ಜಗ್ಗೇಶ್ ಕಡೆಯಿಂದ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸಿಕ್ತು 'ವಿಚಿತ್ರ' ಉಡುಗೊರೆಗಳು.! ಏನವು.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಎರಡನೇ ವಾರಾಂತ್ಯ 'ಬಿಗ್ ಬಾಸ್' ಮನೆಯೊಳಗೆ ಅತಿಥಿಯಾಗಿ ಹೋಗಿದ್ದವರು ನವರಸ ನಾಯಕ ಜಗ್ಗೇಶ್. 'ಎದ್ದೇಳು ಮಂಜುನಾಥ...' ಹಾಡು ಪ್ಲೇ ಆಗುತ್ತಿದ್ದ ಹಾಗೆ, 'ಬಿಗ್ ಬಾಸ್' ಮನೆಗೆ ಮುಸುಕುಧಾರಿಯಾಗಿ ಜಗ್ಗೇಶ್ ಎಂಟ್ರಿಕೊಟ್ಟರು.
ಕೈಯಲ್ಲಿ ಒಂದು ಕೋಲು ಹಾಗೂ ಚೀಲ ಹಿಡಿದುಕೊಂಡು ಜಗ್ಗೇಶ್ 'ಬಿಗ್ ಬಾಸ್' ಮನೆ ಪ್ರವೇಶಿಸಿದರು. ಕೋಲು ಮತ್ತು ಚೀಲ ಯಾಕೆ ಎಂಬ ಪ್ರಶ್ನೆಗೆ ಸ್ವತಃ ಜಗ್ಗೇಶ್ ರವರೇ ಬ್ರೇಕ್ ಹಾಕಿದರು.
ಎಲ್ಲಾ ಸ್ಪರ್ಧಿಗಳಿಗೆ ಜಗ್ಗೇಶ್ ಮೂಲಕ 'ಬಿಗ್ ಬಾಸ್' ವಿಚಿತ್ರ ಉಡುಗೊರೆಗಳನ್ನು ಕಳುಹಿಸಿದ್ದರು. ಹಾಗಾದ್ರೆ, ಯಾರ್ಯಾರಿಗೆ ಯಾವ್ಯಾವ ಉಡುಗೊರೆ ಸಿಕ್ತು ಎನ್ನುವ ಕುತೂಹಲ ಇದ್ದರೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ರಶ್ಮಿಗೆ ಸಿಕ್ತು ಪಾಪಸ್ ಕಳ್ಳಿ.!
'ಬಿಗ್ ಬಾಸ್' ಮನೆಯಲ್ಲಿ ರಾಪಿಡ್ ರಶ್ಮಿ ಕಂಡ್ರೆ ಹಲವರಿಗೆ ಕಿರಿಕಿರಿ. ಹಲವು ಬಾರಿ ವಾಕ್ಸಮರಕ್ಕೆ ರಾಪಿಡ್ ರಶ್ಮಿ ನಾಂದಿ ಹಾಡಿದ್ದಾರೆ. ಕೆಲ ಸ್ಪರ್ಧಿಗಳಂತೂ ರಶ್ಮಿ ತಂಟೆಗೆ ಹೋಗುವುದಿಲ್ಲ. ಇದೇ ಕಾರಣಕ್ಕೋ ಏನೋ ರಶ್ಮಿಗೆ 'ಬಿಗ್ ಬಾಸ್' ಪಾಪಸ್ ಕಳ್ಳಿ ಗಿಡ ಕಳುಹಿಸಿಕೊಟ್ಟಿದ್ದಾರೆ.

ರವಿಗೆ ಕೋಲು, ರಾಕೇಶ್ ಗೆ ಕೊಳಲು
'ಬಿಗ್ ಬಾಸ್' ಮನೆಯಲ್ಲಿ ಪಿಟಿ ಮಾಸ್ಟರ್ ಅಂತಲೇ ಖ್ಯಾತಿ ಪಡೆದಿರುವವರು ಜಿಮ್ ರವಿ. ಹೀಗಾಗಿ, ಮಾಸ್ಟರ್ ಗೆ 'ಬಿಗ್ ಬಾಸ್' ಕೋಲು ಕೊಟ್ಟಿದ್ದಾರೆ. ಇತ್ತ 200 ಹುಡುಗಿಯರನ್ನು ಡೇಟ್ ಮಾಡಿ, 'ಬಿಗ್ ಬಾಸ್' ಮನೆಯಲ್ಲೂ ಡೇಟಿಂಗ್ ಮುಂದುವರೆಸಿರುವ ಆಧುನಿಕ 'ಕೃಷ್ಣ' ರಾಕೇಶ್ ಕೈಗೆ 'ಬಿಗ್ ಬಾಸ್' ಕೊಳಲು ನೀಡಿದ್ದಾರೆ.

ಅಕ್ಷತಾಗೆ ಗೆಜ್ಜೆ, ಕವಿತಾಗೆ ಕನ್ನಡಕ
ಮೊನ್ನೆಮೊನ್ನೆಯಷ್ಟೇ ನಾಗವಲ್ಲಿ ರೇಂಜಿಗೆ ನಟಿಸಿದ ಅಕ್ಷತಾಗೆ ಗೆಜ್ಜೆ ಲಭಿಸಿದೆ. ಇನ್ನೂ ಗಾಸಿಪ್ ಮಾಡುವುದರಲ್ಲೇ ಬಿಜಿಯಾಗಿರುವ ಕವಿತಾ ಗೌಡಗೆ 'ಬಿಗ್ ಬಾಸ್' ಜಾತ್ರೆ ಕನ್ನಡಕ ಕೊಟ್ಟಿದ್ದಾರೆ.

ಆಡಮ್ ಗೆ ಬೆಂಕಿಪಟ್ಟಣ, ಮುರುಳಿಗೆ ಬೂದುಕನ್ನಡಿ
ಆಗಾಗ ಕಡ್ಡಿ ಗೀರಿ 'ಬಿಗ್ ಬಾಸ್' ಮನೆಯಲ್ಲಿ ಜಗಳದ ಕಿಚ್ಚು ಹಚ್ಚಿಸುವುದರಲ್ಲಿ ಆಡಮ್ ಪಾಶಾ ಎತ್ತಿದ ಕೈ. ಹೀಗಾಗಿ, ಆಡಮ್ ಗೆ 'ಬಿಗ್ ಬಾಸ್' ಬೆಂಕಿಪಟ್ಟಣ ಕೊಟ್ಟಿದ್ದಾರೆ. ಇನ್ನೂ ಮುರಳಿಗೆ ಬೂದುಕನ್ನಡಿ ಸಿಕ್ಕಿದೆ.

ರಿಮೋಟ್ ಕಂಟ್ರೋಲ್ ಜಯಶ್ರೀ
ಅಡುಗೆ ಮನೆಯಲ್ಲಿ ಇದ್ದುಕೊಂಡು ಕೆಲವರನ್ನು ಕಂಟ್ರೋಲ್ ಮಾಡುತ್ತಿರುವ ಜಯಶ್ರೀಗೆ ರಿಮೋಟ್ ಸಿಕ್ಕಿದೆ. ಸದಾ ಲೆಕ್ಕಾಚಾರ ಮಾಡಿ ಆಡುವ ಶಶಿಗೆ ಕ್ಯಾಲ್ಕುಲೇಟರ್ ಲಭಿಸಿತು. ಬಸ್ ಕಂಡಕ್ಟರ್ ಆನಂದ್ ಗೆ ವಿಶಲ್ ಸಿಕ್ಕರೆ ನಯನ ಪುಟ್ಟಸ್ವಾಮಿ ಕೈಗೆ ಬಾಕ್ಸಿಂಗ್ ಗ್ಲೌಸ್ ಬಂತು.

ಹೆಸರೇ ಕನ್ಫ್ಯೂಶನ್
ಧನರಾಜ್ ಗೆ ಹಲವರು ಧನಂಜಯ್ ಅಂತ ಕರೆಯುತ್ತಾರೆ. ಹೀಗಾಗಿ 'ಬಿಗ್ ಬಾಸ್' ಧನರಾಜ್ ಗಾಗಿ ವಿಶಿಷ್ಟ ಹಣೆಪಟ್ಟಿ ಕಳುಹಿಸಿದ್ದರು. ಸೋನು ಪಾಟೀಲ್ ಗಾಗಿ ಜಾಕೆಟ್ ಕೊಟ್ಟಿದ್ದ ನವೀನ್ ಗೆ 'ಬಿಗ್ ಬಾಸ್' ಹೊಸ ಜಾಕೆಟ್ ಗಿಫ್ಟ್ ಮಾಡಿದರು. ಇನ್ನೂ ಸೋನು ಪಾಟೀಲ್ ಗೆ ಪಟಾಕಿ ನೀಡಲಾಯಿತು. ಕದ್ದು ಚಾಕಲೇಟ್ ತಿಂದಿದ್ದ ಆಂಡ್ರ್ಯೂಗೆ ಫೇಸ್ ಮಾಸ್ಕ್ ಕೊಡಲಾಯಿತು.


Click it and Unblock the Notifications











