For Quick Alerts
  ALLOW NOTIFICATIONS  
  For Daily Alerts

  'ತಪ್ಪು ಮಾಡಿದ್ದೇನೆ ನಿಜ'' ಎಂದು ಒಪ್ಪಿಕೊಂಡ ನವೀನ್ ಸಜ್ಜು.! ಯಾಕೆ.?

  |
  Bigg Boss Kannada Season 6: .'ತಪ್ಪು ಮಾಡಿದ್ದೇನೆ ನಿಜ'' ಎಂದು ಒಪ್ಪಿಕೊಂಡ ನವೀನ್ ಸಜ್ಜು.! ಯಾಕೆ.?

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಗಾಯಕ ನವೀನ್ ಸಜ್ಜು ಸ್ಪರ್ಧಿ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ. 'ಬಿಗ್ ಬಾಸ್' ಮನೆಯಲ್ಲಿ ನಾಲ್ಕು ವಾರಗಳ ಕಾಲ ನಾಮಿನೇಟ್ ಆಗದೆ ನವೀನ್ ಸಜ್ಜು ಸೇಫ್ ಆಗಿದ್ದರು.

  ಹಾಗ್ನೋಡಿದ್ರೆ, ಎರಡನೇ ವಾರ ನವೀನ್ ಸಜ್ಜು ನಾಮಿನೇಟ್ ಆಗಬೇಕಿತ್ತು. ಆದ್ರೆ, ಅಂದು ಕ್ಯಾಪ್ಟನ್ ಆಗಿದ್ದ ಧನರಾಜ್, ನವೀನ್ ರನ್ನ ಡೇಂಜರ್ ಝೋನ್ ನಿಂದ ಬಚಾವ್ ಮಾಡಿದ್ದರು.

  ಕಳೆದ ವಾರದ ನಾಮಿನೇಷನ್ ಟಾಸ್ಕ್ ನಲ್ಲಿ ನವೀನ್ ಮತ್ತು ಧನರಾಜ್ ಪೈಕಿ ಒಬ್ಬರು ನಾಮಿನೇಟ್ ಆಗಬೇಕಿದ್ದಾಗ, ನವೀನ್ ಏನ್ನನ್ನೂ ಮಾತನಾಡಲಿಲ್ಲ.! ''ಧನರಾಜ್ ಒಮ್ಮೆ ನನ್ನನ್ನು ಉಳಿಸಿದ್ದಾರೆ. ಈ ಬಾರಿ ನಾನು ಅವರನ್ನು ಸೇಫ್ ಮಾಡಬೇಕು'' ಎಂಬ ಆಲೋಚನೆ ನವೀನ್ ತಲೆಯಲ್ಲಿ ಹೊಳೆಯಲೇ ಇಲ್ಲ.

  ಈ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪ್ರಶ್ನಿಸಿದಾಗ, ''ಹೌದು.. ನಾನು ತಪ್ಪು ಮಾಡಿದ್ದೇನೆ'' ಎಂದು ತಪ್ಪೊಪ್ಪಿಕೊಂಡರು ನವೀನ್ ಸಜ್ಜು. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ನವೀನ್ ಗಾಗಿ ವೂಟ್ ಬಿಗ್ ಪ್ರಶ್ನೆ

  ನವೀನ್ ಗಾಗಿ ವೂಟ್ ಬಿಗ್ ಪ್ರಶ್ನೆ

  ''ಕಳೆದ ವಾರ ನಾಮಿನೇಷನ್ ನಿಂದ ಧನರಾಜ್ ನಿಮ್ಮನ್ನ ಸೇಫ್ ಮಾಡಿದ್ದರು. ಈ ಬಾರಿ ಮಾತಿಗಾದರೂ, ಧನರಾಜ್ ಸೇಫ್ ಆಗಲಿ ಅಂತ ನೀವು ಹೇಳಲಿಲ್ಲ'' ಎಂಬುದು ವೂಟ್ ಬಿಗ್ ಪ್ರಶ್ನೆ. ಇದಕ್ಕೆ ಉತ್ತರ ಕೊಡಿ ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪ್ರಶ್ನಿಸಿದರು.

  ನವೀನ್ ತಲೆಯಲ್ಲಿ ಏನೂ ಓಡಲಿಲ್ಲ

  ನವೀನ್ ತಲೆಯಲ್ಲಿ ಏನೂ ಓಡಲಿಲ್ಲ

  ''ನಾಮಿನೇಷನ್ ಟಾಸ್ಕ್ ನಲ್ಲಿ ನಾನು ಸೈಲೆಂಟ್ ಆಗ್ಬಿಟ್ಟೆ. ಅಷ್ಟರಲ್ಲಿ ಧನರಾಜ್ ಅವರು ''ನನಗೆ ನಂಬಿಕೆ ಇದೆ, ನಾನೇ ನಾಮಿನೇಟ್ ಆಗುವೆ'' ಅಂತ ಹೇಳಿದರು. ಅವರು ಪಾಸಿಟೀವ್ ಆಗಿ ತೆಗೆದುಕೊಂಡಿದ್ದಾರೆ ಅಂತ ನನಗೆ ಅನಿಸಿತ್ತು. ಹೀಗಾಗಿ ಸುಮ್ಮನಾದೆ'' ಎಂದರು ನವೀನ್ ಸಜ್ಜು.

  ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!

  ಧನರಾಜ್ ಹೇಳಿದ್ದೇನು.?

  ಧನರಾಜ್ ಹೇಳಿದ್ದೇನು.?

  ''ನಾಮಿನೇಷನ್ ಟಾಸ್ಕ್ ನಲ್ಲಿ ಇಬ್ಬರೂ ನಿರ್ಧಾರ ಮಾಡಬೇಕಿತ್ತು. ನವೀನ್ ಏನೂ ಮಾತನಾಡಲಿಲ್ಲ. ಹೀಗಾಗಿ, ನಾನೇ ತಯಾರಿ ಇದ್ದೇನೆ ಅಂತ ಹೇಳಿದೆ. ಆಮೇಲೂ ನವೀನ್ ಏನೂ ಹೇಳಲಿಲ್ಲ. ಅದಕ್ಕೆ, ನಾನೇ ನಾಮಿನೇಟ್ ಆದೆ'' ಎಂದರು ಧನರಾಜ್.

  ಕವಿತಾ ಜೊತೆಗೆ ಅಂಟಿಕೊಂಡು ಇರುವುದೇ ಶಶಿ ಗೇಮ್ ಪ್ಲಾನ್ ಅಂತೆ.!ಕವಿತಾ ಜೊತೆಗೆ ಅಂಟಿಕೊಂಡು ಇರುವುದೇ ಶಶಿ ಗೇಮ್ ಪ್ಲಾನ್ ಅಂತೆ.!

  ತಪ್ಪೊಪ್ಪಿಕೊಂಡ ನವೀನ್

  ತಪ್ಪೊಪ್ಪಿಕೊಂಡ ನವೀನ್

  ''ಆಗ ನನಗೆ ಏನೂ ಹೊಳೆಯಲಿಲ್ಲ. ನಾನು ತಪ್ಪು ಮಾಡಿದ್ದೇನೆ ನಿಜ'' ಎಂದು ಸುದೀಪ್ ಮುಂದೆ ನವೀನ್ ತಪ್ಪೊಪ್ಪಿಕೊಂಡರು. ''ಸಂದರ್ಭ ಬಂದ್ರೆ ಮುಂದೆ ಧನರಾಜ್ ರನ್ನ ಸೇಫ್ ಮಾಡ್ತೀರಾ.?'' ಅಂತ ಸುದೀಪ್ ಕೇಳಿದಾಗ, ''ಖಂಡಿತ ಮಾಡುವೆ'' ಎಂದರು ನವೀನ್.

  'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ತ್ರಿಮೂರ್ತಿಗಳ ಮೇಲೆ ಎಲ್ಲರ ಕಣ್ಣು.!'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ತ್ರಿಮೂರ್ತಿಗಳ ಮೇಲೆ ಎಲ್ಲರ ಕಣ್ಣು.!

  ನಾಮಿನೇಟ್ ಆದ ನವೀನ್

  ನಾಮಿನೇಟ್ ಆದ ನವೀನ್

  ನಾಲ್ಕು ವಾರಗಳ ಕಾಲ ನಾಮಿನೇಷನ್ ಟೆನ್ಷನ್ ಇಲ್ಲದೆ ಹಾಯಾಗಿದ್ದ ನವೀನ್, ಐದನೇ ವಾರ ಡೇಂಜರ್ ಝೋನ್ ಗೆ ಬಂದಿದ್ದಾರೆ. ಈ ವಾರ ನವೀನ್ ಗೆ ನೀವೆಲ್ಲಾ ವೋಟ್ ಹಾಕ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Week 5: Voot big question for Naveen Sajju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X