'ಗುಡ್ನೆಸ್' ಸ್ಟ್ರಾಟೆಜಿ ವರ್ಕ್ ಆಗಲಿಲ್ಲ: 'ಬಿಗ್ ಬಾಸ್' ಮನೆಯಿಂದ ರಾಕೇಶ್ ಔಟ್.!
ಮಾತೆತ್ತಿದರೆ 'ಗುಡ್ನೆಸ್' ಎನ್ನುತ್ತಿದ್ದ 'ಬಿಗ್ ಬಾಸ್' ಸ್ಪರ್ಧಿ ಎಂ.ಜೆ.ರಾಕೇಶ್. ಯಾವಾಗ್ಯಾವಾಗ ತಮ್ಮ ಲೆಕ್ಕಾಚಾರ ಉಲ್ಟಾ ಆಗುತ್ತಿತ್ತೋ, ಆಗೆಲ್ಲಾ 'ಗುಡ್ನೆಸ್' ಎನ್ನುತ್ತ 'ಬಿಗ್ ಬಾಸ್' ಮನೆಯಲ್ಲಿ 'ಗುಡ್ ಬಾಯ್' ಇಮೇಜ್ ಸಂಪಾದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವರು ಎಂ.ಜೆ.ರಾಕೇಶ್.
'ಗುಡ್ನೆಸ್' ಹೆಸರಿನಲ್ಲಿ ರಾಕೇಶ್ ಏನೇ ಮಾಡಿದರೂ, ಅವರಿಗೆ ಫಿನಾಲೆ ತಲುಪಲು ಸಾಧ್ಯವೇ ಆಗಲಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಗುಡ್ನೆಸ್ ಸ್ಟ್ರಾಟೆಜಿ ವರ್ಕ್ ಆಗಲಿಲ್ಲ. ಫಿನಾಲೆ ವಾರಕ್ಕೆ ಇನ್ನೊಂದು ಹೆಜ್ಜೆ ಬಾಕಿ ಇರುವಾಗಲೇ ರಾಕೇಶ್ ರನ್ ಔಟ್ ಆಗಿದ್ದಾರೆ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ಹದಿಮೂರನೇ ವಾರ ಎಂ.ಜೆ.ರಾಕೇಶ್ ಎಲಿಮಿನೇಟ್ ಆಗಿದ್ದಾರೆ. ಸೀಸನ್ ನ ಕೊನೆಯ ಪಂಚಾಯತಿ ನಡೆಸಿದ ಕಿಚ್ಚ ಸುದೀಪ್, ಸಂಚಿಕೆಯ ಕೊನೆಯಲ್ಲಿ ಮನೆಯಿಂದ ರಾಕೇಶ್ ರನ್ನ ಹೊರಗೆ ಕರೆದರು. ಮುಂದೆ ಓದಿರಿ...

ರಾಕೇಶ್ ಔಟ್
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ಹದಿಮೂರನೇ ವಾರ ಎಂ.ಜೆ.ರಾಕೇಶ್ ಎವಿಕ್ಟ್ ಆಗಿದ್ದಾರೆ. ರಶ್ಮಿ, ಆಂಡಿ, ಕವಿತಾ, ಶಶಿ ಮತ್ತು ರಾಕೇಶ್ ಈ ವಾರ ಡೇಂಜರ್ ಝೋನ್ ನಲ್ಲಿದ್ದರು. ಇತರರಿಗೆ ಹೋಲಿಸಿದರೆ, ರಾಕೇಶ್ ಗೆ ವೀಕ್ಷಕರ ಬೆಂಬಲ ಕಮ್ಮಿ ಸಿಕ್ಕಿದೆ. ಹೀಗಾಗಿ, ರಾಕೇಶ್ ಎಲಿಮಿನೇಟ್ ಆಗಿದ್ದಾರೆ.

ಕಳೆದ ವಾರ ಅಕ್ಷತಾ ಔಟ್
ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸದ್ದು-ಸುದ್ದಿ ಮಾಡಿದವರು ರಾಕೇಶ್ ಮತ್ತು ಅಕ್ಷತಾ. ಆದರೂ, ಇವರಿಬ್ಬರೂ ಫಿನಾಲೆ ತಲುಪಲಿಲ್ಲ. ಕಳೆದ ವಾರ ಅಕ್ಷತಾ ಔಟ್ ಆಗಿದ್ದರು. ಇಂದು ರಾಕೇಶ್ ಹೊರಗೆ ಬಂದಿದ್ದಾರೆ.

ಸೇಫ್ ಆದ ಆಂಡಿ
ಇಂದಿನ ಎಲಿಮಿನೇಷನ್ ನಲ್ಲಿ ಬಾಟಂ 2 ಹಂತದಲ್ಲಿ ಆಂಡಿ ಮತ್ತು ರಾಕೇಶ್ ಇದ್ದರು. ವೋಟ್ ಲೆಕ್ಕಾಚಾರದಲ್ಲಿ ಆಂಡಿಗೆ ಕೊಂಚ ಜಾಸ್ತಿ ಮತಗಳು ಬಿದ್ದಿದ್ದರಿಂದ, ಸೇಫ್ ಆಗ್ಬಿಟ್ಟರು.

ಕಣ್ಣೀರಿಟ್ಟು ಆಚೆ ಕಾಲಿಟ್ಟ ರಾಕೇಶ್
''ನನಗೆ 'ಬಿಗ್ ಬಾಸ್' ಒಂದು ಜರ್ನಿ. ಆಟ ಅಲ್ಲ. ನಾನು ಇಲ್ಲಿ ಗೆಲ್ಲಲು ಬಂದಿಲ್ಲ'' ಅಂತ ಪದೇ ಪದೇ ರಾಕೇಶ್ ಹೇಳಿದ್ದರು. ಹೀಗಿದ್ದರೂ, ಔಟ್ ಆಗಿ ಹೊರಗೆ ಹೋಗುವಾಗ ಎಂ.ಜೆ.ರಾಕೇಶ್ ಕಣ್ಣೀರಿಟ್ಟರು.


Click it and Unblock the Notifications











