ಅಕ್ಷತಾ-ರಾಕೇಶ್ ನ ಮೊದಲು ಹೊರಗೆ ಹಾಕಿ: ಇದು ವೀಕ್ಷಕರ ಕೋರಿಕೆ.!
Recommended Video

ಇದು ಗೇಮ್ ಪ್ಲಾನ್ ಆಗಿರಬಹುದು.. ಅಥವಾ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರಲು ಸ್ಟ್ರಾಟೆಜಿ ಮಾಡಿಕೊಂಡಿರಬಹುದು.. ಏನೇ ಆಗಲಿ, ಎಂ.ಜೆ.ರಾಕೇಶ್ ಮತ್ತು ಅಕ್ಷತಾ ನಡುವಿನ ಗೆಳೆತನ ಮಾತ್ರ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ.
ರಾಕೇಶ್ ಮತ್ತು ಅಕ್ಷತಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು 'ಬಿಗ್ ಬಾಸ್' ಮನೆಯಲ್ಲೇ ಕೇಳಿಬಂದಿತ್ತು. ಆಗ ''ನಮ್ಮಿಬ್ಬರ ನಡುವೆ ಏನಿಲ್ಲ. ನಾವು ಗೆಳೆಯರು ಮಾತ್ರ'' ಅಂತ ಎಲ್ಲರ ಮುಂದೆ ರಾಕೇಶ್ ಮತ್ತು ಅಕ್ಷತಾ ಸ್ಪಷ್ಟನೆ ಕೊಟ್ಟಿದ್ದರು.
ಆದರೂ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ರಾಕೇಶ್-ಅಕ್ಷತಾ ಫ್ರೆಂಡ್ ಶಿಪ್ ನೋಡಿ ವೀಕ್ಷಕರಿಗೆ ಇರುಸುಮುರುಸು ಉಂಟಾಗುತ್ತಿದೆ. ಮೊದಲು ಅಕ್ಷತಾ-ರಾಕೇಶ್ ನ ಔಟ್ ಮಾಡಿ ಎಂದು ವೀಕ್ಷಕರೇ ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬೇಕಾದ್ರೆ, ನೀವೇ ಕಾಮೆಂಟ್ಸ್ ನೋಡಿ...

ಅತಿ ಆಯಿತು.!
''ರಾಕೇಶ್ ಮತ್ತು ಅಕ್ಷತಾ ರೋಮ್ಯಾನ್ಸ್ ತುಂಬಾ ಆಯಿತು. ಮನೇಲಿ ಎಲ್ಲರ ಜೊತೆ ನೋಡೋಕೆ ಆಗಲ್ಲ. ಮೊದಲು ಅವರಿಬ್ಬರನ್ನ ಆಚೆ ಹಾಕಿ. ಇಲ್ಲಾಂದ್ರೆ ಅವರಿಬ್ಬರ ರೋಮ್ಯಾನ್ಸ್ ಕಟ್ ಮಾಡಿ. ನಿಮ್ಮ ಸಾಮಾಜಿಕ ಕಳಕಳಿ ತೋರಿಸಿ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದು ಲವ್ ಸ್ಟೋರಿ ಸೀರಿಯಲ್ಲಾ.?
''ಇದು 'ಬಿಗ್ ಬಾಸ್' ಕಾರ್ಯಕ್ರಮವೋ ಅಥವಾ ಅಕ್ಷತಾ-ರಾಕೇಶ್ ಲವ್ ಸ್ಟೋರಿ ಸೀರಿಯಲ್ಲೋ ತಿಳಿಯುತ್ತಿಲ್ಲ'' ಎಂಬ ಗೊಂದಲದಲ್ಲಿ ವ್ಯಂಗ್ಯವಾಗಿ ವೀಕ್ಷಕರೊಬ್ಬರು ಕಾಮೆಂಟ್ ಹಾಕಿದ್ದಾರೆ.

ಕೂಡಲೆ ಹೊರಗೆ ಹಾಕಿ
''ಬಿಗ್ ಬಾಸ್'ಗೆ ಸ್ವಲ್ಪನಾದರೂ ಸಾಮಾಜಿಕ ಕಳಕಳಿ ಇದ್ದರೆ ಕೂಡಲೆ ರಾಕೇಶ್-ಅಕ್ಷತಾ ನ ಹೊರಗೆ ಹಾಕಿ'' ಎಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ.

ಎಲ್ಲರದ್ದೂ ಒಂದೇ ಬೇಡಿಕೆ
ರಾಕೇಶ್ ಮತ್ತು ಅಕ್ಷತಾ ರನ್ನ ಹೊರಗೆ ಹಾಕುವಂತೆ ಫೇಸ್ ಬುಕ್ ನಲ್ಲಿ ಲೆಕ್ಕವಿಲ್ಲದಷ್ಟು ಕಾಮೆಂಟ್ಸ್ ಬಂದಿವೆ. ವೀಕ್ಷಕರ ಒತ್ತಾಯಕ್ಕೆ ಮಣಿದು 'ಬಿಗ್ ಬಾಸ್' ಅಕ್ಷತಾ-ರಾಕೇಶ್ ಪೈಕಿ ಒಬ್ಬರನ್ನ ಈ ವಾರ ಎಲಿಮಿನೇಟ್ ಮಾಡುತ್ತಾರಾ.?

ನಾಮಿನೇಟ್ ಆಗಿದ್ದಾರೆ ಅಕ್ಷತಾ.!
ರಾಕೇಶ್ ನ ಸೇಫ್ ಮಾಡಿ ಈ ವಾರ ಅಕ್ಷತಾ ನಾಮಿನೇಟ್ ಆಗಿದ್ದಾರೆ. ಅಕ್ಷತಾ ಸೇಫ್ ಆಗುವುದು ಬಿಡುವುದು ವೀಕ್ಷಕರ ಕೈಯಲ್ಲಿದೆ. ಅಂದ್ಹಾಗೆ, ನೀವು ಅಕ್ಷತಾಗೆ ವೋಟ್ ಮಾಡ್ತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











