ಕಡೆಯ ವಾರದಲ್ಲಿ ಕವಿತಾಗೆ ಸಿಕ್ತು 'ಕಿಚ್ಚನ ಮೆಚ್ಚುಗೆಯ ಚಪ್ಪಾಳೆ'

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ. ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ, ಕಡೆಯ ವಾರದಲ್ಲಿ ಕಿಚ್ಚ ಸುದೀಪ್ ರಿಂದ ನಟಿ ಕವಿತಾ ಗೌಡ ಮೆಚ್ಚುಗೆಯ ಚಪ್ಪಾಳೆ ಗಳಿಸಿದ್ದಾರೆ.

ಪ್ರತಿ ವಾರ ಚಟುವಟಿಕೆಗಳಲ್ಲಿ ಯಾರು ಚೆನ್ನಾಗಿ ಭಾಗವಹಿಸುತ್ತಾರೋ, ಅವರಿಗೆ ಕಿಚ್ಚ ಸುದೀಪ್ 'ಮೆಚ್ಚುಗೆಯ ಚಪ್ಪಾಳೆ' ತಟ್ಟುತ್ತಾ ಬಂದಿದ್ದಾರೆ. ಈವರೆಗೂ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಗೆ ನವೀನ್ ಸಜ್ಜು, ಅಕ್ಷತಾ ಪಾಂಡವಪುರ, ಜೀವಿತಾ ಪಾತ್ರರಾಗಿದ್ದರು. ಇದೀಗ ನಟಿ ಕವಿತಾ ಗೌಡ ಸರದಿ.

''ಮನೆಗೆ ಅತಿಥಿಗಳು ಬಂದಿದ್ರಿಂದ ಈ ವಾರ ಟಾಸ್ಕ್ ಗಳು ಅಷ್ಟೊಂದು ಚಾಲೆಂಜಿಂಗ್ ಆಗಿರಲಿಲ್ಲ. ಕೋಪ-ತಾಪಗಳಿಗೆ ಅಷ್ಟೊಂದು ಸಮಯ ಇರಲಿಲ್ಲ. ಇದ್ದ ಸಣ್ಣ-ಪುಟ್ಟ ಅವಕಾಶಗಳಲ್ಲಿ ಎಲ್ಲರಿಗಿಂತ ಚೆನ್ನಾಗಿ ಆಡಿದ್ದು ಕವಿತಾ ಗೌಡ. ಹೀಗಾಗಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಕವಿತಾಗೆ ಕೊಡುವೆ'' ಎನ್ನುತ್ತಾ ಚಪ್ಪಾಳೆ ತಟ್ಟಿದರು ಸುದೀಪ್.

Bigg Boss Kannada 6: Week 13: Sudeep appreciated Kavitha Gowda for her performance

ಸುದೀಪ್ ಶಬ್ಬಾಸ್ ಹೇಳಿದ್ದನ್ನು ಕೇಳಿ ಸಂತಸ ಪಟ್ಟ ಕವಿತಾ ಗೌಡ ''ಇದಕ್ಕಾಗಿ ನಾನು ಕಾಯುತ್ತಿದ್ದೆ. ಥ್ಯಾಂಕ್ಯು ಸೋ ಮಚ್'' ಎಂದರು.

ವರದಿಗಳ ಪ್ರಕಾರ, ನಟಿ ಕವಿತಾ ಗೌಡ ಟಾಪ್ 5 ಹಂತ ತಲುಪಿದ್ದಾರೆ. ಕವಿತಾ ಜೊತೆಗೆ ನವೀನ್ ಸಜ್ಜು, ಶಶಿ ಕುಮಾರ್, ರಾಪಿಡ್ ರಶ್ಮಿ ಮತ್ತು ಆಂಡಿ ಫೈನಲ್ 5 ಸ್ಪರ್ಧಿಗಳಾಗಿದ್ದಾರೆ. ಈ ಐವರ ಪೈಕಿ ಯಾರು ವಿನ್ನರ್ ಆಗಬೇಕು ಅನ್ನೋದು ನಿಮ್ಮ ಮತಗಳ ಮೇಲೆ ಅವಲಂಬಿತ.

More from Filmibeat

English summary
Bigg Boss Kannada 6: Week 13: Sudeep appreciated Kavitha Gowda for her performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X