'ಬಿಗ್ ಬಾಸ್ ಕನ್ನಡ-6': ಮೊದಲ ವಾರವೇ ಔಟ್ ಆದ ರಕ್ಷಿತಾ ರೈ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರ ಕ್ರಿಕೆಟರ್ ರಕ್ಷಿತಾ ರೈ ಔಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಸೈಲೆಂಟ್ ಆಗಿದ್ದ ರಕ್ಷಿತಾ ರೈ, ಯಾವುದೇ ಜಗಳಕ್ಕೆ ಸಾಕ್ಷಿ ಆಗಲಿಲ್ಲ. ವಿವಾದಗಳ ಕೇಂದ್ರಬಿಂದು ಆಗದೆ, ಟಾಸ್ಕ್ ನಲ್ಲೂ ಅದ್ಭುತ ಪ್ರದರ್ಶನ ಕೊಡದ ರಕ್ಷಿತಾ ರೈ 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಿದ್ದಾರೆ.
ಹಾಗ್ನೋಡಿದ್ರೆ, ಇಡೀ ವಾರದಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ರಕ್ಷಿತಾ ರೈ ಕಾಣಿಸಿಕೊಂಡಿದ್ದೇ ಕಮ್ಮಿ. ಹೀಗಾಗಿ, ಆಕೆಗೆ ಹೆಚ್ಚು ವೋಟ್ಸ್ ಕೂಡ ಬಿದ್ದಿಲ್ಲ.
ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮೊದಲ ವಾರ ಹನ್ನೊಂದು ಮಂದಿ ನಾಮಿನೇಟ್ ಆಗಿದ್ದರು. ಇತರೆ ಹತ್ತು ಸ್ಪರ್ಧಿಗಳಿಗೆ ಹೋಲಿಸಿದರೆ, ರಕ್ಷಿತಾ ರೈ ಪಡೆದ ಮತಗಳು ತೀರಾ ಕಮ್ಮಿ. ಹೀಗಾಗಿ ಅವರು ಎಲಿಮಿನೇಟ್ ಆಗಿದ್ದಾರೆ.

''ನಾನು ಎಮೋಷನಲಿ ಕನೆಕ್ಟ್ ಆಗಲ್ಲ'' ಎಂದು ಹೇಳುತ್ತಾ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟವರು ರಕ್ಷಿತಾ ರೈ. ವಿಚಿತ್ರ ಅಂದ್ರೆ, ರಕ್ಷಿತಾ ವೀಕ್ಷಕರ ಜೊತೆಗೂ ಕನೆಕ್ಟ್ ಆಗಲಿಲ್ಲ.
English summary
Bigg Boss Kannada 6: Week 1: Cricketer Rakshita Rai eliminated.


Click it and Unblock the Notifications