'ಬಿಗ್ ಬಾಸ್' ಮನೆಯಲ್ಲಿ ಮೇಘಶ್ರೀ ಜರ್ನಿ ಎರಡೇ ವಾರಕ್ಕೆ ಅಂತ್ಯ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಯಾರು ಎಂಟ್ರಿಕೊಡಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇರುವಾಗಲೇ, ನಿವೇದಿತಾ ಗೌಡ ಮತ್ತು ಜೀವಿತಾ ಜೊತೆಗೆ ಗೊಂಬೆ ಹಿಡಿದು 'ಬಿಗ್ ಬಾಸ್' ಮನೆಯಲ್ಲಿ ಪ್ರತ್ಯಕ್ಷವಾದಾಕೆ ಮೇಘಶ್ರೀ.
ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ಮೇಘಶ್ರೀ ಕಿರುತೆರೆಯಲ್ಲೂ ಪರಿಚಿತ ಮುಖ. ಅದಾಗಲೇ ಐವತ್ತು ದಿನಗಳ ಆಟವನ್ನು ದುರ್ಬೀನು ಹಾಕಿಕೊಂಡು ನೋಡಿದ್ದ ಮೇಘಶ್ರೀ 'ಬಿಗ್ ಬಾಸ್' ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಬಹುದು ಎಂಬುದು ವೀಕ್ಷಕರ ಲೆಕ್ಕಾಚಾರ ಆಗಿತ್ತು. ಆದ್ರೆ ಎರಡೇ ವಾರದಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ.
ಹದಿನೈದು ದಿನಕ್ಕೆ 'ಬಿಗ್ ಬಾಸ್' ಮನೆಯಿಂದ ಮೇಘಶ್ರೀ ಹೊರಗೆ ಬಂದಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಟಾರ್ಗೆಟ್ ಆಗಿದ್ದ ಮೇಘಶ್ರೀಗೆ ವೀಕ್ಷಕರಿಂದಲೂ ಕಮ್ಮಿ ಬೆಂಬಲ ವ್ಯಕ್ತವಾದ ಕಾರಣ ಮೇಘಶ್ರೀ ಔಟ್ ಆಗಿದ್ದಾರೆ. ಮುಂದೆ ಓದಿರಿ...

ಟಾರ್ಗೆಟ್ ಆಗಿದ್ದ ಮೇಘಶ್ರೀ
ಕವಿತಾ, ಮುರಳಿ, ಧನರಾಜ್ ಸೇರಿದಂತೆ ಒಟ್ಟು ಏಳು ಮಂದಿ ಒಂದಲ್ಲಾ ಒಂದು ಕಾರಣಕ್ಕೆ ಮೇಘಶ್ರೀ ರನ್ನ ನಾಮಿನೇಟ್ ಮಾಡಿದ್ದರು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮತ ಪಡೆದ ಮೇಘಶ್ರೀ ಡೇಂಜರ್ ಝೋನ್ ನಲ್ಲಿದ್ದರು.

ಅಷ್ಟಾಗಿ ಕಾಣಿಸಿಕೊಳ್ಳದ ಮೇಘಶ್ರೀ
'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಿ ಮೊದಲು ವಿಲನ್ ಆಗಿದ್ದ ಮೇಘಶ್ರೀ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ವಾರಪೂರ್ತಿ ಬಹುತೇಕ ಸೈಲೆಂಟ್ ಆಗಿದ್ದ ಮೇಘಶ್ರೀ ಎಲಿಮಿನೇಟ್ ಆಗಿದ್ದಾರೆ.

ಸ್ಪರ್ಧಿಗಳ ಗೇಮ್ ಪ್ಲಾನ್
ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಮೂವರು ಹುಡುಗಿಯರನ್ನು ಬಹು ಬೇಗ ಔಟ್ ಮಾಡಬೇಕು ಎಂಬುದು 'ಬಿಗ್ ಬಾಸ್' ಸ್ಪರ್ಧಿಗಳ ಗೇಮ್ ಪ್ಲಾನ್ ಆಗಿತ್ತು. ಮೊದಲ ಹಂತದಲ್ಲಿ ಟಾರ್ಗೆಟ್ ಆದ ಮೇಘಶ್ರೀ ಔಟ್ ಆಗಿದ್ದಾರೆ. ಇನ್ನೂ ಅತಿಥಿಯಾಗಿ ಬಂದಿದ್ದ ನಿವೇದಿತಾ ಗೌಡ ಕೂಡ ಹೊರಬಂದಿದ್ದಾರೆ. ಉಳಿದಿರುವುದು ಸದ್ಯಕ್ಕೆ ಜೀವಿತಾ ಮಾತ್ರ.

ವೀಕ್ಷಕರ ಬೆಂಬಲ ಇಲ್ಲ.!
ಮೇಘಶ್ರೀ, ಕವಿತಾ ಗೌಡ, ಆಂಡಿ, ಧನರಾಜ್, ಶಶಿ, ರಾಕೇಶ್ ಮತ್ತು ರಶ್ಮಿ ನಾಮಿನೇಟ್ ಆಗಿದ್ದರು. ಈ ಏಳು ಮಂದಿ ಪೈಕಿ ವೀಕ್ಷಕರಿಂದ ಕಮ್ಮಿ ವೋಟ್ಸ್ ಸಿಕ್ಕಿದ್ದು ಮೇಘಶ್ರೀಗೆ. ಹೀಗಾಗಿ, ಆಕೆ ಹೊರನಡೆದಿದ್ದಾರೆ.


Click it and Unblock the Notifications











