'ಬಿಗ್ ಬಾಸ್': ಫಿನಾಲೆ ವಾರಕ್ಕೆ ಹೋಗುವ ಅರ್ಹತೆ ಇವರಲ್ಲಿ ಯಾರಿಗಿದೆ.?

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ. ಇನ್ನೆರಡು ವಾರಗಳಲ್ಲಿ 'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆ ವಾರಕ್ಕೆ ಅದಾಗಲೇ ಗಾಯಕ ನವೀನ್ ಸಜ್ಜು ಕಾಲಿಟ್ಟಿದ್ದಾಗಿದೆ.

'ಬಿಗ್ ಬಾಸ್' ನೀಡಿದ್ದ ವಿಶೇಷ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಕೊನೆಯ ವಾರಕ್ಕೆ ನವೀನ್ ಸಜ್ಜು ಡೈರೆಕ್ಟ್ ಎಂಟ್ರಿಕೊಟ್ಟಿದ್ದಾರೆ. ಆದ್ರೆ, ಉಳಿದವರ ಪರಿಸ್ಥಿತಿ ಹಾಗಿಲ್ಲ. ಫಿನಾಲೆ ವಾರಕ್ಕೆ ಲಗ್ಗೆ ಇಡಲು ಐವರಿಗೆ ವೀಕ್ಷಕರ ಬೆಂಬಲ ಅತ್ಯಗತ್ಯ.

ಕವಿತಾ, ರಾಕೇಶ್, ಆಂಡ್ರ್ಯೂ, ರಾಪಿಡ್ ರಶ್ಮಿ ಮತ್ತು ಶಶಿ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ. ಅಷ್ಟಕ್ಕೂ, ಇವರೆಲ್ಲ ಈ ವಾರ ನಾಮಿನೇಟ್ ಆಗಿದ್ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ವಿಶಿಷ್ಟವಾಗಿ ನಡೆದ ನಾಮಿನೇಷನ್ ಪ್ರಕ್ರಿಯೆ

ವಿಶಿಷ್ಟವಾಗಿ ನಡೆದ ನಾಮಿನೇಷನ್ ಪ್ರಕ್ರಿಯೆ

'ಬಿಗ್ ಬಾಸ್' ಮನೆಯಲ್ಲಿ ಪ್ರತಿ ವಾರ ನಡೆಯುವಂತೆ ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಕನ್ಫೆಶನ್ ರೂಮ್ ಒಳಗೆ ಹೋಗಿ, ಇಬ್ಬರನ್ನು ನಾಮಿನೇಟ್ ಮಾಡುವ ಅವಕಾಶ ಸ್ಪರ್ಧಿಗಳಿಗೆ ಸಿಗಲಿಲ್ಲ. ಬದಲಾಗಿ, 'ಬಿಗ್ ಬಾಸ್' ಮನೆಯಲ್ಲಿ ತಾನೇಕೆ ಉಳಿಯಬೇಕು ಎಂಬುದನ್ನು ಸ್ಪರ್ಧಿಗಳು ಕನ್ಫೆಶನ್ ರೂಮ್ ನಲ್ಲಿ ಒಬ್ಬೊಬ್ಬರಾಗಿ ಸಮರ್ಥಿಸಿಕೊಳ್ಳಬೇಕಿತ್ತು.

ವಿಶೇಷ ಅತಿಥಿಗಳಿಗೆ ವಿಶೇಷ ಅಧಿಕಾರ

ವಿಶೇಷ ಅತಿಥಿಗಳಿಗೆ ವಿಶೇಷ ಅಧಿಕಾರ

ಎಲ್ಲಾ ಸ್ಪರ್ಧಿಗಳ ಸಮರ್ಥನೆಯನ್ನು ಕೇಳಿ, ಒಬ್ಬರನ್ನು ಮಾತ್ರ ಸೇಫ್ ಮಾಡುವ ವಿಶೇಷ ಅಧಿಕಾರವನ್ನು ಸ್ಪೆಷಲ್ ಗೆಸ್ಟ್ ಗಳಾದ ಪ್ರಥಮ್, ಕೀರ್ತಿ, ಸಂಜನಾ, ಕೃಷಿ ತಾಪಂಡ ಮತ್ತು ಸಮೀರಾಚಾರ್ಯಗೆ 'ಬಿಗ್ ಬಾಸ್' ನೀಡಿದ್ದರು.

ಗೋಲ್ಡನ್ ಟಿಕೆಟ್ ಪಡೆದಿದ್ದ ನವೀನ್ ಸಜ್ಜು

ಗೋಲ್ಡನ್ ಟಿಕೆಟ್ ಪಡೆದಿದ್ದ ನವೀನ್ ಸಜ್ಜು

'ಬಿಗ್ ಬಾಸ್' ನೀಡಿದ್ದ ವಿಶೇಷ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ನವೀನ್ ಸಜ್ಜು ಫಿನಾಲೆ ವಾರಕ್ಕೆ ಗೋಲ್ಡನ್ ಟಿಕೆಟ್ ಪಡೆದಿದ್ದರು. ಹೀಗಾಗಿ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ನವೀನ್ ಸೇಫ್ ಆಗಿದ್ದರು.

ವಿಶೇಷ ಅತಿಥಿಗಳ ಆಯ್ಕೆ ಏನು.?

ವಿಶೇಷ ಅತಿಥಿಗಳ ಆಯ್ಕೆ ಏನು.?

ಎಲ್ಲರೂ ಕೊಟ್ಟ ಕಾರಣಗಳನ್ನು ಕೇಳಿದ್ಮೇಲೆ, 'ಜೆಂಟಲ್ ಮ್ಯಾನ್' ಧನರಾಜ್ ರನ್ನ ವಿಶೇಷ ಅತಿಥಿಗಳು ಸೇಫ್ ಮಾಡಿದರು. ಹೀಗಾಗಿ, ಧನರಾಜ್ ಕೂಡ ಫಿನಾಲೆ ವಾರಕ್ಕೆ ಯಾವುದೇ ಟೆನ್ಷನ್ ಇಲ್ಲದೆ ಕಾಲಿಟ್ಟಿದ್ದಾರೆ.

ಡೇಂಜರ್ ಝೋನ್ ನಲ್ಲಿ ಯಾರ್ಯಾರು.?

ಡೇಂಜರ್ ಝೋನ್ ನಲ್ಲಿ ಯಾರ್ಯಾರು.?

ಕವಿತಾ, ರಾಕೇಶ್, ಆಂಡ್ರ್ಯೂ, ರಾಪಿಡ್ ರಶ್ಮಿ ಮತ್ತು ಶಶಿ ಈ ವಾರ ನಾಮಿನೇಟ್ ಆಗಿದ್ದಾರೆ. ಈ ಐವರ ಪೈಕಿ ನಿಮ್ಮ ಬೆಂಬಲ ಯಾರಿಗೆ.? ನಿಮ್ಮ ಪ್ರಕಾರ ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Week 13: 5 Contestants are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X