ನವೀನ್ ಸಜ್ಜುಗೆ 'ಐ ಲವ್ ಯು' ಎಂದ ಸೋನು ಪಾಟೀಲ್.!
ಉತ್ತರ ಕರ್ನಾಟಕದ ಜವಾರಿ ಹುಡುಗಿ ಸೋನು ಪಾಟೀಲ್ 'ಬಿಗ್ ಬಾಸ್' ಮನೆಯಲ್ಲಿ ಗಾಯಕ ನವೀನ್ ಸಜ್ಜುಗೆ 'ಐ ಲವ್ ಯು' ಎಂದಿದ್ದಾರೆ. ಇಷ್ಟು ದಿನ ನವೀನ್ ಸಜ್ಜು ಕಂಡ್ರೆ ಸೋನು ಪಾಟೀಲ್ ಕೆನ್ನೆ ಕೆಂಪಾಗುತ್ತಿತ್ತು. ಅದರ ಗುಟ್ಟು ಇದೀಗ ರಟ್ಟಾಗಿದೆ.
ನವೀನ್ ಸಜ್ಜು ಕಂಡ್ರೆ ಸೋನು ಪಾಟೀಲ್ ಗೆ ಇಷ್ಟ ಅಂತೆ. ಆದ್ರೆ, ''ಪ್ರೀತಿ-ಗೀತಿ ಅಂತೇನೂ ಇಲ್ಲ. ಸ್ನೇಹಿತ ಆಗಿ ನವೀನ್ ಸಜ್ಜು ಇಷ್ಟ'' ಎಂದು ಸೋನು ಪಾಟೀಲ್ ಹೇಳಿದ್ದಾರೆ. ಅದು 'ಬಿಗ್ ಬಾಸ್' ಕೊಟ್ಟ ಸ್ಪೆಷಲ್ ಟಾಸ್ಕ್ ನಲ್ಲಿ.!
ಸ್ಪರ್ಧಿಗಳ ಮೊದಲ ಪ್ರೀತಿಯ ನೆನಪನ್ನು ಕೆದಕಲು 'ಬಿಗ್ ಬಾಸ್' ಮೊದಲ ಪ್ರೀತಿ ಎಂಬ ವಿಶೇಷ ಚಟುವಟಿಕೆ ನೀಡಿದರು. ಇದರ ಅನುಸಾರ ಎಲ್ಲರೂ ತಮ್ಮ ಫಸ್ಟ್ ಲವ್ ಬಗ್ಗೆ ಬಹಿರಂಗ ಪಡಿಸಬೇಕಿತ್ತು. ಮುಂದೆ ಓದಿರಿ...

ಸೋನು ಪಾಟೀಲ್ ಹೇಳಿದ್ದೇನು.?
''ನಾನು ಹುಡುಗರನ್ನು ಇಷ್ಟ ಪಡಲ್ಲ. ನಾನು ಲೆಕ್ಕ ಹಾಕಿದ ಪ್ರಕಾರ, ಎಂಟು ಮಂದಿ ನನಗೆ ಪ್ರಪೋಸ್ ಮಾಡಿದ್ದಾರೆ. ಎದೆ ಮೇಲೆ 'ಸೋನು' ಅಂತ ನಾಲ್ಕು ಮಂದಿ ಹಚ್ಚೆ ಕೂಡ ಹಾಕಿಸಿಕೊಂಡಿದ್ದಾರೆ. ಆದ್ರೆ, ನಾನು ಯಾರನ್ನೂ ಪ್ರೀತಿಸಿಲ್ಲ'' ಎಂದರು ನಟಿ ಸೋನು ಪಾಟೀಲ್.

ಅಜ್ಜಿ ಕಂಡ್ರೆ ಇಷ್ಟ
''ನನಗೆ ನನ್ನ ಅಜ್ಜಿ ಮೇಲೆ ತುಂಬಾ ಪ್ರೀತಿ. ನಮ್ಮಜ್ಜಿ ನನ್ನ ಕಷ್ಟಪಟ್ಟು ಸಾಕಿದ್ದಾರೆ. ಅವರು ಕೂಡಿಟ್ಟ ದುಡ್ಡಿನಲ್ಲಿ ನಾನು ಬಟ್ಟೆ ಖರೀದಿ ಮಾಡಿದ್ದೇನೆ. ನನ್ನಿಂದ ಅಜ್ಜಿ ದೂರ ಆಗಬಾರದು'' ಎಂದು ತಮ್ಮ ಅಜ್ಜಿ ಮೇಲಿನ ಪ್ರೀತಿಯನ್ನ ಸೋನು ಪಾಟೀಲ್ ವ್ಯಕ್ತಪಡಿಸಿದರು.

ಐ ಲವ್ ಯು
''ನವೀನ್.. ಲವ್ ಅಂತ ಅಲ್ಲ. ಒಳ್ಳೆಯ ಸ್ನೇಹಿತ. ಕಷ್ಟ ಅಂತ ಬಂದಾಗ ನನಗೆ ಯಾರೂ ಸಹಾಯ ಮಾಡಿಲ್ಲ. ಆದ್ರೆ, ನವೀನ್ ಹೆಣ್ಮಕ್ಕಳಿಗೆ ಬಹಳ ಗೌರವ ಕೊಡ್ತಾನೆ. ಚಳಿ ಆಗುತ್ತಿರುವಾಗ ನನಗೆ ನವೀನ್ ಜರ್ಕಿನ್ ಕೊಟ್ಟ. ಫ್ರೆಂಡ್ ಆಗಿ ನವೀನ್ 'ಐ ಲವ್ ಯು'' ಎಂದರು ಸೋನು ಪಾಟೀಲ್

ಸೋನು ಕೊಟ್ಟ ಸ್ಪಷ್ಟನೆ
''ಲವ್, ಮದುವೆ ಅಂದ್ರೆ ನನಗೆ ಇಷ್ಟ ಆಗಲ್ಲ. ಸ್ನೇಹಿತನಾಗಿ ನಾನು ನಿನ್ನನ್ನು ಇಷ್ಟ ಪಡುತ್ತೇನೆ'' ಎಂದು ನವೀನ್ ಗೆ ಸೋನು ಪಾಟೀಲ್ ಸ್ಪಷ್ಟ ಪಡಿಸಿದರು. ಅತ್ತ ನವೀನ್ ಕೂಡ ''ಒಳ್ಳೆಯ ಗೆಳತಿ ಅಂತ ನಾನು ನಿನ್ನ ಸ್ವೀಕರಿಸಿದ್ದೇನೆ'' ಎಂದು ಸೋನು ಪಾಟೀಲ್ ಗೆ ತಿಳಿಸಿದರು.


Click it and Unblock the Notifications











