ಬಿಕ್ಕಿಬಿಕ್ಕಿ ಅಳುತ್ತಲೇ 'ಬಿಗ್ ಬಾಸ್' ಮನೆಯಿಂದ ಹೊರನಡೆದ ಆನಂದ ಮಾಲಗತ್ತಿ
'ಬಿಗ್ ಬಾಸ್ ಕನ್ನಡ-3', 'ಬಿಗ್ ಬಾಸ್ ಕನ್ನಡ-4' ಮತ್ತು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಗಳನ್ನು ಮಿಸ್ ಮಾಡದೇ ನೋಡಿದ್ದ ಯಾದಗಿರಿ ಜಿಲ್ಲೆಯ ಆನಂದ ಮಾಲಗತ್ತಿ ಬೆಟ್ಟದಷ್ಟು ಆಸೆಗಳನ್ನು ಹೊತ್ತುಕೊಂಡು 'ಬಿಗ್ ಬಾಸ್' ಮನೆಗೆ ಬಂದಿದ್ದರು.
ಕಾಮನ್ ಮ್ಯಾನ್ ದಿವಾಕರ್ ತರಹ ಸದ್ದು ಮಾಡಬೇಕು.. 'ಒಳ್ಳೆ ಹುಡುಗ' ಪ್ರಥಮ್ ಮತ್ತು ಚಂದನ್ ಶೆಟ್ಟಿ ತರಹ 'ಬಿಗ್ ಬಾಸ್' ಗೆಲ್ಲಬೇಕು ಎಂದುಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟದ್ದ ಆನಂದ ಮಾಲಗತ್ತಿ ಆರನೇ ವಾರಕ್ಕೆ ಔಟ್ ಆಗಿದ್ದಾರೆ.
ಹಾಗ್ನೋಡಿದ್ರೆ, ಈ ವಾರ ಆನಂದ ಮಾಲಗತ್ತಿ 'ಬಿಗ್ ಬಾಸ್' ಸಂಚಿಕೆಗಳಲ್ಲಿ ಹೆಚ್ಚಾಗಿ ಕಾಣಿಸಲೇ ಇಲ್ಲ. ಸೈಲೆಂಟ್ ಆಗಿ ಸೈಡಿನಲ್ಲಿ ಇದ್ದ ಕಾರಣಕ್ಕೋ ಏನೋ, ಅವರಿಗೆ ವೀಕ್ಷಕರಿಂದ ಹೆಚ್ಚು ಮತಗಳು ಲಭ್ಯವಾಗಲಿಲ್ಲ.

ಮೊದಲ ವಾರದಿಂದಲೂ ಆನಂದ ಮಾಲಗತ್ತಿ ಬಹುತೇಕ ಡೇಂಜರ್ ಝೋನ್ ನಲ್ಲೇ ಇದ್ದರು. ಒಂದು ವಾರ ನಾಮಿನೇಷನ್ ನಿಂದ ಆನಂದ್ ನ ಕ್ಯಾಪ್ಟನ್ ಶಶಿ ಬಚಾವ್ ಮಾಡಿದ್ದರು. ಆದರೂ ವೀಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರುವಲ್ಲಿ ಆನಂದ ಮಾಲಗತ್ತಿ ವಿಫಲರಾದರು.
ಆನಂದನ ಜೊತೆಗೆ ಕವಿತಾ, ರಾಕೇಶ್, ಜಯಶ್ರೀ, ನವೀನ್ ಮತ್ತು ಸೋನು ಪಾಟೀಲ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಇತರರಿಗೆ ಹೋಲಿಸಿದರೆ, ಆನಂದನಿಗೆ ಕಮ್ಮಿ ವೋಟುಗಳು ಲಭ್ಯವಾಗಿದೆ. ಬಿಕ್ಕಿ ಬಿಕ್ಕಿ ಅಳುತ್ತಾ 'ಬಿಗ್ ಬಾಸ್' ಮನೆಯಿಂದ ಆನಂದ ಮಾಲಗತ್ತಿ ಹೊರಗೆ ಬಂದಿದ್ದಾರೆ.


Click it and Unblock the Notifications











