ಮಾತು ತಪ್ಪಿದಕ್ಕೆ ಸುದೀಪ್ ಮುಂದೆ ತಲೆ ಬಾಗಿ ಕ್ಷಮೆ ಕೇಳಿದ ಅಕ್ಷತಾ
Recommended Video

ಗೊತ್ತಿದ್ದೂ, ಗೊತ್ತಿದ್ದೂ ಅಕ್ಷತಾ ಹೀಗೆ ಮಾಡುತ್ತಿದ್ದಾರೋ.. ಅಥವಾ ಗೊತ್ತಿಲ್ಲದೇ ಹೀಗೆ ಆಡುತ್ತಿದ್ದಾರೋ.. ರಾಕೇಶ್ ಒತ್ತಾಯಕ್ಕೆ ಮಣಿಯುತ್ತಿದ್ದಾರೋ.. ಗೊತ್ತಿಲ್ಲ. ಒಟ್ನಲ್ಲಿ ಅಕ್ಷತಾ ಕಡೆಯಿಂದ ಎಡವಟ್ಟಿನ ಮೇಲೆ ಎಡವಟ್ಟು ಆಗುತ್ತಿದೆ.
''ಮನಸ್ಸು ಒಪ್ಪುತ್ತಿಲ್ಲ. ಆದರೂ ಚಾಲೆಂಜ್ ಆಗಿ ಸ್ವೀಕರಿಸುವೆ'' ಎನ್ನುತ್ತಲೇ ''ಒಂದು ವಾರ ರಾಕೇಶ್ ಜೊತೆಗೆ ಮಾತನಾಡಲ್ಲ'' ಎಂದು ಸುದೀಪ್ ಮುಂದೆ ಅಕ್ಷತಾ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳಲು ಆಕೆ ಪ್ರಯತ್ನಿಸಿದರು.
ಆದ್ರೆ, ಅಕ್ಷತಾ ಮನ ಪರಿವರ್ತನೆ ಮಾಡಲು ರಾಕೇಶ್ ಸರ್ಕಸ್ ಮಾಡಿದರು. ಕೊನೆಗೆ ಇಬ್ಬರ ಮಧ್ಯೆ ಎರಡ್ಮೂರು ಬಾರಿ ಕಿತ್ತಾಟ ಕೂಡ ನಡೆಯಿತು. 'ಮಿಡ್ ವೀಕ್ ಎವಿಕ್ಷನ್ ಪ್ರಾಂಕ್ ಟಾಸ್ಕ್' ಮುಗಿದ್ಮೇಲೆ ರಾಕೇಶ್-ಅಕ್ಷತಾ ಮರಳಿ ಒಂದಾದರು. ಈ ಬಗ್ಗೆ ಸುದೀಪ್ ಕೇಳಿದಾಗ, ವಾದ ಮಾಡದೇ ಇರಲು ಇಬ್ಬರೂ ನಿರ್ಧರಿಸಿದರು.
ಇಷ್ಟೆಲ್ಲಾ ಆದ್ಮೇಲೆ, ಕೊಟ್ಟ ಮಾತು ತಪ್ಪಿದ ಅಕ್ಷತಾ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಮುಂದೆ ಕ್ಷಮೆ ಕೇಳಿದರು. ಮುಂದೆ ಓದಿರಿ...

ಪ್ರಶ್ನೆ ಮಾಡಿದ ಸುದೀಪ್
''ಯಾವುದೇ ಟಾಸ್ಕ್ ಇದ್ದರೂ, ಪರ್ಫಾಮೆನ್ಸ್ ಕೊಡುವುದಿದ್ದರೂ ಮುನ್ನುಗ್ಗಿ ಚೆನ್ನಾಗಿ ಮಾಡುತ್ತೀರಾ. ಎಲ್ಲಾ ಓಕೆ, ಆದರೆ ಕಳೆದ ವಾರ ನೀವು ನಮಗೆ ಒಂದು ಮಾತು ಕೊಟ್ಟಿದ್ರಿ. ಅದನ್ನ ಉಳಿಸಿಕೊಳ್ಳಲಿಲ್ಲ'' ಎಂದು ಅಕ್ಷತಾಗೆ ಸುದೀಪ್ ಪ್ರಶ್ನಿಸಿದರು.

ಅಕ್ಷತಾ ಹೇಳಿದ್ದೇನು.?
''ಇಲ್ಲ ಸರ್... ನೀವು ದೊಡ್ಡವರು.. ಅನುಭವಸ್ಥರು'' ಎಂದು ಅಕ್ಷತಾ ಹೇಳಿದಾಗ, ''ಆ ಅನುಭವದ ಮೇಲೆ ಮಾತಾಡಿ ಹೇಳಿ ಹೋಗಿದ್ದು'' ಎಂದರು ಸುದೀಪ್. ಆಗ, ''ಕ್ಷಮಿಸಿ ಸರ್.. ಪ್ಲೀಸ್..'' ಎನ್ನುತ್ತಾ ಅಕ್ಷತಾ ಕ್ಷಮೆ ಕೇಳಿದರು.

ವಾದ ಮಾಡದಿರಲು ನಿರ್ಧರಿಸಿದ್ದ ಅಕ್ಷತಾ
ಪ್ರಾಂಕ್ ಟಾಸ್ಕ್ ಮುಗಿದ್ಮೇಲೆ, ಅಕ್ಷತಾ ಮತ್ತು ರಾಕೇಶ್ ಆತ್ಮೀಯವಾಗಿ ಹೆಚ್ಚು ಹರಟಿದ್ದರು. ಆಗ, 'ಕೊಟ್ಟ ಮಾತಿನ ಬಗ್ಗೆ' ಸುದೀಪ್ ಪ್ರಶ್ನೆ ಮಾಡಿದಾಗ, ವಾದ ಮಾಡದಿರಲು ಅಕ್ಷತಾ ಮತ್ತು ರಾಕೇಶ್ ನಿರ್ಧರಿಸಿದ್ದರು.

ಮುಂದಕ್ಕೆ ಹೇಗಿರ್ತಾರೆ ಅಕ್ಷತಾ.?
ಸುದೀಪ್ ಗೆ ಕೊಟ್ಟ ಮಾತನ್ನ ಅಕ್ಷತಾ ಮುರಿದರು. ಆದ್ರೀಗ, ಅಕ್ಷತಾಗೆ ಆಕೆಯ ತಾಯಿ ಕಡೆಯಿಂದ ವಾಯ್ಸ್ ಮೆಸೇಜ್ ಬಂದಿದೆ. ರಾಕೇಶ್ ರಿಂದ ದೂರ ಇರಲು ಆಕೆಯ ತಾಯಿ ಸೂಚಿಸಿದ್ದಾರೆ. ಅಮ್ಮನ ಹೇಳಿದಂತೆ ಪುತ್ರಿ ಅಕ್ಷತಾ ನಡೆದುಕೊಳ್ತಾರಾ.?


Click it and Unblock the Notifications











