'ಬಿಗ್ ಬಾಸ್ ಕನ್ನಡ-6': ಈ ಆರು ಜನರ ಪೈಕಿ ನಿಮ್ಮ ಮತ ಯಾರಿಗೆ.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ನಿನ್ನೆ-ಮೊನ್ನೆ ಶುರುವಾದ ಹಾಗೆ ಇದ್ದರೂ, ಆಗಲೇ ನಾಲ್ಕು ವಾರ ಉರುಳಿ ಹೋಗಿದೆ. 'ಬಿಗ್ ಬಾಸ್' ಮನೆಯಿಂದ ಅದಾಗಲೇ ನಾಲ್ಕು ಮಂದಿ ಔಟ್ ಆಗಿದ್ದಾರೆ.
ಈ ವಾರ ಕೇವಲ ಆರು ಮಂದಿ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆಗಾಗಿ 'ಬಿಗ್ ಬಾಸ್' ಇಬ್ಬಿಬ್ಬರನ್ನು ಒಟ್ಟಿಗೆ ಕರೆದ ಕಾರಣ ಸೇಫ್ ಆಗುವ ಅವಕಾಶ ಆರು ಮಂದಿಗೆ ಲಭಿಸಿತು. ಉಳಿದ ಆರು ಮಂದಿ ಬೇರೆ ದಾರಿ ಇಲ್ಲದೇ ನಾಮಿನೇಟ್ ಆಗಲೇ ಬೇಕಾಯಿತು.
ಕಳೆದ ಮೂರು ವಾರಗಳಿಂದ ಡೇಂಜರ್ ಝೋನ್ ನಲ್ಲೇ ಇದ್ದ ಆನಂದ್ ಈ ವಾರ ಕ್ಯಾಪ್ಟನ್ ಕೃಪಾ ಕಟಾಕ್ಷದಿಂದ ಸೇಫ್ ಆಗಿದ್ದಾರೆ. ಹಾಗಾದ್ರೆ, ಈ ವಾರ ನಾಮಿನೇಟ್ ಆದವರು ಯಾರ್ಯಾರು ಅಂತೀರಾ.? ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ...

ಕ್ಯಾಪ್ಟನ್ ಶಶಿ ಕುಮಾರ್
ಈ ವಾರ ಮನೆಯ ಕ್ಯಾಪ್ಟನ್ ಆಗಿರುವುದು 'ಮಾರ್ಡನ್ ರೈತ' ಶಶಿ ಕುಮಾರ್. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಿಂದ ಶಶಿ ಕುಮಾರ್ ಸೇಫ್ ಆಗಿದ್ದಾರೆ.

ಆನಂದ್ ನ ಸೇಫ್ ಮಾಡಿದ ಶಶಿ
ನಾಮಿನೇಷನ್ ಪ್ರಕ್ರಿಯೆಯಿಂದ ಒಬ್ಬರನ್ನು ಸೇಫ್ ಮಾಡುವ ಅವಕಾಶ ಶಶಿ ಗಿತ್ತು. ಆನಂದ್ ರನ್ನ ಸೇಫ್ ಮಾಡಲು ಶಶಿ ಕುಮಾರ್ ನಿರ್ಧರಿಸಿದರು.

ಜಯಶ್ರೀಗೆ ಉಡುಗೊರೆ ಕೊಟ್ಟ ರಶ್ಮಿ
ನಾಮಿನೇಷನ್ ಪ್ರಕ್ರಿಯೆಗಾಗಿ ಮೊದಲು ಕನ್ಫೆಶನ್ ರೂಮ್ ಒಳಗೆ ಹೋದವರು ಜಯಶ್ರೀ ಮತ್ತು ರಾಪಿಡ್ ರಶ್ಮಿ. ''ಶನಿವಾರ ನನ್ನ ಹುಟ್ಟುಹಬ್ಬ. ಉಡುಗೊರೆ ಅಂತ ನನ್ನ ಬಿಟ್ಟುಬಿಡು'' ಎಂದು ಜಯಶ್ರೀ ಕೇಳಿಕೊಂಡ ಕಾರಣ, ನಾಮಿನೇಟ್ ಆಗಲು ರಾಪಿಡ್ ರಶ್ಮಿ ಒಪ್ಪಿಕೊಂಡರು. ಹೀಗಾಗಿ, ಜಯಶ್ರೀ ಸೇಫ್ ಆದರು.

ನಾಮಿನೇಟ್ ಆದ ಧನರಾಜ್
''ಜನ ನನ್ನನ್ನು ಉಳಿಸುತ್ತಾರೆ'' ಎನ್ನುತ್ತಾ ಜನರ ಮೇಲೆ ನಂಬಿಕೆ ಇಟ್ಟು ನಾಮಿನೇಟ್ ಆಗಲು ಧನರಾಜ್ ಮುಂದಾದರು. ಸೈಲೆಂಟ್ ಆಗಿದ್ದ ನವೀನ್ ಸಜ್ಜು ನಾಮಿನೇಷನ್ ನಲ್ಲಿ ಸೇಫ್ ಆದರು.

ಬಚಾವ್ ಅದ ರಾಕೇಶ್
''ಕಳೆದ ವಾರ ನನ್ನಿಂದ ತುಂಬಾ ತಪ್ಪುಗಳಾಗಿವೆ. ರಾಕೇಶ್ ನ ನಾನು ಬಿಟ್ಟುಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಕೂಡ ಬಂದಿದೆ. ಹೀಗಾಗಿ, ತಪ್ಪನ್ನ ತಿದ್ದಿಕೊಳ್ಳಲು ನನಗೆ ಇದೊಂದು ಚಾನ್ಸ್. ನಾನೇ ನಾಮಿನೇಟ್ ಆಗುವೆ'' ಎನ್ನುತ್ತಾ ರಾಕೇಶ್ ನ ಸೇಫ್ ಮಾಡಿದ ಅಕ್ಷತಾ ಡೇಂಜರ್ ಝೋನ್ ಗೆ ಬಂದರು.

ಡೇಂಜರ್ ಝೋನ್ ನಲ್ಲಿ ರವಿ
'ಬಿಗ್ ಬಾಸ್' ಮನೆಯಲ್ಲಿ ಇರಲು ಯಾರಿಗೆ ಅರ್ಹತೆ ಹೆಚ್ಚಿದೆ ಎನ್ನುವ ಬಗ್ಗೆ ರವಿ ಮತ್ತು ನಯನ ನಡುವೆ ವಾದ-ವಾಗ್ವಾದ ನಡೆಯಿತು. ಕೊನೆಗೆ ಜನರ ಮೇಲೆ ವಿಶ್ವಾಸ ಇಟ್ಟು ರವಿ ನಾಮಿನೇಟ್ ಆದರು.

ಡೀಲ್ ಮಾಡಿಕೊಂಡ ಆಂಡಿ
ಪ್ರತಿ ದಿನ ಹತ್ತು ನಿಮಿಷ ಜೊತೆಯಲ್ಲಿ ಕಳೆಯುವ ಡೀಲ್ ಗೆ ಕವಿತಾ ಗೌಡ ಒಪ್ಪಿಕೊಂಡ ಕಾರಣ ಮನಸ್ಸು ಇಲ್ಲದೇ ಇದ್ದರೂ ನಾಮಿನೇಟ್ ಆಗಲು ಆಂಡಿ ಮುಂದಾದರು. ಸುರಕ್ಷಾ ಕವಚವನ್ನ ಬಳಸದ ಆಂಡಿ ಈ ವಾರ ನಾಮಿನೇಟ್ ಆಗಿದ್ದಾರೆ.

ಸೇಫ್ ಆದ ಸೋನು ಪಾಟೀಲ್
'ಬಿಗ್ ಬಾಸ್' ಮನೆಯಲ್ಲಿ ಇರಲು ಸೋನುಗೆ ಹೆಚ್ಚು ಇಷ್ಟ ಇದೆ ಎನ್ನುತ್ತಾ ನಾಮಿನೇಟ್ ಆಗಲು ಮುರಳಿ ಮನಸ್ಸು ಮಾಡಿದರು. ಹೀಗಾಗಿ, ಸೋನು ಪಾಟೀಲ್ ಸೇಫ್ ಆದರು.

ಈ ಆರು ಜನರ ಪೈಕಿ ನಿಮ್ಮ ಮತ ಯಾರಿಗೆ.?
ರಶ್ಮಿ, ಧನರಾಜ್, ಅಕ್ಷತಾ, ರವಿ, ಆಂಡಿ ಮತ್ತು ಮುರಳಿ... ಈ ಆರು ಜನರ ಪೈಕಿ ಯಾರು ಔಟ್ ಆಗಬೇಕು.? ನೀವು ಯಾರಿಗೆ ಮತ ಹಾಕುತ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











