'ಬಿಗ್ ಬಾಸ್ ಕನ್ನಡ-6': ಮೇಜರ್ ಟಾರ್ಗೆಟ್ ಆದ ರಾಪಿಡ್ ರಶ್ಮಿ.!
Recommended Video

'ಮಾತೇ ಮುತ್ತು.. ಮಾತೇ ಮೃತ್ಯು', 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಎಂಬಂತೆ 'ಮಾತು'ಗಳನ್ನೇ ಬಂಡವಾಳ ಮಾಡಿಕೊಂಡು ಖ್ಯಾತಿ ಗಳಿಸಿದ್ದ ರಶ್ಮಿಗೆ ಅದೇ 'ಮಾತು' ಬಿಗ್ ಬಾಸ್ ಮನೆಯಲ್ಲಿ ಕಂಟಕವಾಗಿ ಪರಿಣಮಿಸಿದೆ.
ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಮೊದಲು ವಾಕ್ಸಮರಕ್ಕೆ ನಾಂದಿ ಹಾಡಿದವರು ರಾಪಿಡ್ ರಶ್ಮಿ. ಆಂಡ್ರ್ಯೂ ಹಾಗೂ ರಾಪಿಡ್ ರಶ್ಮಿ ನಡುವೆ ದೊಡ್ಡ ಯುದ್ಧವೇ ನಡೆದು ಹೋಯ್ತು. ಹೀಗಾಗಿ, ರಾಪಿಡ್ ರಶ್ಮಿ ಕಂಡ್ರೆ ಬಹುತೇಕರಿಗೆ ಅಷ್ಟಕಷ್ಟೆ.
ಒಂದು ವಾರದಿಂದ ರಾಪಿಡ್ ರಶ್ಮಿ ವರ್ತನೆ ಕಂಡು ಬೇಸೆತ್ತ 'ಬಿಗ್ ಬಾಸ್' ಸ್ಪರ್ಧಿಗಳು ಇದೀಗ ಆಕೆಯನ್ನ ನಾಮಿನೇಟ್ ಮಾಡಿದ್ದಾರೆ. ಮೊದಲನೇ ವಾರ ನಾಮಿನೇಷನ್ ನಿಂದ ಬಚಾವ್ ಆಗಿದ್ದ ರಾಪಿಡ್ ರಶ್ಮಿ ಈ ವಾರ ಮೇಜರ್ ಆಗಿ ಟಾರ್ಗೆಟ್ ಆಗಿದ್ದಾರೆ. ಮುಂದೆ ಓದಿರಿ...

ರಶ್ಮಿಗೆ ಅತಿ ಹೆಚ್ಚು ಮತಗಳು.!
'ಬಿಗ್ ಬಾಸ್' ಮನೆಯಿಂದ ರಶ್ಮಿ ರವರನ್ನ ಹೊರಗೆ ಹಾಕಲು ಆಡಮ್, ಕವಿತಾ, ರಾಕೇಶ್, ಆಂಡ್ರ್ಯೂ, ರೀಮಾ, ಜಯಶ್ರೀ ಸೇರಿದಂತೆ ಒಟ್ಟು ಏಳು ಮಂದಿ ಮತ ಹಾಕಿದರು. ಹೀಗಾಗಿ, ಬೇರೆ ದಾರಿಯಿಲ್ಲದೇ ರಶ್ಮಿ ನಾಮಿನೇಟ್ ಆಗಲೇಬೇಕಾಯಿತು.

ಸ್ನೇಹ ಕಂಡ್ರೆ ಅಷ್ಟಕಷ್ಟೆ
ಕೆಲವು ಜಗಳಗಳಿಗೆ ಸ್ನೇಹಾ ಕೂಡ ನಾಂದಿ ಹಾಡಿದ್ದರು. ಹೀಗಾಗಿ, ಸ್ನೇಹಾ ವಿರುದ್ಧವಾಗಿ ಆರು ಮಂದಿ ವೋಟ್ ಮಾಡಿದರು. ಹೀಗಾಗಿ, ಎರಡನೇ ವಾರ ಡೇಂಜರ್ ಝೋನ್ ನಲ್ಲಿ ಸ್ನೇಹಾ ಇದ್ದಾರೆ.

ಡಬಲ್ ಗೇಮ್ ಆಡಮ್
ಆಡಮ್ ಡಬಲ್ ಗೇಮ್ ಆಡುತ್ತಿರುವುದು ಹಲವರ ಅರಿವಿಗೆ ಬಂದಿದೆ. ಹೀಗಾಗಿ, ಆಡಮ್ ರನ್ನ ರಶ್ಮಿ, ಆನಂದ್, ಸ್ನೇಹಾ, ಮುರಳಿ ನಾಮಿನೇಟ್ ಮಾಡಿದರು.

ರಾಕೇಶ್ ಸೇಫ್ ಆಗಲಿಲ್ಲ
'ಬಿಗ್ ಬಾಸ್' ಮನೆಯಲ್ಲಿ ಸೇಫ್ ಗೇಮ್ ಆಡಲು ರಾಕೇಶ್ ಪ್ರಯತ್ನ ಪಡುತ್ತಿದ್ದಾರೆ. ಆದ್ರೆ ರಾಕೇಶ್ ವಿರುದ್ಧ ನಿನ್ನೆ ಮೂರು ಮತಗಳು ಚಲಾವಣೆ ಆಯ್ತು. ಹೀಗಾಗಿ, ರಾಕೇಶ್ ಈ ವಾರ ಸೇಫ್ ಆಗಿಲ್ಲ.

ಸೋನು ವಿರುದ್ಧ ಕಿಡಿ
ಸೋನು ಪಾಟೀಲ್ ಕಂಡ್ರೆ ಜಯಶ್ರೀ, ಶಶಿ ಹಾಗೂ ಮುರಳಿಗೆ ಆಗ್ಬರಲ್ಲ. ಹೀಗಾಗಿ, ಇವರೆಲ್ಲರೂ ಸೋನು ಪಾಟೀಲ್ ರನ್ನ ನಾಮಿನೇಟ್ ಮಾಡಿದರು.

ಕವಿತಾ, ಅಕ್ಷತಾ, ಶಶಿ ಮಿಸ್ ಆಗಲಿಲ್ಲ
ತಲಾ ಎರಡೆರಡು ಮತಗಳನ್ನು ಪಡೆದು ಕವಿತಾ ಗೌಡ, ಅಕ್ಷತಾ ಪಾಂಡವಪುರ ಹಾಗೂ ಶಶಿ ಕುಮಾರ್ ಈ ವಾರ ನಾಮಿನೇಟ್ ಆಗಿದ್ದಾರೆ. ಇವರುಗಳ ಪೈಕಿ ಯಾರು ಸೇಫ್ ಆಗ್ತಾರೋ, ನೋಡಬೇಕು.

ಕ್ಯಾಪ್ಟನ್ ಗೆ ವಿಶೇಷ ಅಧಿಕಾರ
ಮನೆಯ ಕ್ಯಾಪ್ಟನ್ ಆಗಿರುವ ಜಿಮ್ ರವಿಗೆ ಮೂರು ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ವಿಶೇಷ ಅಧಿಕಾರ ಲಭಿಸಿತು. ಅದರ ಅನುಸಾರ ರೀಮಾ, ನಯನ, ಆಂಡ್ರ್ಯೂ ಕೂಡ ನಾಮಿನೇಷನ್ ಲಿಸ್ಟ್ ಸೇರಿದರು.

ಸುರಕ್ಷಾ ಕವಚ ಬಳಸದ ಆಂಡ್ರ್ಯೂ
'ದಿ ವಿಲನ್' ಟಾಸ್ಕ್ ನಲ್ಲಿ ಗೆದ್ದ ಆಂಡ್ರ್ಯೂಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಡೆಯಿಂದ 'ಸುರಕ್ಷಾ ಕವಚ' ಲಭಿಸಿತು. ಒಂದು ಬಾರಿ ಮಾತ್ರ 'ಸುರಕ್ಷಾ ಕವಚ' ಬಳಸುವ ಅಧಿಕಾರ ಆಂಡ್ರ್ಯೂಗಿದೆ. ಹೀಗಾಗಿ, ಅದನ್ನ ಈ ವಾರವೇ ಬಳಸದಿರಲು ಆಂಡ್ರ್ಯೂ ತೀರ್ಮಾನ ಮಾಡಿದ್ದಾರೆ.

ಹನ್ನೊಂದು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?
ಈ ವಾರ 'ಬಿಗ್ ಬಾಸ್' ಮನೆಯಲ್ಲಿ ರಶ್ಮಿ, ಸ್ನೇಹಾ, ಆಡಮ್, ರಾಕೇಶ್, ಸೋನು ಸೇರಿದಂತೆ ಒಟ್ಟು ಹನ್ನೊಂದು ಮಂದಿ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಔಟ್ ಆಗಬೇಕು ಅನ್ನೋದು ನಿಮ್ಮ ಇಚ್ಛೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











