'ಬಿಗ್ ಬಾಸ್' ಮನೆಯಿಂದ ಹೊರ ಬಂದ ಸ್ನೇಹಾ ಆಚಾರ್ಯ
'ಬಿಗ್ ಬಾಸ್ ಕನ್ನಡ ಸೀಸನ್ 6' ಕಾರ್ಯಕ್ರಮ ಮೂರು ವಾರ ಕಳೆದಿದೆ. ಮೂರನೇ ವಾರ ನೃತ್ಯ ಸಂಯೋಜಕಿ ಸ್ನೇಹಾ ಆಚಾರ್ಯ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಜಯಶ್ರೀ, ರಾಕೇಶ್, ಅಕ್ಷತಾ, ರಶ್ಮಿ, ಆಡಮ್ ಪಾಶಾ, ಸೋನು ಪಾಟೀಲ್, ಮುರಳಿ, ರವಿ, ಕವಿತಾ ಗೌಡ, ಸ್ನೇಹಾ ಮತ್ತು ಆನಂದ ಈ ವಾರ ಒಟ್ಟು ಹನ್ನೊಂದು ಸ್ಪರ್ಧಿಗಳು ನಾವಿನೇಟ್ ಆಗಿದ್ದರು. ಕೊನೆಗೆ ನಾಮಿನೇಟ್ ಆದವರ ಪೈಕಿ ಸ್ನೇಹಾ ಎಲಿಮಿನೇಟ್ ಆಗಿದ್ದಾರೆ.
ಸ್ನೇಹ ಆಚಾರ್ಯ ಹಿನ್ನಲೆ
ಜೋಶ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸ್ನೇಹ ಆಚಾರ್ಯ. 'ಕೃಷ್ಣ ಲೀಲಾ', 'ಆಕೆ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಸ್ನೇಹ ಆಚಾರ್ಯ ಅಭಿನಯಿಸಿದ್ದಾರೆ. ಡ್ಯಾನ್ಸ್ ಕಲಿತಿರುವ ಸ್ನೇಹ ಆಚಾರ್ಯ ಮುಂಬೈನಲ್ಲಿ ನೃತ್ಯ ಸಂಯೋಜಕಿ ಆಗಿದ್ದಾರೆ. ಬಾಲಿವುಡ್ ನಟ ಗೋವಿಂದಾ, ಶಾಹಿದ್ ಕಪೂರ್, ಪ್ರಭುದೇವ, ಪ್ರಿಯಾಂಕಾ ಛೋಪ್ರಾ ಗೆ ಕೋರಿಯೋಗ್ರಫಿ ಮಾಡುವ ತಂಡದಲ್ಲಿ ಸ್ನೇಹ ಆಚಾರ್ಯ ಕೂಡ ಇದ್ದಾರೆ.

ನ್ಯೂಯಾರ್ಕ್ ಮೂಲದ ರಾಯನ್ ಜೊತೆಗೆ ಈಗಾಗಲೇ ಸ್ನೇಹ ಆಚಾರ್ಯಗೆ ನಿಶ್ಚಿತಾರ್ಥ ಆಗಿದೆ. ಈ ತಿಂಗಳು ಅಂದ್ರೆ ನವೆಂಬರ್ 24-25 ರಂದು ಸ್ನೇಹ ಆಚಾರ್ಯ-ರಾಯನ್ ಮದುವೆ ಫಿಕ್ಸ್ ಆಗಿದೆ. ಹೀಗಿರುವಾಗಲೇ, ಸ್ನೇಹ ಆಚಾರ್ಯ 'ಬಿಗ್ ಬಾಸ್' ಮನೆಗೆ ಬಂದಿದ್ದರು. ಈಗ ಮನೆಯಿಂದ ಹೊರಬಂದ ಕಾರಣ ಈ ಮೊದಲೇ ನಿಗಧಿಯಾಗಿದ್ದ ದಿನಾಂಕಕ್ಕೆ ಮದುವೆ ಆಗಲಿದ್ದಾರೆ.


Click it and Unblock the Notifications











