂಗ್ ನಲ್ಲಿ ಸದ್ಯದಲ್ಲೇ ಒಡಕು ಮೂಡೋದು ಪಕ್ಕಾ.!
'ಬಿಗ್ ಬಾಸ್' ಮನೆಯಲ್ಲಿ ಜಯಶ್ರೀ ಒಂಥರಾ ರಿಮೋಟ್ ಇದ್ದ ಹಾಗೆ. ಆ ರಿಮೋಟ್ ಗೆ ಶಶಿ ಮತ್ತು ಕವಿತಾ ಎಂಬ ಇಬ್ಬರು ಶೆಲ್ ಗಳು. ಇನ್ನೂ ರಿಮೋಟ್ ಗೆ ಪ್ಲಾಸ್ಟಿಕ್ ಕವರ್ ಆಗಿರೋದು ಧನರಾಜ್. ಈ ನಾಲ್ವರದ್ದು ಒಂದು ಗುಂಪು. ಅದಕ್ಕೆ 'ರಿಮೋಟ್ ಗ್ಯಾಂಗ್' ಎಂಬ ಹೆಸರು.!
ಈ ರಿಮೋಟ್ ಗ್ಯಾಂಗ್ ಸದ್ಯದಲ್ಲೇ ಒಡೆದು ಚೂರು ಚೂರು ಆಗಲಿದೆ ಎಂಬುದು ವೀಕ್ಷಕರ ಲೆಕ್ಕಾಚಾರ. ಯಾಕಂದ್ರೆ, ಕೆಲ ಚಟುವಟಿಕೆಗಳಲ್ಲಿ ಶಶಿ ಮತ್ತು ಕವಿತಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇತ್ತ ಜಯಶ್ರೀ ಮುಂದೆ ಕವಿತಾ ತೀರಾ ಆತ್ಮೀಯವಾಗಿ ಕಂಡು ಬಂದರೂ, ಆಕೆಯ ಬೆನ್ನಿಗೆ ಚೂರಿ ಹಾಕಿ ನಾಮಿನೇಟ್ ಮಾಡಿರುವುದು ವೀಕ್ಷಕರಿಗೆ ಆಶ್ಚರ್ಯವಾಗಿದೆ.
ಕವಿತಾ ಡಬಲ್ ಗೇಮ್ ಆಡಿರುವುದು ವೀಕ್ಷಕರಿಗೆ ವಿಚಿತ್ರ ಎನಿಸಿದೆ. ಹೀಗಾಗಿ, ಇನ್ನು ಕೆಲವೇ ದಿನಗಳಲ್ಲಿ ರಿಮೋಟ್ ಗ್ಯಾಂಗ್ ನಲ್ಲಿ ಬಿರುಕು ಮೂಡಲಿದೆ ಅಂತ ವೀಕ್ಷಕರು ಅಂದಾಜಿಸಿದ್ದಾರೆ. ಅಲ್ಲದೇ, ಜಯಶ್ರೀಯನ್ನ ನಾಮಿನೇಟ್ ಮಾಡಿದ ಕವಿತಾ ಬಗ್ಗೆ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ಬೇಸರ ವ್ಯಕ್ತಪಡಿಸಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ಸ್ ನೋಡಿ...

ಡವ್ ರಾಣಿ ಕವಿತಾ
'ಬಿಗ್ ಬಾಸ್' ಮನೆಯಲ್ಲಿ ಕವಿತಾ ಆಟವನ್ನ ನೋಡಿ ವೀಕ್ಷಕರು 'ಡವ್ ರಾಣಿ' ಅಂತ ಕರೆಯುತ್ತಿದ್ದಾರೆ. ಜಯಶ್ರೀ ಬಗ್ಗೆ ಬತ್ತಿ ಇಟ್ಟ ಕವಿತಾ ಬಗ್ಗೆ ವೀಕ್ಷಕರು ಬೇಜಾರು ಮಾಡಿಕೊಂಡಿದ್ದಾರೆ.

ಬಿಟ್ಟು ಕೊಟ್ಟಿದ್ದು ಯಾಕೆ.?
''ಫ್ರೆಂಡ್ಸ್ ಅಂದ್ರೆ ಒಬ್ಬರಿಗೊಬ್ಬರು ಬಿಟ್ಟುಕೊಡಬಾರದು. ತಪ್ಪಾದರೆ, ನೇರವಾಗಿ ತಿಳಿಸಿ ಹೇಳಬೇಕು. ಕವಿತಾ ನಾಮಿನೇಟ್ ಮಾಡಿರುವುದು ಜಯಶ್ರೀಗೆ ಗೊತ್ತಾಗಬೇಕು. ಜಯಶ್ರೀಗೆ ಇದು ಹರ್ಟ್ ಆಗಬಹುದು'' ಎಂಬುದು ವೀಕ್ಷಕರ ಅಭಿಪ್ರಾಯ.

ಯಾರು ಯಾರಿಗೂ ಇಲ್ಲ.!
''ಜಯಶ್ರೀಯನ್ನ ಕವಿತಾ ನಾಮಿನೇಟ್ ಮಾಡಿದರು. ಇದರಿಂದಲೇ ಗೊತ್ತಾಗುತ್ತೆ, ಅಲ್ಲಿ ಯಾರಿಗೆ ಯಾರೂ ಇಲ್ಲ. ಕೆಲವೇ ವಾರಗಳಲ್ಲಿ ರಿಮೋಟ್ ಗ್ಯಾಂಗ್ ನಲ್ಲಿ ಬಿರುಕು ಮೂಡುತ್ತೆ. ಶೋ ಗೆಲ್ಲಬೇಕಾದರೆ, ಎಲ್ಲರೂ ಸ್ವಾರ್ಥಿ ಆಗುತ್ತಾರೆ'' ಅಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಅಭಿಪ್ರಾಯ ಏನು.?
ಜಯಶ್ರೀಯನ್ನ ಕವಿತಾ ನಾಮಿನೇಟ್ ಮಾಡಿದ್ದು ಸರಿ ಅಂತ ನಿಮಗೆ ಅನ್ಸುತ್ತಾ.? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











