ಆಂಡ್ರ್ಯೂ-ಧನರಾಜ್ ಕಿತ್ತಾಟ: ವೀಕ್ಷಕರ ಸಪೋರ್ಟ್ ಯಾರಿಗೆ.?

ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲೋದ್ರಲ್ಲಿ ಆಂಡ್ರ್ಯೂ ಸದಾ ಮುಂದು. ಅದಾಗಲೇ 'ಬಿಗ್ ಬಾಸ್' ಮನೆಯ ಹಲವು ಸ್ಪರ್ಧಿಗಳ ಜೊತೆಗೆ ಆಂಡ್ರ್ಯೂ ಕಿತ್ತಾಟ ಮಾಡಿಕೊಂಡಿದ್ದು ಆಗಿದೆ. ಮೊನ್ನೆಯಂತೂ ಕ್ಷುಲ್ಲಕ ಕಾರಣಕ್ಕೆ ಆಂಡ್ರ್ಯೂ-ಧನರಾಜ್ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಗಲಾಟೆಯಲ್ಲಿ ಹಲವು ಸ್ಪರ್ಧಿಗಳು ಧನರಾಜ್ ಪರ ದನಿಯೆತ್ತಿದರು. ಹಾಗಾದ್ರೆ, ವೀಕ್ಷಕರು ಕೂಡ ಆಂಡ್ರ್ಯೂ ವಿರುದ್ಧವಾಗಿದ್ದಾರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಧನರಾಜ್-ಆಂಡ್ರ್ಯೂ ನಡುವೆ ಆದ ಗಲಾಟೆ ಬಗ್ಗೆ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಧನರಾಜ್ ಪರವಾಗಿ ವೀಕ್ಷಕರು ಇದ್ದಾರೋ, ಇಲ್ವೋ ಎಂಬುದನ್ನ ನೀವೇ ನೋಡಿ, ಕೆಳಗಿರುವ ಕಾಮೆಂಟ್ಸ್ ನಲ್ಲಿ...

ಧನರಾಜ್ ಗೆ ವೀಕ್ಷಕರ ಸಪೋರ್ಟ್

ಧನರಾಜ್ ಗೆ ವೀಕ್ಷಕರ ಸಪೋರ್ಟ್

''ಅಪ್ಪನ ಬಗ್ಗೆ ಮಾತನಾಡಿದರೆ ಯಾರಿಗಾದರೂ ಸಿಟ್ಟು ಬರುತ್ತೆ ತಾನೇ.? ಈ ಜಗಳದಲ್ಲಿ ನಾನು ಧನರಾಜ್ ಗೆ ಸಪೋರ್ಟ್ ಮಾಡುವೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಆಂಡ್ರ್ಯೂ ವಿರುದ್ಧವಾಗಿಯೂ ಕಾಮೆಂಟ್ಸ್ ಬಂದಿವೆ.

ಆಂಡ್ರ್ಯೂ ತಪ್ಪಿದೆ

ಆಂಡ್ರ್ಯೂ ತಪ್ಪಿದೆ

''ಜಗಳದಲ್ಲಿ ಫ್ಯಾಮಿಲಿಯನ್ನ ತರಬೇಡಿ ಅಂತ ಧನರಾಜ್ ಹಲವು ಬಾರಿ ಮನವಿ ಮಾಡಿದ್ದಾರೆ. ಇದರಲ್ಲಿ ಆಂಡ್ರ್ಯೂ ತಪ್ಪಿದೆ. ಕಾಮಿಡಿ ಅಂತ ಏನೇನೋ ಮಾಡಲು ಹೋದರೆ ಅತಿಯಾಗುತ್ತೆ'' ಎನ್ನುತ್ತಿದ್ದಾರೆ ವೀಕ್ಷಕರು.

ಸಿಕ್ಕಿದ್ದೇ ಚಾನ್ಸ್

ಸಿಕ್ಕಿದ್ದೇ ಚಾನ್ಸ್

''ಧನರಾಜ್ ಗುಂಪು ಅಡುಗೆ ಮನೆಯಲ್ಲಿ ಇದೆ. ಆಂಡ್ರ್ಯೂ ಒಬ್ಬ ಬೇರೆ ಗುಂಪು ಅಲ್ಲವೇ. ಅದಕ್ಕೆ ಅಡುಗೆ ಮನೆಗೆ ಬರಬೇಡ ಅಂದ. ಇನ್ನೂ ಆಂಡ್ರ್ಯೂ ಕೇಳಬೇಕಾ. ಸಿಕ್ಕಿದ್ದೇ ಚಾನ್ಸ್ ಅನ್ಕೊಂಡು ಜಗಳ ಶುರು ಮಾಡ್ತಾನೆ'' ಎಂಬುದು ವೀಕ್ಷಕರ ಅಭಿಪ್ರಾಯ.

ಇಬ್ಬರದ್ದೂ ತಪ್ಪಿದೆ

ಇಬ್ಬರದ್ದೂ ತಪ್ಪಿದೆ

''ಇದರಲ್ಲಿ ಇಬ್ಬರದ್ದೂ ತಪ್ಪು. ಆದರೆ ಧನರಾಜ್ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬಿಗ್ ಬಾಸ್ ಅಧಿಕಾರ ಕೊಟ್ಟರೆ ನಿನ್ನ ಮೇಲೆ ಉಪಯೋಗಿಸುತ್ತೇನೆ ಎಂದದ್ದು ದೊಡ್ಡ ತಪ್ಪು'' ಅಂತಾವ್ರೆ ವೀಕ್ಷಕರು.

ಎಲ್ಲವೂ ಸ್ಕ್ರಿಪ್ಟೆಡ್

ಎಲ್ಲವೂ ಸ್ಕ್ರಿಪ್ಟೆಡ್

''ಇದೆಲ್ಲ ಟಿ.ಆರ್.ಪಿ ಸ್ಟಂಟ್. 'ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಅವಶ್ಯಕತೆ ಇಲ್ಲ. ಜಗಳದಲ್ಲಿ ಅಷ್ಟೊಂದು ಎಳೆಯುವಂಥದ್ದು ಏನೂ ಇರಲಿಲ್ಲ. ಆದರೂ ದೊಡ್ಡ ಜಗಳ ಆಯ್ತು. ಶೋ ಸ್ಕ್ರಿಪ್ಟೆಡ್ ಅನ್ನೋದಕ್ಕೆ ಇದೇ ಸಾಕ್ಷಿ'' ಎನ್ನುವುದು ಕೆಲವರ ಅಭಿಪ್ರಾಯ.

More from Filmibeat

English summary
Bigg Boss Kannada 6 Viewers have taken Colors Super Facebook Page to express their opinion on Andrew-Dhanraj fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X