ಸೈಲೆಂಟ್ ಆಗಿ ಇದ್ದದ್ದೇ ಜಿಮ್ ರವಿಗೆ ಮುಳುವಾಯಿತಾ.?

Recommended Video

Bigg Boss Kannada Season 6: ಸೈಲೆಂಟ್ ಆಗಿ ಇದ್ದದ್ದೇ ಜಿಮ್ ರವಿಗೆ ಮುಳುವಾಯಿತಾ.? | FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕೆ ಜಿಮ್ ರವಿ ಎಂಟ್ರಿಕೊಟ್ಟಾಗ, ಖಂಡಿತ ಇವರು ಫಿನಾಲೆವರೆಗೂ ಬರ್ತಾರೆ ಅಂತ ಎಷ್ಟೋ ವೀಕ್ಷಕರು ಭಾವಿಸಿದ್ದರು. ಬಾಡಿ ಬಿಲ್ಡರ್ ಜಿಮ್ ರವಿಗೆ ಕೋಪ ಜಾಸ್ತಿ, ಇದರಿಂದ 'ಬಿಗ್ ಬಾಸ್' ಮನೆಯಲ್ಲಿ ಎಷ್ಟು ಜಗಳ ಆಗುತ್ತೋ ಎಂಬ ಲೆಕ್ಕಾಚಾರ ಕೂಡ ಇತ್ತು. ಆದ್ರೆ, ಇವೆಲ್ಲವೂ ಈಗ ಉಲ್ಟಾ ಪಲ್ಟಾ ಆಗಿದೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಐದನೇ ವಾರಕ್ಕೆ ಜಿಮ್ ರವಿ ಔಟ್ ಆಗಿದ್ದಾರೆ. ಮೊದಲ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆದ ರವಿ, 'ಬಿಗ್ ಬಾಸ್' ಮನೆ ಸದಸ್ಯರ ಪಾಲಿಗೆ ಪಿಟಿ ಮಾಸ್ಟರ್ ಆಗಿದ್ದರು.

ಆದ್ರೆ, ಬರ್ತಾ ಬರ್ತಾ ರವಿ ಯಾಕೋ ಮಂಕಾಗಿಬಿಟ್ಟರು. ಯಾರ ಮನಸ್ಸಿಗೂ ನೋವು ಮಾಡಲು ಇಷ್ಟ ಪಡದ ರವಿ, ಮುರಳಿ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು.

Bigg Boss Kannada 6: Week 5: Gym Ravi eliminated

ಹಾಗ್ನೋಡಿದ್ರೆ, ಮೂರು-ನಾಲ್ಕನೇ ವಾರದ ಸಂಚಿಕೆಗಳಲ್ಲಿ ರವಿ ಅಷ್ಟಾಗಿ ಕಾಣಿಸಿಕೊಳ್ಳಲೇ ಇಲ್ಲ. ಸೈಲೆಂಟ್ ಆಗಿ ಇದ್ದ ಕಾರಣಕ್ಕೆ, ವೀಕ್ಷಕರ ಮನ ಗೆಲ್ಲುವಲ್ಲಿ ರವಿ ಯಶಸ್ವಿ ಆಗಲಿಲ್ಲ.

ನಾಲ್ಕನೇ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದ ರವಿಗೆ ವೀಕ್ಷಕರ ಬೆಂಬಲ ಲಭಿಸಿಲ್ಲ. ವೀಕ್ಷಕರಿಂದ ಕಮ್ಮಿ ವೋಟುಗಳು ಸಿಕ್ಕ ಪರಿಣಾಮ, 'ಬಿಗ್ ಬಾಸ್' ಮನೆಯಿಂದ ರವಿ ಔಟ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ರವಿ ಇನ್ನೂ ಇರಬೇಕಿತ್ತು ಅಂತ ನಿಮಗೆ ಅನ್ಸುತ್ತಾ.? ರವಿ ಎಲಿಮಿನೇಷನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Week 5: Gym Ravi eliminated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X