ಅಂತೂ ಇಂತೂ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಆಂಡಿ.!
Recommended Video

'ಬಿಗ್ ಬಾಸ್' ಮನೆಯಲ್ಲಿ ಕ್ಯಾಪ್ಟನ್ ಆಗಲು ಮೊದಲ ವಾರದಿಂದಲೂ ಆಂಡಿ ಪ್ರಯತ್ನ ಪಡುತ್ತಿದ್ದರು. ಆದ್ರೆ, ಒಂದಲ್ಲಾ ಒಂದು ಕಾರಣಕ್ಕೆ ಅದು ಸಫಲ ಆಗಿರಲಿಲ್ಲ. ಎರಡ್ಮೂರು ಬಾರಿ ಕ್ಯಾಪ್ಟನ್ ಪ್ರತಿಸ್ಪರ್ಧಿ ಆಗಿದ್ದರೂ, ಕ್ಯಾಪ್ಟನ್ ಆಗುವಲ್ಲಿ ಆಂಡ್ರ್ಯೂ ಯಶಸ್ವಿ ಆಗಿರಲಿಲ್ಲ.
ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಒಮ್ಮೆ ಗೆಲುವು ಸಾಧಿಸಿದ್ದರೂ, ಕವಿತಾ ಗೌಡ ಮಾಡಿದ ಪಕ್ಷಪಾತದಿಂದ ಆಂಡ್ರ್ಯೂಗೆ ಕ್ಯಾಪ್ಟನ್ ಪಟ್ಟ ಸಿಗಲಿಲ್ಲ. ಹೇಗಾದರೂ ಮಾಡಿ ಒಮ್ಮೆ ಕ್ಯಾಪ್ಟನ್ ಆಗಬೇಕು ಎಂದು ಹಪಹಪಿಸುತ್ತಿದ್ದ ಆಂಡಿ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಮುರಳಿ, ರಶ್ಮಿ, ಮೇಘಶ್ರೀ, ರಾಕೇಶ್ ಮತ್ತು ನವೀನ್ ರನ್ನ ಚಟುವಟಿಕೆಯಲ್ಲಿ ಸೋಲಿಸಿ ಆಂಡಿ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದಾರೆ.

'ಬಿಗ್ ಬಾಸ್' ನೀಡಿದ್ದ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಆಂಡಿ, ಮುರಳಿ, ರಶ್ಮಿ, ಮೇಘಶ್ರೀ, ರಾಕೇಶ್ ಮತ್ತು ನವೀನ್ ಗೆಲುವು ಸಾಧಿಸಿದ್ದರು. ಪರಿಣಾಮ ಇವರೆಲ್ಲರೂ ಕ್ಯಾಪ್ಟನ್ ರೇಸ್ ನಲ್ಲಿದ್ದರು. ಅಂತಿಮವಾಗಿ ಕ್ಯಾಪ್ಟನ್ ಆಗುವಲ್ಲಿ ಆಂಡಿ ಸಫಲರಾಗಿದ್ದಾರೆ.
ಮೊದಲೇ ಆಂಡಿ ಕಿರಿಕ್ ಮಾಡುವಲ್ಲಿ ಎತ್ತಿದ ಕೈ. ಈಗ ಕ್ಯಾಪ್ಟನ್ ಬೇರೆ ಆಗಿರುವುದರಿಂದ ಆಂಡಿ ವರ್ತನೆ ಸುಧಾರಿಸುತ್ತೋ, ಇಲ್ವೋ ಎಂಬುದನ್ನ ಕಾದು ನೋಡಬೇಕು.


Click it and Unblock the Notifications











