'ಬಿಗ್ ಬಾಸ್' ವೋಟಿಂಗ್ ಈಗ ಸಿಕ್ಕಾಪಟ್ಟೆ ಸಿಂಪಲ್: ಎಸ್.ಎಂ.ಎಸ್ ಕಳುಹಿಸುವ ಅಗತ್ಯ ಇಲ್ಲ.!
ತಮ್ಮ ನೆಚ್ಚಿನ ಸ್ಪರ್ಧಿಗಳನ್ನ 'ಬಿಗ್ ಬಾಸ್' ಮನೆಯಲ್ಲಿ ಉಳಿಸಲು ವೀಕ್ಷಕರು ಎಸ್.ಎಂ.ಎಸ್ ಮೂಲಕ ಮತ ಚಲಾಯಿಸಬೇಕಿತ್ತು. ಈ ಹಿಂದಿನ ಐದು ಕನ್ನಡ 'ಬಿಗ್ ಬಾಸ್' ಸೀಸನ್ ಗಳಲ್ಲಿ ಎಸ್.ಎಂ.ಎಸ್ ಮೂಲಕವೇ ಸ್ಪರ್ಧಿಗಳ ಭವಿಷ್ಯ ನಿರ್ಧಾರ ಆಗಿತ್ತು.
ಇಷ್ಟದ ಸ್ಪರ್ಧಿಗಳನ್ನು ಡೇಂಜರ್ ಝೋನ್ ನಿಂದ ಬಚಾವ್ ಮಾಡಲು ಎಷ್ಟೋ ವೀಕ್ಷಕರು ಸಾವಿರಾರು ರೂಪಾಯಿ ಕರೆನ್ಸಿಗೆ ಖರ್ಚು ಮಾಡಿರುವ ಉದಾಹರಣೆ ಇದೆ. ಆದ್ರೆ, ಈ ಬಾರಿ ಹಾಗಾಗಲ್ಲ.!
ನಿಮ್ಮ ಫೇವರಿಟ್ ಸ್ಪರ್ಧಿಗಳನ್ನ ಸೇಫ್ ಮಾಡಲು ನೀವು ಕರೆನ್ಸಿ ಖಾಲಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದು ಅದಕ್ಕೆ ಡೇಟ್ ಪ್ಯಾಕ್ ಇದ್ದರೆ ಮಸ್ತ್ ಆಯ್ತು.!

ಹೌದು, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ನೀವು ಸ್ಪರ್ಧಿಗಳನ್ನ ಸೇಫ್ ಮಾಡಲು Voot ನಲ್ಲಿ ವೋಟ್ ಮಾಡಬೇಕು. ಮೊಬೈಲ್ ನಲ್ಲಿ ವೂಟ್ ಆಪ್ ಡೌನ್ ಲೋಡ್ ಮಾಡಿಯಾದರೂ ವೋಟ್ ಮಾಡಬಹುದು. ಇಲ್ಲಾಂದ್ರೆ, voot.comಗೆ ಭೇಟಿ ಕೊಟ್ಟು ಮತ ಚಲಾಯಿಸಬಹುದು.
ಅಷ್ಟಕ್ಕೂ, ವೂಟ್ ನಲ್ಲಿ ವೋಟ್ ಮಾಡುವ ಕಾನ್ಸೆಪ್ಟ್ ಹಿಂದಿ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಚಾಲ್ತಿ ಇದೆ. ಈಗ ಅದೇ ಕಾನ್ಸೆಪ್ಟ್ ಕನ್ನಡಕ್ಕೂ ಬಂದಿದೆ. ಸ್ಪರ್ಧಿಗಳಿಗೆ ಎಷ್ಟು ಬಾರಿಯಾದರೂ ವೀಕ್ಷಕರು ಮತ ಹಾಕುವ ಆಪ್ಷನ್ ಕೊಡಲಾಗಿದೆ. ಹಾಗಾದ್ರೆ, ಇನ್ಯಾಕೆ ತಡ... ನಿಮ್ಮ ಫೇವರಿಟ್ ಸ್ಪರ್ಧಿಗಳನ್ನ ಉಳಿಸಿಕೊಳ್ಳುವ ಕಡೆ ಗಮನ ಕೊಡಿ...


Click it and Unblock the Notifications











