ನಿವೇದಿತಾ ಗೌಡಗೆ ಭೇಷ್ ಎಂದು ಹಾಡಿ ಹೊಗಳಿದ ಕಿಚ್ಚ ಸುದೀಪ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದವರು ನಿವೇದಿತಾ ಗೌಡ. ಕನ್ನಡವನ್ನು ಇಂಗ್ಲೀಷ್ ನಂತೆ ಮಾತನಾಡುವ ನಿವೇದಿತಾ ಗೌಡ ಕಳೆದ ಬಾರಿಯ 'ಬಿಗ್ ಬಾಸ್' ಶೋನಲ್ಲಿ 105 ದಿನ ಇದ್ದರು. ಗ್ರ್ಯಾಂಡ್ ಫಿನಾಲೆವರೆಗೂ ಬಂದಿದ್ದರು.

ಈ ಬಾರಿ.. ಅಂದ್ರೆ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಿವೇದಿತಾ ಗೌಡ ಎಂಟ್ರಿಕೊಟ್ಟಿದ್ದರು. ಆದ್ರೆ, ನಿವೇದಿತಾ ಸ್ಪೆಷಲ್ ಗೆಸ್ಟ್ ಅನ್ನೋದು ಇತರೆ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ.

ಇನ್ನೂ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಟಾಸ್ಕ್ ನಲ್ಲಿ ನಿವೇದಿತಾ ಗೌಡ, ವಿಲನ್ ಆಂಡಿಯಿಂದ ಕಿರುಕುಳ ಅನುಭವಿಸಿದ್ದರು. ಗೆಸ್ಟ್ ಆಗಿ ಬಂದಿದ್ದ ನಿವೇದಿತಾ ಸುಲಭವಾಗಿ ಆಟಕ್ಕೆ ಗುಡ್ ಬೈ ಹೇಳಬಹುದಿತ್ತು. ಇನ್ನೂ ಜೈಲಿಗೆ ಹೋಗಲ್ಲ ಅಂತ ಹಠ ಕೂಡ ಹಿಡಿಯಬಹುದಿತ್ತು. ಆದ್ರೆ, ಅದ್ಯಾವುದನ್ನೂ ನಿವೇದಿತಾ ಗೌಡ ಮಾಡಲಿಲ್ಲ.

ಕೊಟ್ಟ ಟಾಸ್ಕ್ ಗಳನ್ನ ನಿವೇದಿತಾ ಚೆನ್ನಾಗಿ ನಿಭಾಯಿಸಿದರು. ಹೀಗಾಗಿ, ನಿವೇದಿತಾ ಗೌಡ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಹಾಡಿ ಹೊಗಳಿದರು. ಮುಂದೆ ಓದಿರಿ...

ಗುಟ್ಟು ಬಿಟ್ಟು ಕೊಟ್ಟ ಕಿಚ್ಚ ಸುದೀಪ್

ಗುಟ್ಟು ಬಿಟ್ಟು ಕೊಟ್ಟ ಕಿಚ್ಚ ಸುದೀಪ್

''ನಿವೇದಿತಾ ಗೌಡ ಸ್ಪರ್ಧಿಯಾಗಿ ಮನೆಯೊಳಗೆ ಬಂದೇ ಇಲ್ಲ. ನಿವೇದಿತಾ ಗೌಡ ವಿಶೇಷ ಅತಿಥಿಯಾಗಿ ಬಂದಿದ್ದರು'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಎಲ್ಲಾ ಸ್ಪರ್ಧಿಗಳಿಗೂ ಕ್ಲಾರಿಟಿ ಕೊಟ್ಟರು.

ನಿವೇದಿತಾಗೆ ಧನ್ಯವಾದ ಹೇಳಿದ ಸುದೀಪ್

ನಿವೇದಿತಾಗೆ ಧನ್ಯವಾದ ಹೇಳಿದ ಸುದೀಪ್

''ಎರಡು ವಾರಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇದ್ದಿದ್ದಕ್ಕೆ, ನಮಗೆ ಮನರಂಜನೆ ಕೊಟ್ಟಿದ್ದಕ್ಕೆ ಧನ್ಯವಾದಗಳು'' ಎಂದು ನಿವೇದಿತಾ ಗೌಡಗೆ ಹೇಳಿದರು ಸುದೀಪ್.

ಎಲ್ಲರೂ ಕಲಿಯಬೇಕಾದ ಪಾಠ

ಎಲ್ಲರೂ ಕಲಿಯಬೇಕಾದ ಪಾಠ

''ಈ ಮನೆ ನಿವೇದಿತಾ ಅವರನ್ನ ವಾಪಸ್ ಯಾಕೆ ಕರೆಯಿಸಿಕೊಂಡಿತು.? ಕಳೆದ ಬಾರಿ ನಿವೇದಿತಾ 105 ದಿನ ಈ ಮನೆಯಲ್ಲಿ ಇದ್ದರು. ಮೈಸೂರಿನಲ್ಲಿ ಸಾಮಾನ್ಯವಾಗಿ ಓದುತ್ತಿರುವ ಹುಡುಗಿ ಈ ಮನೆಗೆ ಅಟ್ಯಾಚ್ ಆದರು. ಇದರಲ್ಲಿ ಒಂದು ಪಾಠ ಇದೆ'' ಎನ್ನುತ್ತಾ ನಿವೇದಿತಾ ರನ್ನ ಹೊಗಳಲು ಸುದೀಪ್ ಆರಂಭಿಸಿದರು.

ಭೇಷ್ ಎಂದ ಸುದೀಪ್

ಭೇಷ್ ಎಂದ ಸುದೀಪ್

''ಎರಡು ವಾರ ನಿವೇದಿತಾ ಈ ಮನೆಯಲ್ಲಿ ಇರುವಾಗ, ಅವಮಾನ-ನೋವು ಎದುರಿಸಿದರು. ಆದ್ರೆ, ಯಾವತ್ತೂ ಬಿಗ್ ಬಾಸ್ ಅನುಮತಿಯ ಆಚೆಗೆ ನಡೆದುಕೊಂಡಿಲ್ಲ. 'ನಾನು ಗೆಸ್ಟ್' ಅಂತ ನಿವೇದಿತಾ ಹೇಳಿಕೊಳ್ಳಬಹುದಿತ್ತು. ಆದ್ರೆ, ಆಕೆ ಹೇಳಿಲ್ಲ. ಆಟ ಬಿಡಲಿಲ್ಲ. ಸ್ಪಿರಿಟ್ ಬಿಡಲಿಲ್ಲ. 'ಬಿಗ್ ಬಾಸ್' ಮಾತನ್ನ ಮೀರಿಲ್ಲ. ಪ್ಯಾಶನ್ ಮತ್ತು ಪ್ರೀತಿಯಿಂದ ಆಟ ಆಡಿದರು. ಅದಕ್ಕೆ ಅವರು ಕಳೆದ ಸೀಸನ್ ನಲ್ಲಿ 105 ದಿನ ಇದ್ದರು. ಈ ಸೀಸನ್ ನಲ್ಲಿ ಎರಡು ವಾರ ನಿಮ್ಮಲ್ಲಿ ಒಬ್ಬರಾಗಿ ಜೈಲಲ್ಲೂ ಕಾಲ ಕಳೆದರು. ನಿವೇದಿತಾ ಅದ್ಭುತವಾಗಿ ಆಟ ಆಡಿದರು'' ಎಂದರು ಸುದೀಪ್

More from Filmibeat

English summary
Bigg Boss Kannada 6: Week 10: Sudeep lauds Niveditha Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X