ಬಚಾವ್ ಆದ ಆಂಡಿ: ಬಾಕಿ ಎಲ್ಲರೂ ಡೇಂಜರ್ ಝೋನ್ ನಲ್ಲಿ.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅದಾಗಲೇ ಹತ್ತು ವಾರಗಳು ಕಳೆದಿವೆ. ಈ ಹತ್ತೂ ವಾರಗಳಲ್ಲಿ ನಾಮಿನೇಷನ್ ಪ್ರಕ್ರಿಯೆಗಳು ಭಿನ್ನ-ವಿಭಿನ್ನವಾಗಿ ನಡೆದಿವೆ. ಅದರಂತೆ ಹನ್ನೊಂದನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ವಿಚಿತ್ರವಾಗಿತ್ತು.

ಎಂದಿನಂತೆ ಈ ಬಾರಿ ವೋಟಿಂಗ್ ನಡೆಯಲಿಲ್ಲ. ಹೀಗಾಗಿ ಯಾರ್ಯಾರ ಮನದಲ್ಲಿ ಏನೇನು ಸ್ಟ್ರಾಟೆಜಿ ಇತ್ತೋ, ಅವೆಲ್ಲವನ್ನೂ ಒಂದೇ ಕ್ಷಣದಲ್ಲಿ 'ಬಿಗ್ ಬಾಸ್' ಉಲ್ಟಾ-ಪಲ್ಟಾ ಮಾಡಿಬಿಟ್ಟರು.

ಕ್ಯಾಪ್ಟನ್ ಆಗಿರುವ ಆಂಡಿ ಮಾತ್ರ ಈ ವಾರ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ. ಉಳಿದವರೆಲ್ಲರೂ ಡೇಂಜರ್ ಝೋನ್ ನಲ್ಲಿದ್ದಾರೆ. ಹಾಗಾದ್ರೆ, ಈ ವಾರ ನಾಮಿನೇಷನ್ ನಡೆದಿದ್ದು ಹೇಗೆ.? ಎಲ್ಲರೂ ನಾಮಿನೇಟ್ ಆಗಿದ್ಹೇಗೆ ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕಿತ್ತು.!

ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕಿತ್ತು.!

ಯಾವ ಒಬ್ಬ ಸ್ಪರ್ಧಿ 'ಬಿಗ್ ಬಾಸ್' ಮನೆಯ ಒಳಿತಿಗಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಎಲ್ಲರೂ ಒಮ್ಮತ ನಿರ್ಧಾರ ತೆಗೆದುಕೊಂಡು 'ಬಿಗ್ ಬಾಸ್'ಗೆ ತಿಳಿಸಬೇಕಿತ್ತು. ಅದರಂತೆ ಎಲ್ಲ ಸ್ಪರ್ಧಿಗಳು 'ಒಗ್ಗರಣೆ ಡಬ್ಬಿ' ಮುರಳಿ ರನ್ನ ಆಯ್ಕೆ ಮಾಡಿದರು.

ಕನ್ಫೆಶನ್ ರೂಮ್ ಒಳಗೆ ಮುರಳಿ

ಕನ್ಫೆಶನ್ ರೂಮ್ ಒಳಗೆ ಮುರಳಿ

ಕನ್ಫೆಶನ್ ರೂಮ್ ಒಳಗೆ ಹೋದ ಮುರಳಿಗೆ ಕಂಡಿದ್ದು ಮೂರು ಡಬ್ಬಗಳು. ಆ ಮೂರು ಡಬ್ಬಗಳ ಪೈಕಿ ಮುರಳಿ ಒಂದನ್ನು ಆಯ್ಕೆ ಮಾಡಬೇಕಿತ್ತು. ಅದರಂತೆ ಒಂದನ್ನು ಆಯ್ಕೆ ಮಾಡಿ, ಅದರಲ್ಲಿರುವ ಲಕೋಟೆಯನ್ನು ಮುರಳಿ ಹೊರಗೆ ತಂದರು.

ಲಕೋಟೆಯಲ್ಲಿ ಬರೆದಿದ್ದು ಏನು.?

ಲಕೋಟೆಯಲ್ಲಿ ಬರೆದಿದ್ದು ಏನು.?

''ನಿಮ್ಮ ಆಯ್ಕೆಯ ಅನುಸಾರ, ಮನೆಯ ಕ್ಯಾಪ್ಟನ್ ಆಂಡಿ ಹೊರತು ಪಡಿಸಿ ಮನೆಯ ಉಳಿದ ಎಲ್ಲಾ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದಾರೆ'' ಎಂದು ಲಕೋಟೆಯಲ್ಲಿ ಬರೆದಿತ್ತು. ಇದರ ಅನುಸಾರ, ಆಂಡಿ ಸೇಫ್ ಆದರು. ಉಳಿದವರೆಲ್ಲರೂ ನಾಮಿನೇಟ್ ಆದರು.

ಆಂಡಿ ಫುಲ್ ಹ್ಯಾಪಿ

ಆಂಡಿ ಫುಲ್ ಹ್ಯಾಪಿ

''ಇದಕ್ಕಿದ್ದಂತೆ ಟ್ವಿಸ್ಟ್ ಸಿಕ್ಕಿದೆ. ಕ್ಯಾಪ್ಟನ್ ಆಗಿದ್ದೇನೆ, ನಾಮಿನೇಟ್ ಆಗಿಲ್ಲ. ತುಂಬಾ ಹ್ಯಾಪಿ ಆಗಿದ್ದೇನೆ'' ಎನ್ನುತ್ತಾ ಆಂಡಿ ಕ್ಯಾಮರಾ ಮುಂದೆ ತಮ್ಮ ಖುಷಿಯನ್ನ ವ್ಯಕ್ತಪಡಿಸುತ್ತಿದ್ದರು.

ಒಂಬತ್ತು ಸ್ಪರ್ಧಿಗಳ ಪೈಕಿ ನಿಮ್ಮ ಮತ ಯಾರಿಗೆ.?

ಒಂಬತ್ತು ಸ್ಪರ್ಧಿಗಳ ಪೈಕಿ ನಿಮ್ಮ ಮತ ಯಾರಿಗೆ.?

ಜೀವಿತಾ, ಅಕ್ಷತಾ, ಧನರಾಜ್, ನವೀನ್, ಮುರಳಿ, ರಶ್ಮಿ, ಶಶಿ, ಕವಿತಾ ಮತ್ತು ರಾಕೇಶ್... ಈ ಒಂಬತ್ತು ಜನರ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಔಟ್ ಆಗಬೇಕು ಎಂಬುದು ನಿಮ್ಮ ಇಚ್ಛೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Week 11: 9 Contestants are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X