ನವೀನ್ ಅಭಿನಯ ಕಂಡು ಖುಷಿ ಪಟ್ಟು ಚಪ್ಪಾಳೆ ತಟ್ಟಿದ ಸುದೀಪ್.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅದಾಗಲೇ ಹನ್ನೊಂದು ವಾರಗಳು ಕಳೆದಿವೆ. ಈ ಹನ್ನೊಂದು ವಾರಗಳಲ್ಲಿ ಹಲವು ಬಾರಿ ಕ್ಯಾಪ್ಟನ್ ಪ್ರತಿಸ್ಪರ್ಧಿ ಆಗಿ ಗಾಯಕ ನವೀನ್ ಸಜ್ಜು ಆಯ್ಕೆ ಆಗಿದ್ದರು. ಅಲ್ಲಿವರೆಗೂ ಒಮ್ಮೆ ಕೂಡ ಕ್ಯಾಪ್ಟನ್ ಆಗದ ನವೀನ್ ರನ್ನ ಕವಿತಾ ಗೌಡ ಕಳೆದ ವಾರ ಕ್ಯಾಪ್ಟನ್ ಮಾಡಿಬಿಟ್ಟರು.
ಇನ್ನೂ 'ಲೈಟ್ಸ್ ಕ್ಯಾಮರಾ ಆಕ್ಷನ್' ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ 'ಬೆಳ್ಳೂರು ಕ್ರಾಸ್' ಸಿನಿಮಾದಲ್ಲಿ ನಾಯಕನ ಪಾತ್ರ ಪೋಷಿಸಿದ್ದ ನವೀನ್ ಸಜ್ಜು ಚೆನ್ನಾಗಿ ಆಕ್ಟಿಂಗ್ ಕೂಡ ಮಾಡಿದ್ದರು. ಸಾಲದಕ್ಕೆ, ಸಿನಿಮಾಗಳಿಗೆ ಹಾಡುಗಳನ್ನೂ ಸಂಯೋಜಿಸಿದ್ದರು.

ಚಟುವಟಿಕೆಯಲ್ಲಿ ನವೀನ್ ಸಜ್ಜು ರವರ ಇನ್ವಾಲ್ವ್ ಮೆಂಟ್ ಹಾಗೂ ಪರ್ಫಾಮೆನ್ಸ್ ನೋಡಿ ಕಿಚ್ಚ ಸುದೀಪ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಹೀಗಾಗಿ, ಈ ವಾರದ 'ಕಿಚ್ಚನ ಮೆಚ್ಚುಗೆ ಚಪ್ಪಾಳೆ' ನವೀನ್ ಸಜ್ಜುಗೆ ಸಿಕ್ಕಿದೆ.
''ಈ ವಾರ ಚೆನ್ನಾಗಿ ಆಟ ಆಡಿದ್ರಿ. ಶ್ರದ್ಧೆಯಿಂದ ಪ್ರ್ಯಾಕ್ಟೀಸ್ ಮಾಡಿ ಬೆಲ್ಲಿ ಡ್ಯಾನ್ಸ್ ಮಾಡಿದ್ರಿ. ಸಿನಿಮಾದಲ್ಲಿ ನಟನೆ ಚೆನ್ನಾಗಿತ್ತು. ಎಲ್ಲದಕ್ಕೂ ಕಿರೀಟ ಇಟ್ಟ ಹಾಗೆ, ಕ್ಯಾಪ್ಟನ್ ಕೂಡ ಆದ್ರಿ. ಮುಖದ ಮೇಲೆ ನಗು ಕೂಡ ಇತ್ತು. ಈ ವಾರದ ನಿಮ್ಮ ಆಟ ನನಗೆ ಬಹಳ ಖುಷಿ ಕೊಡ್ತು. ಹೀಗಾಗಿ, ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ'' ಎನ್ನುತ್ತಾ ನವೀನ್ ಸಜ್ಜುಗೆ ಚಪ್ಪಾಳೆ ತಟ್ಟಿದರು ಸುದೀಪ್.
ಎಲ್ಲರ ಕಣ್ಣು ಕುಕ್ಕುವ ಹಾಗೆ ಆಟ ಆಡುವ ಸ್ಪರ್ಧಿಗೆ ಕಿಚ್ಚನ ಕಡೆಯಿಂದ 'ಮೆಚ್ಚುಗೆಯ ಚಪ್ಪಾಳೆ' ಸಿಗುತ್ತಿದೆ. ಈಗಾಗಲೇ, ಅಕ್ಷತಾ ಮತ್ತು ಜೀವಿತಾ 'ಕಿಚ್ಚನ ಮೆಚ್ಚುಗೆಯ ಚಪ್ಪಾಳೆ'ಗೆ ಪಾತ್ರರಾಗಿದ್ದಾರೆ. ಇದೀಗ ನವೀನ್ ಸರದಿ.


Click it and Unblock the Notifications











