ಈ ವಾರ ಯಾರಿಗೂ ಸುದೀಪ್ ಕಡೆಯಿಂದ ಸ್ಪೆಷಲ್ ಚಪ್ಪಾಳೆ ಸಿಗಲೇ ಇಲ್ಲ.!
ಎಲ್ಲರ ಗಮನ ಸೆಳೆಯುವಂತೆ ಆಟ ಆಡುವ ಸ್ಪರ್ಧಿಗೆ ಸುದೀಪ್ ಕಡೆಯಿಂದ ಮೆಚ್ಚುಗೆಯ ಚಪ್ಪಾಳೆ ಸಿಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈಗಾಗಲೇ ಅಕ್ಷತಾ ಮತ್ತು ಜೀವಿತಾ ಆಟಕ್ಕೆ ಬೆರಗಾಗಿ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.
ಈ ವಾರ ಯಾರಿಗೆ ಸುದೀಪ್ ರವರ ಸ್ಪೆಷಲ್ ಚಪ್ಪಾಳೆ ಸಿಗಬಹುದು ಎಂದು ವೀಕ್ಷಕರು ಊಹಿಸುತ್ತಿದ್ದರು. ಆದ್ರೆ, 'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಿ ಎಲ್ಲರ ವರ್ತನೆ ನೋಡಿ ಬೇಸೆತ್ತ ಸುದೀಪ್ ಯಾರಿಗೂ ಚಪ್ಪಾಳೆ ತಟ್ಟಲಿಲ್ಲ.

''ಪ್ರತಿ ವಾರ ಸ್ಪೆಷಲ್ ಚಪ್ಪಾಳೆ ನೀಡುತ್ತಿದ್ದೆ. ಈ ವಾರ ಎಲ್ಲಾ ಸಂಚಿಕೆಗಳನ್ನೂ ನೋಡಿದೆ. ಆಂಡಿ ಕೊಟ್ಟ ಕಿರಿಕಿರಿಯನ್ನ ಕವಿತಾ ತುಂಬಾ ಚೆನ್ನಾಗಿ ಫೇಸ್ ಮಾಡಿದರು. ತಾಳ್ಮೆ ಕಳೆದುಕೊಳ್ಳಲಿಲ್ಲ. ಆದ್ರೆ, ಒಂದು ಹಂತದಲ್ಲಿ ಕವಿತಾ ಕೂಡ ಎಲ್ಲೆ ಮೀರಿದರು. ಇನ್ನೂ ಶಶಿ ಕೂಡ ಚೆನ್ನಾಗಿ ಆಡಿದರು. ಆದ್ರೆ, ಶಶಿ ಕ್ರಿಯೇಟಿವ್ ಆಗಿ ಯೋಚಿಸಲಿಲ್ಲ. ಐ ಆಮ್ ಸಾರಿ ಈ ವಾರ ನನಗೆ ಹಂಡ್ರೆಡ್ ಪರ್ಸೆಂಟ್ ಎಫರ್ಟ್ ಹಾಕಿದವರು ಯಾರೂ ಕಾಣಲಿಲ್ಲ. ಹೀಗಾಗಿ ಈ ವಾರ ಚಪ್ಪಾಳೆ ಯಾರಿಗೂ ಸಿಗುತ್ತಿಲ್ಲ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಹೇಳಿದರು.
'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಚಟುವಟಿಕೆಯಲ್ಲಿ ಹೀರೋಗಳ ಕಣ್ಣಿಗೆ ಆಂಡಿ ಸ್ಪ್ರೇ ಹೊಡೆದು ಕ್ರೂರತೆ ಮೆರೆದಿದ್ದರು. ಉಳಿದವರು ಟಾಸ್ಕ್ ನಲ್ಲಿ ನೂಕಡಿದ್ದು, ತಳ್ಳಾಡಿದ್ದೇ ಹೆಚ್ಚು. ಹೀಗಾಗಿ, ಈ ವಾರ ಯಾರ ಪರ್ಫಾಮೆನ್ಸ್ ಕೂಡ ಸುದೀಪ್ ಮನಗೆಲ್ಲಲಿಲ್ಲ.


Click it and Unblock the Notifications











