ರಶ್ಮಿಗೆ ಬಾತ್ ರೂಮ್ ಬಾಗಿಲು ತೋರಿಸಿದ ಶಶಿ: ಅಸಲಿ ಆಟ ಈಗ ಶುರು.!
'ಬಿಗ್ ಬಾಸ್' ಮನೆಯಲ್ಲಿ ಕೆಲ ಮಹಿಳಾ ಸ್ಪರ್ಧಿಗಳಿಗಂತೂ ಅಡುಗೆ ಮನೆ ಅಂದ್ರೆ ಒಂಥರಾ ಪವರ್ ಸೆಂಟರ್ ಇದ್ದ ಹಾಗೆ. ಅಡುಗೆ ಮನೆ ಸೇರಿಬಿಟ್ಟರೆ ಇಡೀ ಮನೆ ಮ್ಯಾನೇಜ್ ಮಾಡಬಹುದು ಎಂಬ ಕಲ್ಪನೆ ಇರಬಹುದೇನೋ... ಅದಕ್ಕೆ ಅಡುಗೆ ಮನೆಗಾಗಿ ಹಲವು ಬಾರಿ ಕಿತ್ತಾಟಗಳು ನಡೆದಿವೆ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾದಾಗ, ಅಡುಗೆ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡವರು ನಟಿ ಜಯಶ್ರೀ. ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿ ಇಲ್ಲದೇ ಇದ್ದರೂ, ಅಡುಗೆ ಮಾಡುವ ನೆಪ ಇಟ್ಟುಕೊಂಡು ರಶ್ಮಿ ಅಲ್ಲೇ ಕಾಲ ಕಳೆದರು.
''ಬೇರೆ ಡಿಪಾರ್ಟ್ಮೆಂಟ್ ಗೆ ಹಾಕಿದರೆ ರಶ್ಮಿ ಕೆಲಸ ಮಾಡಲ್ಲ. ಬೇಕು ಅಂತ ಅಡುಗೆ ಮನೆಯಲ್ಲೇ ಇರುತ್ತಾರೆ. ಒಮ್ಮೆ ಅವರನ್ನ ಬಾತ್ ರೂಮ್ ಡಿಪಾರ್ಟ್ಮೆಂಟ್ ಗೆ ಹಾಕಬೇಕು'' ಎಂಬ ಮಾತು ಕಳೆದ ವಾರವೇ ಕೇಳಿಬಂದಿತ್ತು.
ಈ ವಾರದ ಕ್ಯಾಪ್ಟನ್ ಶಶಿ ಆಗಿರುವ ಕಾರಣ, ಬೇಕು ಅಂತಲೇ ರಶ್ಮಿಗೆ ಬಾತ್ ರೂಮ್ ಬಾಗಿಲು ತೋರಿಸಿದ್ದಾರೆ. ಇದರಿಂದ ರಶ್ಮಿ ಕಿರಿಕಿರಿಗೊಂಡಿರುವುದು ಸತ್ಯ. ಮುಂದೆ ಓದಿರಿ...

ಬಾತ್ ರೂಮ್ ಡಿಪಾರ್ಟ್ಮೆಂಟ್ ನಲ್ಲಿ ರಶ್ಮಿ
''ಇಲ್ಲಿಯವರೆಗೂ ರಶ್ಮಿ ಬಾತ್ ರೂಮ್ ತೊಳೆದಿಲ್ಲ. ಹೀಗಾಗಿ ಅವರನ್ನ ಬಾತ್ ರೂಮ್ ಡಿಪಾರ್ಟ್ಮೆಂಟ್ ಗೆ ಹಾಕುವೆ'' ಅಂತ ಕ್ಯಾಪ್ಟನ್ ಶಶಿ ಘೋಷಿಸಿದರು. ದೂಸ್ರಾ ಮಾತನಾಡದೇ ರಶ್ಮಿ ಒಪ್ಪಿಕೊಳ್ಳಲೇಬೇಕಾಯಿತು.

ರಶ್ಮಿ ಜೊತೆ ಸೋನು.!
''ಬಾತ್ ರೂಮ್ ನಲ್ಲಿ ಹೆಚ್ಚು ಕೆಲಸ ಇರಲ್ಲ. ಹೀಗಾಗಿ ಇಬ್ಬರೇ ಸಾಕು'' ಎಂದು ರಶ್ಮಿ ಜೊತೆ ಸೋನು ರನ್ನ ಬಾತ್ ರೂಮ್ ಡಿಪಾರ್ಟ್ಮೆಂಟ್ ಗೆ ಶಶಿ ಹಾಕಿದ್ದಾರೆ. ಅಲ್ಲಿಗೆ, ಬಾತ್ ರೂಮ್ ತೊಳೆಯದೇ ರಾಪಿಡ್ ರಶ್ಮಿಗೆ ಬೇರೆ ದಾರಿ ಇಲ್ಲ.

ಇನ್ನೊಬ್ಬರನ್ನು ಕೊಡಿ.!
''ಇಬ್ಬರಿಗೆ ಬಾತ್ ರೂಮ್ ಕೆಲಸ ಮಾಡಲು ಆಗಲ್ಲ. ನಮಗೆ ಇನ್ನೊಬ್ಬರನ್ನು ಕೊಡಿ'' ಅಂತ ರಾಪಿಡ್ ರಶ್ಮಿ ವಾದಕ್ಕೆ ಇಳಿದರು. ಆದರೆ ಅದಕ್ಕೆ ಶಶಿ ಕುಮಾರ್ ಒಪ್ಪಿಗೆ ಸೂಚಿಸಲಿಲ್ಲ.

ಕಿರಿಕಿರಿಗೊಂಡ ರಶ್ಮಿ
ಅಡುಗೆ ಮನೆಯಿಂದ ತೆಗೆದು ಬಾತ್ ರೂಮ್ ಗೆ ಹಾಕಿದ್ದಕ್ಕೆ ರಶ್ಮಿ ಉರ್ಕೊಂಡಿದ್ದರು. ಇನ್ನೂ, ಬಾತ್ ರೂಮ್ ಡಿಪಾರ್ಟ್ಮೆಂಟ್ ಗೆ ಇಬ್ಬರನ್ನ ಮಾತ್ರ ಹಾಕಿರುವ ಕಾರಣ ರಶ್ಮಿ ಕಿರಿಕಿರಿಗೊಂಡರು.

ಮುಂದೇನಾಗುತ್ತೋ.?
ಕಳೆದ ವಾರ ಕೊಂಚ ಸೈಲೆಂಟ್ ಆಗಿದ್ದ ರಶ್ಮಿ ಈ ವಾರ ಬಾತ್ ರೂಮ್ ವಿಷಯಕ್ಕೆ ಮತ್ತೆ ಕ್ಯಾತೆ ತೆಗೆದರೂ ಅಚ್ಚರಿ ಇಲ್ಲ. ಶಶಿ ಮತ್ತು ತಂಡಕ್ಕೆ ಮೊದಲೇ ರಶ್ಮಿ ಕಂಡ್ರೆ ಆಗಲ್ಲ. ಈ ಇರುಸುಮುರುಸು ಎಲ್ಲಿಯವರೆಗೂ ಹೋಗಿ ತಲುಪುತ್ತೋ, ನೋಡಬೇಕು.


Click it and Unblock the Notifications











