ಎರಡೇ ವಾರಕ್ಕೆ 'ಬಿಗ್ ಬಾಸ್'ನಿಂದ ಹೊರಬಂದ ರೀಮಾ
Recommended Video

Bigg Boss Kannada Season 6 : ಬಿಗ್ ಮನೆಯಿಂದ ಎರಡನೇ ವಾರ ಹೊರ ಬಂದ ಅಭ್ಯರ್ಥಿ ರೀಮಾ | FILMIBEAT KANNADA
'ಬಿಗ್ ಬಾಸ್ ಕನ್ನಡ ಸೀಸನ್ 6' ಕಾರ್ಯಕ್ರಮ ಎರಡು ವಾರ ಕಳೆದಿದೆ. ಮೊದಲ ವಾರ ರಕ್ಷಿತಾ ರೈ ಕಾರ್ಯಕ್ರಮದಿಂದ ಔಟ್ ಆಗಿದ್ದು, ಈ ವಾರ ಸಾಫ್ಟವೇರ್ ಹುಡುಗಿ ರೀಮಾ ಎಲಿಮಿನೇಟ್ ಆಗಿದ್ದಾರೆ.
ಈ ವಾರ ಒಟ್ಟು ಹತ್ತು ಸ್ಪರ್ಧಿಗಳು ನಾವಿನೇಟ್ ಆಗಿದ್ದರು. ಅಕ್ಷತಾ ಪಾಂಡವಪುರ, ಆಡಮ್ ಪಾಶಾ, ಆಂಡ್ರ್ಯೂ, ಕವಿತಾ, ನಯನ, ರಾಕೇಶ್, ರಶ್ಮಿ, ಶಶಿ, ಸ್ನೇಹ, ಸೋನು ಇವರಲ್ಲಿ ಒಬ್ಬರು ಮನೆಯಿಂದ ಹೊರ ಬರಬೇಕಿತ್ತು. ಈ ವಾರ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ಇತ್ತು.
ಕೊನೆಗೆ ನಾಮಿನೇಟ್ ಆದವರ ಪೈಕಿ ರೀಮಾ ಎಲಿಮಿನೇಟ್ ಆಗಿದ್ದಾರೆ. ಎರಡನೇ ವಾರಕ್ಕೆ ಅವರು ಆಟ ಮುಗಿಸಿ ಮನೆಗೆ ಮರಳಿದ್ದಾರೆ.

ಅಂದಹಾಗೆ, ರೀಮಾ ಮೂಲತಃ ಮಂಗಳೂರು ಜಿಲ್ಲೆಯ ಪುತ್ತೂರಿನ ಗೊಂಬೆ. ಸದ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದಾರೆ. ಅವರ ತಾಯಿ ವೃತ್ತಿಯಲ್ಲಿ ಟೀಚರ್. ಹಾಗಂತ ಶಿಸ್ತಿನಿ ಹುಡುಗಿ ಅಂತೂ ಈಕೆಯಲ್ಲ. ಎಲ್ಲ ವಿಷ್ಯಗಳಲ್ಲಿ ಟಾಪ್ ನಲ್ಲಿದ್ದೀನಿ ಎನ್ನುವ ರೀಮಾಗೆ ಗೈಡ್ಸ್ ನಲ್ಲಿ ರಾಷ್ಟ್ರಪತಿ ಪುರಸ್ಕಾರ ಸಿಕ್ಕಿರುವುದು ಹೆಮ್ಮೆ.
More from Filmibeat
English summary
Bigg Boss Kannada 6 week 2 Reema eliminated.
bigg boss kannada 6 bigg boss tv colors channel reema ಬಿಗ್ ಬಾಸ್ ಕನ್ನಡ 6 ಬಿಗ್ ಬಾಸ್ ಟಿವಿ ರಿಯಾಲಿಟಿ ಶೋ ಕಲರ್ಸ್ ವಾಹಿನಿ ರೀಮಾ


Click it and Unblock the Notifications











