'ಬಿಗ್ ಬಾಸ್ ಕನ್ನಡ-6': ಡೇಂಜರ್ ಝೋನ್ ನಲ್ಲಿ ಆಂಡ್ರ್ಯೂ.!
'ಬಿಗ್ ಬಾಸ್' ಮನೆಯಲ್ಲಿ ಅತಿ ಹೆಚ್ಚು ಕಿರಿಕ್ ಮಾಡಿಕೊಂಡಿರುವವರು ಮಿಸ್ಟರ್ ಆಂಡ್ರ್ಯೂ. ಆದರೂ, ಅದ್ಯಾಕೋ ಏನೋ.. ಕಳೆದ ವಾರ ಆಂಡ್ರ್ಯೂ ನಾಮಿನೇಟ್ ಆಗಿರಲಿಲ್ಲ. ಆದ್ರೆ, ಈ ವಾರ ಅದೇ ಮುಂದುವರೆಯಲಿಲ್ಲ. ಮಿಸ್ ಆಗದೆ ಆಂಡ್ರ್ಯೂ ಡೇಂಜರ್ ಝೋನ್ ಗೆ ಬಂದಿದ್ದಾರೆ.
ಒಂದ್ಕಡೆ ಧನರಾಜ್ ಜೊತೆಗೆ ಕಿತ್ತಾಟ, ಇನ್ನೊಂದ್ಕಡೆ ಅಕ್ಷತಾ ಜೊತೆಗೆ ರಂಪಾಟ... ಈ ನಡುವೆ ಆಗಾಗ ನಾಲಿಗೆಗೆ ಫಿಲ್ಟರ್ ಇಲ್ಲದ ಕಾಮೆಂಟ್ಸ್. ಈ ಎಲ್ಲಾ ಕಾರಣಗಳಿಂದ 'ಬಿಗ್ ಬಾಸ್' ಮನೆ ಸದಸ್ಯರು ಆಂಡ್ರ್ಯೂನ ಈ ವಾರ ನಾಮಿನೇಟ್ ಮಾಡಿದ್ದಾರೆ.
ಆಂಡ್ರ್ಯೂ ಜೊತೆಗೆ ಇನ್ನೂ ಎಂಟು ಮಂದಿಗೆ ಎಲಿಮಿನೇಷನ್ ಟೆನ್ಷನ್ ಇದೆ. ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ನಾಲ್ಕನೇ ವಾರ ಹೊರಗೆ ಹೋಗಲು ನಾಮಿನೇಟ್ ಆಗಿರುವವರು ಯಾರ್ಯಾರು ಅಂದ್ರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಆಂಡ್ರ್ಯೂಗೆ ಅತಿ ಹೆಚ್ಚು ವೋಟ್ಸ್
ಶಶಿ ಕುಮಾರ್, ರಾಪಿಡ್ ರಶ್ಮಿ, ನಯನ ಪುಟ್ಟಸ್ವಾಮಿ, ಕವಿತಾ ಗೌಡ, ಧನರಾಜ್ ಸೇರಿದಂತೆ ಒಟ್ಟು ಆರು ಮಂದಿ ಆಂಡ್ರ್ಯೂ ರನ್ನ ನಾಮಿನೇಟ್ ಮಾಡಿದರು. ಪರಿಣಾಮ, ಆಂಡ್ರ್ಯೂಗೆ ಈಗ ನಿಮ್ಮೆಲ್ಲರ ಸಹಕಾರ ಅನಿವಾರ್ಯ. ಸುರಕ್ಷ ಕವಚ ಇದ್ದರೂ, ಅದನ್ನ ಈ ವಾರ ಆಂಡ್ರ್ಯೂ ಬಳಸಿಕೊಳ್ಳಲಿಲ್ಲ.

ಟಾರ್ಗೆಟ್ ಆದ ರಾಕೇಶ್
ಒಳ್ಳೆತನ ಕಾಪಾಡಿಕೊಳ್ಳಲು ಹೋಗಿ ಕೆಲ ಟಾಸ್ಕ್ ಗಳಲ್ಲಿ ರಾಕೇಶ್ ಎಡವಟ್ಟು ಮಾಡಿಕೊಂಡರು. ಇದು ಹಲವರಿಗೆ ಸರಿ ಎನಿಸದ ಕಾರಣ, ಈ ವಾರ ರಾಕೇಶ್ ಮೇಜರ್ ಟಾರ್ಗೆಟ್ ಆದರು.

ರಾಪಿಡ್ ರಶ್ಮಿ ಮಿಸ್ ಆಗಲಿಲ್ಲ
ಆಗಾಗ ಕಾಲು ಕೆರೆದುಕೊಂಡು ಕ್ಯಾತೆ ತೆಗೆಯುವ ರಾಪಿಡ್ ರಶ್ಮಿ ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಜಯಶ್ರೀ, ಧನರಾಜ್ ಮತ್ತು ಆಡಮ್... ರಶ್ಮಿ ವಿರುದ್ಧ ಮತ ಚಲಾಯಿಸಿದರು.

ತಲಾ ಮೂರು ಮತ ಪಡೆದುಕೊಂಡವರು
ಕವಿತಾ, ಶಶಿ ಕುಮಾರ್ ಮತ್ತು ಆನಂದ ಮಾಲಗತ್ತಿ ವಿರುದ್ಧ ತಲಾ ಮೂರು ಮತಗಳು ಬಿದ್ದವು. ಹೀಗಾಗಿ, ಈ ಮೂವರು ಈ ವಾರ ಡೇಂಜರ್ ಝೋನ್ ಗೆ ಬಂದಿದ್ದಾರೆ.

ನಾಮಿನೇಟ್ ಆದ ಧನರಾಜ್
ಅಕ್ಷತಾ ಮತ್ತು ಆನಂದ್ ಮಾತ್ರ ಧನರಾಜ್ ಹೆಸರನ್ನು ತೆಗೆದುಕೊಂಡರು. ಎರಡು ವೋಟ್ ಬಂದ ಕಾರಣ, ಧನರಾಜ್ ಕೂಡ ನಾಮಿನೇಟ್ ಆಗಬೇಕಾಯಿತು.

ಕ್ಯಾಪ್ಟನ್ ತೆಗೆದುಕೊಂಡ ಹೆಸರುಗಳು
ಮನೆಯ ಕ್ಯಾಪ್ಟನ್ ಆಗಿರುವ ಸೋನುಗೆ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಇತ್ತು. ಹೀಗಾಗಿ, ನಯನ ಪುಟ್ಟಸ್ವಾಮಿ ಹಾಗೂ ಆಡಮ್ ಪಾಶಾಗೆ ಸೋನು ಪಾಟೀಲ್ ಎಲಿಮಿನೇಷನ್ ತಲೆಬಿಸಿ ಕೊಟ್ಟಿದ್ದಾರೆ.

ಜಸ್ಟ್ ಮಿಸ್ ಆದವರು
ನವೀನ್ ಸಜ್ಜು ಮತ್ತು ಮುರಳಿಗೆ ಕೇವಲ ಒಂದು ಮತ ಬಿದ್ದಿದ್ದವು. ಹೀಗಾಗಿ, ಅವರು ನಾಮಿನೇಷನ್ ನಿಂದ ಸೇಫ್ ಅದರು.

ನಿಮ್ಮ ಮತ ಯಾರಿಗೆ.?
ಆಂಡ್ರ್ಯೂ, ರಾಕೇಶ್, ರಶ್ಮಿ, ಕವಿತಾ, ಶಶಿ, ಆನಂದ್, ಧನರಾಜ್, ನಯನ ಮತ್ತು ಆಡಮ್ ಪಾಶಾ... ಇವರುಗಳ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











