ಕವಿತಾ-ಆಂಡ್ರ್ಯೂ ರಂಪಾಟ: ಇಬ್ಬರಲ್ಲಿ ಯಾರು ಸರಿ.? ಯಾರು ತಪ್ಪು.?

Recommended Video

Bigg Boss Kannada season 6: ಕವಿತಾ-ಆಂಡ್ರ್ಯೂ ರಂಪಾಟ: ಇಬ್ಬರಲ್ಲಿ ಯಾರು ಸರಿ.? ಯಾರು ತಪ್ಪು.?

''ಆಂಡ್ರ್ಯೂ ವರ್ತನೆ ಸರಿ ಇಲ್ಲ ಅಂತ ಜಯಶ್ರೀ ಮತ್ತು ಶಶಿ ಹೇಳಿದ್ಮೇಲೆ ಕವಿತಾಗೆ ಜ್ಞಾನೋದಯ ಆಗಿದೆ. ಅಲ್ಲಿಯವರೆಗೂ ಕವಿತಾಗೆ ಎಲ್ಲವೂ ಚೆನ್ನಾಗಿತ್ತಾ.? ಇದೆಲ್ಲಾ ನಾನ್ ಸೆನ್ಸ್'' - ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ 'ಬಿಗ್ ಬಾಸ್' ವೀಕ್ಷಕರೇ ಆಡಿರುವ ಮಾತುಗಳಿವು.!

ನಾಮಿನೇಷನ್ ನಿಂದ ಸೇಫ್ ಆಗುವ ಕಾರಣಕ್ಕೆ ಡೀಲ್ ಗೆ ಒಪ್ಪಿಕೊಂಡ ಕವಿತಾ ಇದೀಗ ಆಂಡ್ರ್ಯೂ ವಿರುದ್ಧ ಬೆಟ್ಟು ಮಾಡಿ ತೋರಿಸುತ್ತಿರುವುದು ಸರಿ ಅಲ್ಲ ಅನ್ನೋದು ಬಹುತೇಕ ವೀಕ್ಷಕರ ಅಭಿಪ್ರಾಯವಾಗಿದೆ.

ನಾಮಿನೇಷನ್ ಮತ್ತು ನ್ಯಾಯ ಇಲ್ಲಿದೆ ಚಟುವಟಿಕೆ ವೇಳೆ ಆಂಡ್ರ್ಯೂ ಮತ್ತು ಕವಿತಾ ವರ್ತನೆಯನ್ನ ಗಮನಿಸಿದ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ವೀಕ್ಷಕರ ಸಪೋರ್ಟ್ ಯಾರಿಗಿದೆ ಅಂತ ನೀವೇ ನೋಡಿರಿ ಕೆಳಗಿರುವ ಕಾಮೆಂಟ್ ಗಳಲ್ಲಿ...

ನೈಜ ಆಟಗಾರ ಯಾರು.?

ನೈಜ ಆಟಗಾರ ಯಾರು.?

''ಕವಿತಾ ಗೌಡಗೆ ಹೋಲಿಸಿದರೆ ಆಂಡ್ರ್ಯೂ ನೈಜ ಆಟಗಾರ. ಆಂಡ್ರ್ಯೂ ನೇರವಾಗಿ ಮಾತನಾಡುವ ವ್ಯಕ್ತಿ. ಹೀಗಾಗಿ ಆತನಿಗೆ ಶತ್ರುಗಳು ಜಾಸ್ತಿ. ಶಶಿ ಮತ್ತು ಜಯಶ್ರೀ ಹೇಳುವ ತನಕ ಆಂಡ್ರ್ಯೂ ಬಗ್ಗೆ ಕವಿತಾಗೆ ಫ್ಲಾಶ್ ಆಗಿರಲಿಲ್ಲ. ಒಪ್ಪಂದಕ್ಕೆ ಕವಿತಾ ಒಪ್ಪಿಕೊಳ್ಳಲೇಬಾರದಿತ್ತು'' ಅನ್ನೋದು ವೀಕ್ಷಕರ ಅಭಿಪ್ರಾಯ.

ತ್ರಿಮೂರ್ತಿಗಳಿಗೆ ಧಿಕ್ಕಾರ

ತ್ರಿಮೂರ್ತಿಗಳಿಗೆ ಧಿಕ್ಕಾರ

''ಜಯಶ್ರೀ, ಕವಿತಾ ಮತ್ತು ಶಶಿ ಗ್ರೂಪ್ ಮಾಡಿಕೊಂಡು ಆಟ ಆಡುತ್ತಿದ್ದಾರೆ. ಗುಂಪುಗಾರಿಕೆ ಮಾಡಿಕೊಂಡು ಆಡುತ್ತಿರುವ ತ್ರಿಮೂರ್ತಿಗಳಿಗೆ ಧಿಕ್ಕಾರ'' ಕೂಗಿದ್ದಾರೆ ವೀಕ್ಷಕರು.

ಫೇಕ್ ಯಾರು.?

ಫೇಕ್ ಯಾರು.?

ಆಂಡ್ರ್ಯೂ ಬಗ್ಗೆ ಆರೋಪ ಮಾಡಿದ ಕವಿತಾ ಫೇಕ್ ಅಂತ ಹಲವು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ, ಜಯಶ್ರೀ ಮತ್ತು ಶಶಿಯನ್ನೂ ಜನ ಫೇಕ್ ಅಂತ ಕರೆಯುತ್ತಿದ್ದಾರೆ.

ಡೀಲ್ ಮಾಡಿಕೊಂಡಿದ್ದು ತಪ್ಪು.!

ಡೀಲ್ ಮಾಡಿಕೊಂಡಿದ್ದು ತಪ್ಪು.!

''ಆಂಡಿ ಜೊತೆಗೆ ಕವಿತಾ ಡೀಲ್ ಮಾಡಿಕೊಂಡಿದ್ದು ತಪ್ಪು. ಅದರ ಬದಲು ಆಕೆಯೇ ನಾಮಿನೇಟ್ ಆಗಬಹುದಿತ್ತು'' ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ಟ್ರೋಲ್ ಆದ ಕವಿತಾ

ಟ್ರೋಲ್ ಆದ ಕವಿತಾ

ಒಂದು ಎಲಿಮಿನೇಷನ್ ನಿಂದ ಬಚಾವ್ ಆಗಲು ಡೀಲ್ ಮಾಡಿಕೊಂಡ ಕವಿತಾ ಇನ್ನೂ 'ಬಿಗ್ ಬಾಸ್' ವಿನ್ನರ್ ನೀವೇ ಅಂದ್ರೆ ಮುಂದೇನು ಎಂದು ವೀಕ್ಷಕರು ಪ್ರಶ್ನೆ ಕೇಳುತ್ತಿದ್ದಾರೆ.

'ಬಿಗ್ ಬಾಸ್' ಮಾಡಿದ ತಪ್ಪು.!

'ಬಿಗ್ ಬಾಸ್' ಮಾಡಿದ ತಪ್ಪು.!

''ತಪ್ಪು ಮಾಡಿದ್ದು 'ಬಿಗ್ ಬಾಸ್'. ಅಲ್ಲಿ ಎರಡು ಬಾರಿ ನಾಮಿನೇಟ್ ಆಗಲು ಕವಿತಾ ಒಪ್ಪಿಕೊಂಡರು. ಅದನ್ನ 'ಬಿಗ್ ಬಾಸ್' ಸ್ವೀಕಾರ ಮಾಡಿದ್ರೆ ಈ ತರಹ ಸಮಸ್ಯೆ ಆಗುತ್ತಿರಲಿಲ್ಲ'' ಅಂತ ಕೆಲವರು ಕಾಮೆಂಟ್ ಹಾಕಿದ್ದಾರೆ.

ಹಾಗೆ ಆಡಬೇಡ ಗುರು..

ಹಾಗೆ ಆಡಬೇಡ ಗುರು..

''ನಿನ್ನ ಲವ್ ಮಾಡ್ತೀನಿ, ಮದುವೆ ಆಗ್ತೀನಿ ಅಂತ ಪ್ರಮಾಣ ಮಾಡಿ ಕೈ ಕೊಟ್ಟಳು ಅನ್ನೋ ಹಾಗೆ ಆಡಬೇಡ ಗುರು. ಪ್ರತಿ ದಿನ ಹತ್ತು ನಿಮಿಷ ಮಾತನಾಡುವೆ ಎಂದಾಗ ಫ್ರೆಂಡ್ ಆಗಿ ಮಾತನಾಡುವೆ ಎಂದಳು. ಅದನ್ನ ನೀನು ಎಲ್ಲೆಲ್ಲೋ ತೆಗೆದುಕೊಂಡು ಹೋಗ್ತಾ ಇದ್ದೀಯಾ'' ಅಂತ ಆಂಡ್ರ್ಯೂ ಬಗ್ಗೆ ಕೆಲವರು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

More from Filmibeat

English summary
Bigg Boss Kannada 6: Viewers have taken their Facebook account to express their opinion on Kavitha Gowda and Andrew deal controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X