'ಬಿಗ್ ಬಾಸ್' ಮನೆಯಿಂದ ಅಕ್ಷತಾ ಪಾಂಡವಪುರ ಔಟ್.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗಲೇ, 'ಬಿಗ್ ಬಾಸ್' ಮನೆಯಿಂದ ರಂಗಭೂಮಿ ಕಲಾವಿದೆ, ನಟಿ ಅಕ್ಷತಾ ಪಾಂಡವಪುರ ಔಟ್ ಆಗಿದ್ದಾರೆ.
ಹಾಗ್ನೋಡಿದರೆ, 'ಬಿಗ್ ಬಾಸ್' ಮನೆಯಲ್ಲಿ ಅತಿ ಹೆಚ್ಚು ಸೌಂಡ್ ಮಾಡಿದವರು ಅಕ್ಷತಾ ಮತ್ತು ರಾಕೇಶ್. ಇವರಿಬ್ಬರ ನಡುವಿನ Intense ಫ್ರೆಂಡ್ ಶಿಪ್ 'ಬಿಗ್ ಬಾಸ್' ಮನೆಯಲ್ಲಿ ಅಂತೆ-ಕಂತೆಗಳಿಗೆ ಆಹಾರವಾಗಿತ್ತು. ಸಾಲದಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು.
ಮೊದಲ ಐವತ್ತು ದಿನಗಳು ಅಕ್ಷತಾ ಮತ್ತು ರಾಕೇಶ್ 'ಅತಿ' ಎನಿಸುವಷ್ಟು ಆತ್ಮೀಯವಾಗಿದ್ದರು. ಆದ್ರೆ, 'ರಾಕೇಶ್ ರಿಂದ ದೂರ ಇರು' ಎಂಬ ಸಂದೇಶ ಅಕ್ಷತಾ ತಾಯಿಯಿಂದ ಬಂದ್ಮೇಲೆ ಇಬ್ಬರ ನಡುವೆ ಬಿರುಕು ಮೂಡಿತು. ಸಣ್ಣ-ಸಣ್ಣ ವಿಷ್ಯಕ್ಕೂ ಇಬ್ಬರೂ ಜಗಳಕ್ಕೆ ನಿಲ್ಲುತ್ತಿದ್ದರು.
ಕಿತ್ತಾಡುವುದು, ಕ್ಷಮೆ ಕೇಳುವುದು, ಪ್ಯಾಚಪ್ ಆಗುವುದು... ಇದನ್ನೇ ಮತ್ತೆ ಮತ್ತೆ ರಿಪೀಟ್ ಮಾಡುತ್ತಿದ್ದ ಅಕ್ಷತಾ-ರಾಕೇಶ್ ಅಧ್ಯಾಯ ಕಡೆಗೂ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮುಕ್ತಾಯಗೊಂಡಿದೆ. ಮುಂದೆ ಓದಿರಿ...

ಔಟ್ ಆದ ಅಕ್ಷತಾ ಪಾಂಡವಪುರ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಹನ್ನೆರಡನೇ ವಾರ ನಟಿ ಅಕ್ಷತಾ ಪಾಂಡವಪುರ ಔಟ್ ಆಗಿದ್ದಾರೆ. ಆಂಡಿ, ಶಶಿ, ರಶ್ಮಿ, ರಾಕೇಶ್ ಮತ್ತು ಅಕ್ಷತಾ ಈ ವಾರ ಡೇಂಜರ್ ಝೋನ್ ನಲ್ಲಿದ್ದರು. ಇತರರಿಗೆ ಹೋಲಿಸಿದರೆ, ಅಕ್ಷತಾಗೆ ವೀಕ್ಷಕರ ಬೆಂಬಲ ಕಮ್ಮಿ ಸಿಕ್ಕಿದೆ. ಹೀಗಾಗಿ, ಅಕ್ಷತಾ ಎಲಿಮಿನೇಟ್ ಆಗಿದ್ದಾರೆ.

ಎಲಿಮಿನೇಷನ್ ಗೂ ಮುನ್ನ ಹೈಡ್ರಾಮಾ
ಅಕ್ಷತಾ ಮತ್ತು ರಾಕೇಶ್ ನಡುವಿನ ಸ್ನೇಹವನ್ನು ಪರೀಕ್ಷಿಸಲು ಕಿಚ್ಚ ಸುದೀಪ್ ಒಂದು ಸ್ಪೆಷಲ್ ಟಾಸ್ಕ್ ಕೊಟ್ಟರು. ''ನಿಮ್ಮಿಬ್ಬರಲ್ಲಿ ಯಾರು ಔಟ್ ಆಗಬೇಕೆಂದು ನೀವೇ ನಿರ್ಧರಿಸಿ'' ಎಂದು ಬಾಟಂ 2 ತಲುಪಿದ್ದ ಅಕ್ಷತಾ ಮತ್ತು ರಾಕೇಶ್ ಗೆ ಸುದೀಪ್ ತಿಳಿಸಿದರು. ಇದರಿಂದ ಕೆಲ ಕಾಲ 'ಬಿಗ್ ಬಾಸ್' ಮನೆಯಲ್ಲಿ ಹೈಡ್ರಾಮಾ ನಡೆಯಿತು.

'ನಾನು ಹೋಗುವೆ..'
''ನನ್ನ ಜೀವನದ ಫಿಲಾಸಫಿ ಕೊಡುವುದು.. ಹೀಗಾಗಿ ನಾನು ಔಟ್ ಆಗುವೆ'' ಅಂತ ರಾಕೇಶ್ ಹೇಳಿದರೆ, ''ನೀನು ಇಲ್ಲಿ ಇದ್ದು ಗೆಲ್ಲಬೇಕು. ನಾನು ಔಟ್ ಆಗುವೆ'' ಎಂದು ಅಕ್ಷತಾ ಪಟ್ಟು ಹಿಡಿದರು. ಇಬ್ಬರ ನಡುವೆ ವಾದ-ವಾಗ್ವಾದ ಮುಂದುವರಿಯಿತೇ ಹೊರತು ಒಮ್ಮತದ ನಿರ್ಧಾರ ಮೂಡಲಿಲ್ಲ.

ಕಣ್ಣೀರಿಟ್ಟ ರಾಕೇಶ್
ರಾಕೇಶ್-ಅಕ್ಷತಾ ನಡುವಿನ ಹೈಡ್ರಾಮಾ ಮುಗಿಯದ ಕಾರಣ, ವೋಟ್ ಆಧಾರದ ಮೇಲೆ ಕಮ್ಮಿ ಮತಗಳನ್ನು ಪಡೆದವರು ಅಕ್ಷತಾ ಪಾಂಡವಪುರ ಎಂದು ಸುದೀಪ್ ಘೋಷಿಸಿದರು. ಅಕ್ಷತಾ ಔಟ್ ಆಗಿದ್ದಕ್ಕೆ ರಾಕೇಶ್ ಗೊಳೋ ಎಂದು ಕಣ್ಣೀರು ಸುರಿಸಿದರು.


Click it and Unblock the Notifications











