'ಬಿಗ್ ಬಾಸ್': ಭಾನುವಾರ ರಾತ್ರಿ ನಡೆಯಲಿದೆ ಮತ್ತೊಂದು ಎಲಿಮಿನೇಷನ್.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ಹದಿಮೂರನೇ ವಾರ ಎಂ.ಜೆ.ರಾಕೇಶ್ ಔಟ್ ಆದರು. ಈ ಸೀಸನ್ ನ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗಲೇ, ಭಾನುವಾರ (ಜನವರಿ 20) ರಾತ್ರಿ 'ಬಿಗ್ ಬಾಸ್' ಮನೆಯಿಂದ ಒಬ್ಬರು ಗಂಟು-ಮೂಟೆ ಪ್ಯಾಕ್ ಮಾಡಲಿದ್ದಾರೆ.
ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದಾರೆ. ನವೀನ್ ಸಜ್ಜು, ಧನರಾಜ್, ರಾಪಿಡ್ ರಶ್ಮಿ, ಕವಿತಾ ಗೌಡ, ಶಶಿ ಕುಮಾರ್ ಮತ್ತು ಆಂಡ್ರ್ಯೂ ಇಲ್ಲಿಯವರೆಗೂ ಸರ್ವೈವ್ ಆಗಿದ್ದಾರೆ. ಈ ಆರು ಮಂದಿ ಪೈಕಿ ಒಬ್ಬರ 'ಬಿಗ್ ಬಾಸ್' ಜರ್ನಿ ನಾಳೆ ಅಂತ್ಯವಾಗಲಿದೆ.

ಈಗಾಗಲೇ ವೂಟ್ ನಲ್ಲಿ ವೋಟಿಂಗ್ ಲೈನ್ ಓಪನ್ ಮಾಡಲಾಗಿದೆ. ನವೀನ್ ಸಜ್ಜು, ಧನರಾಜ್, ರಾಪಿಡ್ ರಶ್ಮಿ, ಕವಿತಾ ಗೌಡ, ಶಶಿ ಕುಮಾರ್ ಮತ್ತು ಆಂಡ್ರ್ಯೂ ಪೈಕಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಈ ಕೂಡಲೆ ವೋಟ್ ಮಾಡಿರಿ. ವೋಟಿಂಗ್ ಲೈನ್ ಭಾನುವಾರ ರಾತ್ರಿ 9 ಗಂಟೆವರೆಗೂ ತೆರೆದಿರಲಿದೆ.
ಹದಿಮೂರನೇ ವಾರದ ಎಲಿಮಿನೇಷನ್ ನಲ್ಲಿ ರಾಕೇಶ್ ಮತ್ತು ಆಂಡಿ ಬಾಟಂ 2ನಲ್ಲಿದ್ದರು. ಹಾಗೂ ಹೀಗೂ ಆಂಡ್ರ್ಯೂ ಸೇಫ್ ಆಗ್ಬಿಟ್ಟರು. ಭಾನುವಾರ ನಡೆಯುವ ಎಲಿಮಿನೇಷನ್ ನಲ್ಲೂ ಆಂಡಿ ಬಚಾವ್ ಆಗ್ತಾರಾ.? ಯಾರು ಔಟ್ ಆಗ್ತಾರೆ ಅಂತ ಕಾದು ನೋಡಬೇಕು.


Click it and Unblock the Notifications











