'ಬಿಗ್ ಬಾಸ್ ಕನ್ನಡ-6': ಈ ವಾರ ಗಂಟು-ಮೂಟೆ ಕಟ್ಟಿಕೊಂಡು ಹೊರಗೆ ಹೋಗೋರು ಯಾರು.?
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾಗಿ ಎರಡು ವಾರಗಳು ಉರುಳಿವೆ. ಈ ಎರಡು ವಾರಗಳಲ್ಲಿ ಸ್ಪರ್ಧಿಗಳ ನಡುವೆ ಮನಸ್ತಾಪ, ಭಿನ್ನಾಭಿಪ್ರಾಯ ತುಸು ಜಾಸ್ತಿನೇ ಇದೆ.
ಇದೇ ಕಾರಣಕ್ಕೋ ಏನೋ, ಪ್ರತಿ ವಾರವೂ ಏನಿಲ್ಲ ಅಂದ್ರೂ 10-11 ಮಂದಿ ನಾಮಿನೇಟ್ ಆಗುತ್ತಿದ್ದಾರೆ. ಈ ವಾರವೂ ಹನ್ನೊಂದು ಮಂದಿ ಡೇಂಜರ್ ಝೋನ್ ಗೆ ಬಂದಿದ್ದಾರೆ.
ಈ ಹನ್ನೊಂದು ಮಂದಿ ಪೈಕಿ ಯಾರು ಗಂಟು ಮೂಟೆ ಕಟ್ಟಿಕೊಂಡು ಹೊರಗೆ ಹೋಗ್ತಾರೆ ಅನ್ನೋದು ಸದ್ಯದ ಕುತೂಹಲ. ಅದಕ್ಕೂ ಮುನ್ನ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ಅಂತ ನೋಡ್ಕೊಂಡ್ ಬರೋಣ ಬನ್ನಿ...

ಡೇಂಜರ್ ಝೋನ್ ನಲ್ಲಿ ಜಯಶ್ರೀ
'ಬಿಗ್ ಬಾಸ್' ಮನೆಯ ರಿಮೋಟ್ ಕಂಟ್ರೋಲ್ ಅಂತಲೇ ಹೆಸರು ಪಡೆದಿರುವ ಜಯಶ್ರೀ ಈ ವಾರ ನಾಮಿನೇಟ್ ಆಗಿದ್ದಾರೆ. ಜಯಶ್ರೀ ವಿರುದ್ಧ ರಶ್ಮಿ, ರಾಕೇಶ್ ಹಾಗೂ ಆನಂದ ಮತ ಚಲಾಯಿಸಿದರು. ಮೂರು ವೋಟ್ ಗಳು ಬಿದ್ದ ಕಾರಣ ಜಯಶ್ರೀ ಡೇಂಜರ್ ಝೋನ್ ಗೆ ಬಂದಿದ್ದಾರೆ.

ನಾಮಿನೇಟ್ ಆದ ರಾಕೇಶ್-ಅಕ್ಷತಾ
'ಆಧುನಿಕ ಕೃಷ್ಣ' ರಾಕೇಶ್ ಹಾಗೂ ಅಕ್ಷತಾ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ 'ಬಿಗ್ ಬಾಸ್' ಮನೆಯಲ್ಲಿ ಕೇಳಿಬಂದಿದೆ. ಹೀಗಾಗಿ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಇವರಿಬ್ಬರೂ ತಲಾ ಮೂರು ವೋಟ್ ಪಡೆದು ಟಾರ್ಗೆಟ್ ಆಗಿದ್ದಾರೆ.

ರಶ್ಮಿ ಮಿಸ್ ಆಗಲಿಲ್ಲ.!
'ಬಿಗ್ ಬಾಸ್' ಮನೆಯ ಪಾಪಸ್ ಕಳ್ಳಿ ಎಂದೇ ಗುರುತಿಸಿಕೊಂಡಿರುವ ರಶ್ಮಿ ಈ ವಾರವೂ ನಾಮಿನೇಟ್ ಆಗಿದ್ದಾರೆ. ಇತರೆ ಸ್ಪರ್ಧಿಗಳ ಜೊತೆಗೆ ಆಗಾಗ ಮಾತಿನ ಚಕಮಕಿ ನಡೆಸುವ ರಶ್ಮಿ ಈ ವಾರ ಸೇಫ್ ಆಗುವುದು, ಬಿಡುವುದು ನಿಮ್ಮ ಕೈಯಲ್ಲಿದೆ.

ಸೇಫ್ ಆಗದ ಆಡಮ್ ಪಾಶಾ
ಅತ್ತ ಮಗುವನ್ನು ಚಿವುಟಿ ಇತ್ತ ತೊಟ್ಟಿಲನ್ನು ತೂಗುವ ಕೆಲಸ ಮಾಡುತ್ತಿರುವ ಆಡಮ್ ಪಾಶಾ ಈ ವಾರ ನಾಮಿನೇಟ್ ಆಗಿದ್ದಾರೆ. ಡಬಲ್ ಗೇಮ್ ಆಡುತ್ತಿರುವ ಆಡಮ್ ಪಾಶಾಗೆ ನೀವು ಮತ ಹಾಕ್ತೀರಾ.?

ತಲಾ ಎರಡು ಮತಗಳನ್ನು ಪಡೆದವರು
'ಬಿಗ್ ಬಾಸ್' ಮನೆಯಲ್ಲಿ ಪ್ರೇಮ ಕಥೆಯನ್ನು ನಾಂದಿ ಹಾಡಿರುವ ಸೋನು ಪಾಟೀಲ್, ಬಹುಕಾಲ ಸುಮ್ಮನೆ ಇರುವ ಮುರಳಿ, ಮುಂಗೋಪಿ ರವಿ, ಗಾಸಿಪ್ ಕ್ವೀನ್ ಕವಿತಾ ಗೌಡ, ಸ್ನೇಹಾ ಹಾಗೂ ಆನಂದ ವಿರುದ್ಧ ತಲಾ ಎರಡೆರಡು ಮತಗಳು ಚಲಾವಣೆ ಆದವು. ಹೀಗಾಗಿ ಇವರೆಲ್ಲರೂ ನಾಮಿನೇಟ್ ಆಗಿದ್ದಾರೆ.

ಬಚಾವ್ ಆದ ನವೀನ್
ಗಾಯಕ ನವೀನ್ ಸಜ್ಜು ವಿರುದ್ಧವೂ ಎರಡು ಮತಗಳು ಬಿದ್ದಿದ್ದವು. ಆದ್ರೆ, ಕ್ಯಾಪ್ಟನ್ ಧನರಾಜ್ ಗೆ ಸಿಕ್ಕ ವಿಶೇಷ ಅಧಿಕಾರದ ಪರಿಣಾಮ, ಡೇಂಜರ್ ಝೋನ್ ನಿಂದ ನವೀನ್ ಬಚಾವ್ ಆದರು.

ಯಾರಿಗೂ ಆಂಡ್ರ್ಯೂ ನೆನಪಾಗಲಿಲ್ವ.?
ಎಲ್ಲರಿಗೂ ಆಂಡ್ರ್ಯೂ ಕಿರಿಕಿರಿ ನೀಡಿದ್ದರೂ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಆಂಡ್ರ್ಯೂ ಹೆಸರನ್ನು ತೆಗೆದುಕೊಂಡಿದ್ದು ಜಿಮ್ ರವಿ ಮಾತ್ರ. ಆಂಡ್ರ್ಯೂಗೆ ಕೇವಲ ಒಂದು ಮತ ಬಿದ್ದಿದ್ದರಿಂದ ಅವರು ಈ ವಾರ ಸೇಫ್ ಆಗಿದ್ದಾರೆ.

ಶಶಿ ಮತ್ತು ನಯನ ಕೂಡ ಸೇಫ್
ರೈತ ಶಶಿ ಕುಮಾರ್ ಹಾಗೂ ನಯನ ಬಗ್ಗೆ ಯಾರೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಹೀಗಾಗಿ, ಇವರಿಬ್ಬರೂ ಈ ವಾರ ಸೇಫ್ ಆಗಿದ್ದಾರೆ.

ನಿಮ್ಮ ಮತ ಯಾರಿಗೆ.?
ಜಯಶ್ರೀ, ರಾಕೇಶ್, ಅಕ್ಷತಾ, ರಶ್ಮಿ, ಆಡಮ್ ಪಾಶಾ, ಸೋನು ಪಾಟೀಲ್, ಮುರಳಿ, ರವಿ, ಕವಿತಾ ಗೌಡ, ಸ್ನೇಹಾ ಮತ್ತು ಆನಂದ... ಇವರುಗಳ ಪೈಕಿ ಯಾರು ಔಟ್ ಆಗಬೇಕು.? ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











