ಮೊದಲ ವಾರ 11 ಮಂದಿ ಡೇಂಜರ್ ಝೋನ್ ನಲ್ಲಿ.! ನಿಮ್ಮ ಮತ ಯಾರಿಗೆ.?

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಪ್ರಾರಂಭವಾದ ಮೊದಲ ದಿನವೇ ನಾಮಿನೇಷನ್ ಟಾಸ್ಕ್ ಕೊಡಲಾಗಿದೆ. ಹಿಂದಿನ ಸೀಸನ್ ಗಳಲ್ಲಿ ನಾಮಿನೇಷನ್ ನಡೆದಂತೆ ಈ ಬಾರಿ ನಡೆಯಲಿಲ್ಲ.

ಕನ್ಫೆಶನ್ ರೂಮ್ ಒಳಗೆ ಹೋಗಿ 'ಬಿಗ್ ಬಾಸ್' ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಇಬ್ಬರನ್ನು ಓರ್ವ ಸ್ಪರ್ಧಿ ನಾಮಿನೇಟ್ ಮಾಡಬೇಕಾಗಿದ್ದು ವಾಡಿಕೆ. ಆದ್ರೆ, ಈ ಸರಿ ಹಾಗೆ ಆಗಲಿಲ್ಲ.

'ಬಿಗ್ ಬಾಸ್' ಮನೆಯಲ್ಲಿ ಬಝರ್ ಒಂದನ್ನ ಇಡಲಾಗಿತ್ತು. ಕಾಲ ಕಾಲಕ್ಕೆ ಆ ಬಝರ್ ಒತ್ತಿದ ಸ್ಪರ್ಧಿ, ಪ್ರತಿ ಸ್ಪರ್ಧಿಯನ್ನ ಆಯ್ಕೆ ಮಾಡಿಕೊಳ್ಳಬೇಕಿತ್ತು. ''ಬಿಗ್ ಬಾಸ್' ಮನೆಯಲ್ಲಿ ತಾವು ಯಾಕೆ ಇರಬೇಕು'' ಎಂಬುದನ್ನು ಎಲ್ಲರ ಮುಂದೆ ಆ ಇಬ್ಬರು ಸ್ಪರ್ಧಿಗಳು ವಾದ ಮಂಡಿಸಬೇಕಿತ್ತು. ವಾದ-ಪ್ರತಿವಾದದ ಆಧಾರದ ಮೇಲೆ ಉಳಿದ ಸ್ಪರ್ಧಿಗಳು ಪರ-ವಿರೋಧ ಮತ ಹಾಕ್ಬೇಕಿತ್ತು.

ಈ ಪ್ರಕ್ರಿಯೆಯಿಂದಾಗಿ ಮೊದಲ ವಾರ ಒಂದಲ್ಲಾ, ಎರಡಲ್ಲಾ... ಒಟ್ಟು ಹನ್ನೊಂದು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇವರುಗಳ ಪೈಕಿ ನಿಮ್ಮ ಮತ ಯಾರಿಗೆ.?

ಟಾರ್ಗೆಟ್ ಆದ ಸೋನು ಪಾಟೀಲ್, ಆಂಡ್ರ್ಯೂ

ಟಾರ್ಗೆಟ್ ಆದ ಸೋನು ಪಾಟೀಲ್, ಆಂಡ್ರ್ಯೂ

'ಬಿಗ್ ಬಾಸ್' ಮನೆಯಲ್ಲಿ ಸೋನು ಪಾಟೀಲ್ ಹಾಗೂ ಆಂಡ್ರ್ಯೂ ವಿಪರೀತ ಮಾತನಾಡುತ್ತ ಎಲ್ಲರಿಗೂ ಕಿರಿಕಿರಿ ತರುತ್ತಿದ್ದಾರೆ. ಊಟ ಹಾಗೂ ನಿದ್ದೆ ವಿಚಾರದಲ್ಲಿ ದನಿಯೆತ್ತಿದ್ದ ಇವರಿಬ್ಬರೂ ಈ ವಾರ ನಾಮಿನೇಟ್ ಆಗಿದ್ದಾರೆ.

ರೋಷಾವೇಷ ತೋರಿಸಿದ ಎ.ವಿ.ರವಿ

ರೋಷಾವೇಷ ತೋರಿಸಿದ ಎ.ವಿ.ರವಿ

ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಿಮ್ ರವಿ ಕೋಪಿಸಿಕೊಂಡು, ಕೂಗಾಡಿದ್ರು. ಹೀಗಾಗಿ ಬಹುತೇಕ ಮಂದಿ ಅವರ ವಿರುದ್ಧ ಮತ ಚಲಾಯಿಸಿದರು. ಇನ್ನೂ 'ಒಗ್ಗರಣೆ ಡಬ್ಬಿ' ಮುರಳಿ ಕೂಡ ನಾಮಿನೇಷನ್ ನಲ್ಲಿ ಸೇಫ್ ಆಗಲಿಲ್ಲ.

ಡೇಂಜರ್ ಝೋನ್ ನಲ್ಲಿ ನಯನ

ಡೇಂಜರ್ ಝೋನ್ ನಲ್ಲಿ ನಯನ

ಮೊದಲ ವಾರವೇ ನಯನ ಪುಟ್ಟಸ್ವಾಮಿ ಡೇಂಜರ್ ಝೋನ್ ಗೆ ಬಂದಿದ್ದಾರೆ. ಇನ್ನೂ ಪುತ್ತೂರು ಮೂಲದ ರೀಮಾ ಹಾಗೂ ರೈತ ಶಶಿಕುಮಾರ್ ಕೂಡ ನಾಮಿನೇಟ್ ಆಗಿದ್ದಾರೆ.

ಇವರೆಲ್ಲರ ಮಾತು ನಡೆಯಲಿಲ್ಲ.!

ಇವರೆಲ್ಲರ ಮಾತು ನಡೆಯಲಿಲ್ಲ.!

ನಾಮಿನೇಷನ್ ಪ್ರಕ್ರಿಯೆಯಲ್ಲಿ ಆಡಮ್ ಪಾಶಾ, ರಕ್ಷಿತಾ ರೈ, ಅಕ್ಷತಾ ಪಾಂಡವಪುರ ಹಾಗೂ ಆನಂದ್ ಮಾಲಗತ್ತಿ ಮಂಡಿಸಿದ ವಾದ ಇತರರಿಗೆ ಸಮಾಧಾನ ತರಲಿಲ್ಲ. ಹೀಗಾಗಿ, ಇವರೆಲ್ಲರೂ ನಾಮಿನೇಟ್ ಆಗಿದ್ದಾರೆ.

ನಿಮ್ಮ ಮತ ಯಾರಿಗೆ.?

ನಿಮ್ಮ ಮತ ಯಾರಿಗೆ.?

ನಯನ ಪುಟ್ಟಸ್ವಾಮಿ, ಆನಂದ ಮಾಲಗತ್ತಿ, ರೀಮಾ, ಶಶಿ ಕುಮಾರ್, ಎವಿ ರವಿ, ಆಡಂ ಪಾಶಾ, ರಕ್ಷಿತಾ ರೈ, ಅಕ್ಷತಾ ಪಾಂಡವಪುರ, ಮುರಳಿ, ಆಂಡ್ರ್ಯೂ ಮತ್ತು ಸೋನು ಪಾಟೀಲ್ ಈ ವಾರ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಮೊದಲ ವಾರ ಮನೆಯಿಂದ ಹೊರಗೆ ಹೋಗಬೇಕು.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Week 1: 11 Contestants are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X